ಗುಜರಾತ್‌ನ ಮೆಹ್ಸಾನ್‌ನಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದಾಗ ಬ್ಯಾಲೆನ್ಸ್ ತಪ್ಪಿ ಬಿದ್ದ ನಾಲ್ಕು ವರ್ಷದ ಬಾಲಕಿ ದಿಶಾ ಪಟೇಲ್ ಮೇಲೆ ಕಾರು ಹರಿದು ಸಾವನ್ನಪ್ಪಿದ್ದಾಳೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗುಜರಾತ್: ಸೈಕಲ್ ಓಡಿಸುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಬ್ಯಾಲೆನ್ಸ್ ತಪ್ಪಿ ರಸ್ತೆಗೆ ಬಿದ್ದ ವೇಳೆ ಆಕೆಯ ಮೇಲೆ ಟಾಟಾ ನೆಕ್ಸಾನ್ ಕಾರು ಹರಿದು ಬಾಲಕಿ ಅಪ್ಪಚ್ಚಿಯಾದಂತಹ ಭಯಾನಕ ಘಟನೆ ಗುಜರಾತ್‌ನ ಮೆಹ್ಸಾನ್‌ನಲ್ಲಿ ನಡೆದಿದೆ. ಈ ದುರಂತದಲ್ಲಿ 4 ವರ್ಷದ ದಿಶಾ ಪಟೇಲ್ ಎಂಬ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ. ಮೆಹ್ಸಾನ್‌ನ ಸ್ಪರ್ಶ್ ಹೌಸಿಂಗ್ ಸೊಸೈಟಿಯ ಕಾಂಪೌಂಡ್ ಒಳಗಡೆಯ ಈ ಘಟನೆ ನಡೆದಿದೆ. ಈ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.
ಬಾಲಕಿ ದಿಶಾ ಪಟೇಲ್ ಹೌಸಿಂಗ್ ಸೊಸೈಟಿಯ ಕಾಂಪೌಂಡ್ ಒಳಗಡೆ ಸೈಕಲ್ ಓಡಿಸುತ್ತಿದ್ದಾಗಲೇ ಈ ಘಟನೆ ನಡೆದಿದೆ. ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ಆಕೆ ಮೇಲೆಳುವ ಮೊದಲೇ ತಿರುವಿನಿಂದ ಬಂದ ಟಾಟಾ ನೆಕ್ಸಾನ್ ಕಾರು ಮಗುವಿನ ಮೇಲೆ ಹರಿದಿದೆ. ಕೂಡಲೇ ಕಾರು ನಿಲ್ಲಿಸಿದ ಚಾಲಕ ಹೊರಗೆ ಬಂದು ಮಗುವನ್ನು ನೋಡಿದ್ದಾನೆ. ಈ ಘಟನೆಯಿಂದ ಮಗುವನ್ನು ಕಳೆದುಕೊಂಡ ಪೋಷಕರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
ಜನ್ಮದಿನದ ಮುನ್ನಾ ದಿನವೇ ಗೇಟ್ ಕುಸಿದು ಬಿದ್ದು ಬಾಲಕನ ದುರಂತ ಸಾವು!
ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದಲ್ಲೂ ಇಂತಹದ್ದೇ ಘಟನೆಯೊಂದು ನಡೆದಿತ್ತು. ಇಲ್ಲಿನ ಕಾಸ್ಮೋಸ್ ಮಾಲ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಒಂದೂವರೆ ವರ್ಷದ ಮಗು ರುದ್ರಿಕಾ ಎಂಬಾಕೆಯ ಮೇಲೆ ಕಾರೊಂದು ಹರಿದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಳು. ಆಗಸ್ಟ್ 6 ರಂದು ರಾತ್ರಿ 10 ಗಂಟೆಗೆ ಈ ಘಟನೆ ನಡೆದಿತ್ತು. ಈ ದೃಶ್ಯವೂ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಮಗುವಿನ ಪೋಷಕರು ಶಾಪಿಂಗ್ ಟ್ರಾಲಿಯಿಂದ ವಸ್ತುಗಳನ್ನು ತೆಗೆದುಕೊಂಡು ಕಾರಿಗೆ ತುಂಬಿಸುವುದಕ್ಕಾಗಿ ಗಮನಿಸುತ್ತಿದ್ದ ವೇಳೆ ಪುಟ್ಟ ಮಗು ಅವರ ಕಣ್ತಪ್ಪಿಸಿ ಮುಂದೆಲ್ಲೋ ಹೋಗಿದ್ದು, ಕಾರಿನ ಚಕ್ರಕ್ಕೆ ಸಿಲುಕಿ ಪ್ರಾಣ ಬಿಟ್ಟಿದೆ. ಮಗುವಿನ ಕೂಗಾಟದ ನಂತರವಷ್ಟೇ ಮಗು ದೂರ ಸಾಗಿರುವುದು ಪೋಷಕರ ಗಮನಕ್ಕೆ ಬಂದಿದೆ. ಬಳಿಕ ಓಡಿ ಬಂದ ತಾಯಿ ಚಕ್ರಕ್ಕೆ ಸಿಲುಕಿದ್ದ ಮಗುವನ್ನು ಎಳೆದು ತೆಗೆದಿದ್ದಳು.
ಹೌಸಿಂಗ್ ಸೊಸೈಟಿಯ ಕಬ್ಬಿಣದ ಗೇಟ್ ಬಿದ್ದು ಬಾಲಕಿ ಸಾವು: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಟ್ಟಿನಲ್ಲಿ ಪುಟ್ಟ ಮಕ್ಕಳಿರುವ ಪೋಷಕರು ಬಹಳ ಜಾಗರೂಕರಾಗಿ ಇರಬೇಕು. ಸ್ವಲ್ಪ ಕಣ್ತಪ್ಪಿದ್ದರು ಮಕ್ಕಳು ತಮ್ಮ ಜೀವಕ್ಕೆ ಅಪಾಯ ಎಳೆದುಕೊಳ್ಳುತ್ತಾರೆ. ಅದರಲ್ಲೂ ಸೈಕಲ್ ಇರುವಂತಹ ಮಕ್ಕಳು, ಡಾಮರ್ ರಸ್ತೆಯಲ್ಲಿ ಸೈಕಲ್ ಓಡಿಸುವ ಮಕ್ಕಳು ಬಹಳ ಜಾಗರೂಕರಾಗಿರಬೇಕು.
જેમના ઘરમાં નાના ભુલકાઓ હોય એમના માટે લાલ બત્તી સમાન કિસ્સો છે..
સોસાયટી રસ્તાઓ પર વધતા વાહનો વચ્ચે બાળકોને એકલા મૂકવા ભારે પડી શકે..
મહેસાણામાં સ્પર્શ વીલા સોસાયટીમાં કાર નીચે આવી જતાં 4 વર્ષની બાળકીનું કમકમાટીભર્યું મોત
🙏🏻🙏🏻🙏🏻
શેર કરો જેથી વધુ માતાપિતા સુધી આ કિસ્સો પહોંચે.. pic.twitter.com/IzpwpsXoi6