ಗುಜರಾತ್ ಚುನಾವಣೆ ಭವಿಷ್ಯ ನುಡಿದ ರಾಹುಲ್ ಗಾಂಧಿ, ಆಪ್‌ಗೆ ತಳಮಳ, ಬಿಜೆಪಿಗೆ ಕಸಿವಿಸಿ!

Published : Oct 31, 2022, 05:51 PM IST
ಗುಜರಾತ್ ಚುನಾವಣೆ ಭವಿಷ್ಯ ನುಡಿದ ರಾಹುಲ್ ಗಾಂಧಿ, ಆಪ್‌ಗೆ ತಳಮಳ, ಬಿಜೆಪಿಗೆ ಕಸಿವಿಸಿ!

ಸಾರಾಂಶ

ಗುಜರಾತ್ ಚುನಾವಣೆಯಲ್ಲಿ ಗೆಲುವು ಯಾರಿಗೆ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣಗಳನ್ನು ನೀಡಿದ್ದಾರೆ. ಹಾಗಾದರೆ ರಾಹುಲ್ ಗಾಂಧಿ ಹೇಳಿದ ಭವಿಷ್ಯ ಹೇಗಿದೆ?

ತೆಲಂಗಾಣ(ಅ.31):  ಗುಜರಾತ್ ಚುನಾವಣೆಗೆ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಬಿಜೆಪಿ ತನ್ನ ಭದ್ರಕೋಟೆ ಬಲಪಡಿಸಿಕೊಳ್ಳಲು ಮುಂದಾಗಿದೆ. ಆಮ್ ಆದ್ಮಿ ಪಾರ್ಟಿ ಹೊಸ ಇತಿಹಾಸ ರಚಿಸಲು ಗುಜರಾತ್‌ನಲ್ಲಿ ಠಿಕಾಣಿ ಹೂಡಿದೆ. ಇತ್ತ ಕಾಂಗ್ರೆಸ್ ಗುಜರಾತ್ ಕಡೆ ಮುಖಮಾಡಿದ್ದು ಕಡಿಮೆ. ಆದರೆ ರಾಹುಲ್ ಗಾಂಧಿ ಗುಜರಾತ್ ಚುನಾವಣಾ ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣಗಳನ್ನು ನೀಡಿದ್ದಾರೆ. ಈ ಬಾರಿ ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಆಮ್ ಆದ್ಮಿ ಪಾರ್ಟಿ ಅಬ್ಬರ ಏನಿದ್ದರೂ ಕೇವಲ ಜಾಹೀರಾತಿನಲ್ಲಿ ಮಾತ್ರ ಎಂದಿದ್ದಾರೆ. ಇತ್ತ ಬಿಜೆಪಿ ಭದ್ರಕೋಟೆಯಾಗಿರುವ ಗುಜರಾತ್‌ಗೆ ಆಡಳಿತ ವಿರೋಧಿ ಅಲೆ ಇರುವುದರಿಂದ ಈ ಬಾರಿ ಕಾಂಗ್ರೆಸ್ ಸುಲಭವಾಗಿ ಗೆಲುವು ದಾಖಲಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ  ರಾಹುಲ್ ಗಾಂಧಿ ಈ ಭವಿಷ್ಯ ನುಡಿದಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿದ ಪಕ್ಷವಾಗಿದೆ.  ಗುಜರಾತ್‌ನಲ್ಲಿ ಈಗಾಲೇ ಕಾಂಗ್ರೆಸ್ ಬಲಿಷ್ಠವಾಗಿದೆ. ಆಮ್ ಆದ್ಮಿ ಪಾರ್ಟಿಯ ಎಲ್ಲಾ ಅಬ್ಬರ, ಘೋಷಣೆಗಳು ಕೇವಲ ಜಾಹೀರಾತಿಗೆ ಸೀಮಿತವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

 

ರಾಹುಲ್‌ ಗಾಂಧಿ ಕಾಲಿಟ್ಟ ಕಡೆಯಲ್ಲ ಕಾಂಗ್ರೆಸ್‌ಗೆ ಸೋಲು: ನಳಿನ್‌ ಕುಮಾರ್‌ ಕಟೀಲ್‌

ಆಮ್ ಆದ್ಮಿ ಪಾರ್ಟಿಗೆ ಗುಜರಾತ್‌ನಲ್ಲಿ ಯಾವುದೇ ಬೆಂಬಲ ಇಲ್ಲ. ಆದರೆ ಜಾಹೀರಾತಿನಲ್ಲಿ ಅರವಿಂದ್ ಕೇಜ್ರಿವಾಲ್ ಅಬ್ಬರಿಸುತ್ತಿದ್ದಾರೆ. ಕೇವಲ ಗಾಳಿಯಲ್ಲಿ ಮಾತ್ರ ಆಪ್‌ಗೆ ಬೆಂಬಲ ಇದೆ. ಗ್ರೌಂಡ್‌ನಲ್ಲಿ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇತ್ತ ಬಿಜೆಪಿಗೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಘೋಷಣೆಗಳನ್ನು, ಭರವಸೆಗಳನ್ನು ಮಾತ್ರ ನೀಡುತ್ತಿದೆ. ನಿರುದ್ಯೋಗ ಸಮಸ್ಯೆ ನಿವಾರಣೆ, ಗುಜರಾತ್‌ನಲ್ಲಿ ನಿಜವಾದ ಅಭಿವೃದ್ಧಿಗೆ ಯಾವುದೇ ಕೊಡುಗೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ತೆಲಂಗಾಣ ಯಾತ್ರೆ ವೇಳೆ ರಾಹುಲ್‌ ವೇಗದ ಓಟ!
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಭಾರತ ಜೋಡೋ ಯಾತ್ರೆಯ ವೇಳೆ ಭರ್ಜರಿ ರನ್‌ ಮಾಡಿದ್ದಾರೆ. ಯಾತ್ರೆ ತೆಲಂಗಾಣವನ್ನು ಪ್ರವೇಶಿಸಿದ 5ನೇ ದಿನ ಶಾಲಾ ಮಕ್ಕಳೊಂದಿಗೆ ನಡೆಯುತ್ತಿದ್ದ ರಾಹುಲ್‌ ಇದ್ದಕ್ಕಿದ್ದಂತೆ ತಮ್ಮ ವೇಗ ಹೆಚ್ಚಿಸಿ ಓಡಲು ಆರಂಭಿಸಿದರು. ಮುನ್ಸೂಚನೆ ಇಲ್ಲದೇ ರಾಹುಲ್‌ ಓಡುವುದನ್ನು ಆರಂಭಿಸಿದ್ದೇ ಅವರ ಭದ್ರತಾ ಸಿಬ್ಬಂದಿ ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರೇವಂತ್‌ ರೆಡ್ಡಿ ಹಾಗೂ ಇನ್ನಿತರರು ಅವರ ಹಿಂದೆ ದೌಡಾಯಿಸಬೇಕಾಯಿತು. ಈ ಹಿಂದೆ ಯಾತ್ರೆ ಕರ್ನಾಟಕದಲ್ಲಿ ಸಾಗುತ್ತಿದ್ದಾಗಲೂ ರಾಹುಲ್‌ ಇದೇ ರೀತಿ ಓಡಿ ಅಚ್ಚರಿ ಮೂಡಿಸಿದ್ದರು.

Bharat Jodo Yatra: ಕರ್ನಾಟಕದಲ್ಲಿ ರಾಹುಲ್‌ ಯಾತ್ರೆ ಫೋಟೋ ಶೋ..!

ರಾಹುಲ್‌ ಗಾಂಧಿ ಶಿರಡಿ ಸಾಯಿಬಾಬಾ ಇದ್ದಂತೆ: ರಾಬರ್ಚ್‌ ವಾದ್ರಾ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಅವರ ಭಾವ, ಉದ್ಯಮಿ ರಾಬರ್ಚ್‌ ವಾದ್ರಾ ಅವರು ಶಿರಡಿಯ ಆಧ್ಯಾತ್ಮಿಕ ಚಿಂತಕ ಸಾಯಿಬಾಬಾ ಅವರಿಗೆ ಹೋಲಿಸಿದ್ದಾರೆ. ಭಾನುವಾರ ಇಲ್ಲಿನ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿದ ವಾದ್ರಾ, ‘ಸಮಾನತೆಯನ್ನು ಭೋದಿಸಿದ ಆಧ್ಯಾತ್ಮಿಕ ನಾಯಕ ಸಾಯಿಬಾಬಾ ಅವರಂತೆ ರಾಹುಲ್‌ ಗಾಂಧಿಯವರ ಆಲೋಚನೆಗಳಿವೆ. ಬಾಬಾ ಆಶೀರ್ವಾದ ರಾಹುಲ್‌ ಮೇಲಿರಲಿ ಎಂದು ಆಶಿಸುತ್ತೇನೆ’ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ