ಮಾರ್ಚ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.96 ಲಕ್ಷ ಕೋಟಿ ತಲುಪಿದ್ದು, ಜಿಎಸ್‌ಟಿ ಇತಿಹಾಸದಲ್ಲಿ 2ನೇ ಗರಿಷ್ಠ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ.
ನವದೆಹಲಿ (ಏ.2): ಮಾರ್ಚ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು 1.96 ಲಕ್ಷ ಕೋಟಿ ತಲುಪಿದೆ. ಇದು ಜಿಎಸ್ಟಿ ನೀತಿ ಜಾರಿಯಾದ ಬಳಿಕ ದಾಖಲಾದ 2ನೇ ಗರಿಷ್ಠ ತೆರಿಗೆ ಪ್ರಮಾಣವಾಗಿದೆ. ಜೊತೆಗೆ ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಶೇ.9.9ರಷ್ಟು ಹೆಚ್ಚಳವಾಗಿದೆ.
ದೇಶೀಯ ವರ್ಗಾವಣೆಗಳ ಮೂಲಕ 1.49 ಲಕ್ಷ ಕೋಟಿ ರು., ಆಮದಿತ ಸರಕುಗಳಿಂದ 46,919 ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದೆ. ಈ ಪೈಕಿ ಕೇಂದ್ರೀಯ ಜಿಎಸ್ಟಿ 38145 ಕೋಟಿ ರು., ರಾಜ್ಯ ಜಿಎಸ್ಟಿ 49891 ಕೋಟಿ ರು., ಸಂಯೋಜಿತ ಜಿಎಸ್ಟಿ 95853 ಕೋಟಿ ರು. ಮತ್ತು ಸೆಸ್ ಮೂಲಕ 12253 ಕೋಟಿ ರು. ಸಂಗ್ರಹವಾಗಿದೆ.
ಇದನ್ನೂ ಓದಿ: ಏಪ್ರಿಲ್ 1ರಿಂದ ಬದಲಾವಣೆ; ಹಣ ಉಳಿಸಿಕೊಳ್ಳಲು ಪ್ರತಿ ಭಾರತೀಯ ತಿಳಿಯಬೇಕಾಗಿರೋ 6 ವಿಷಯಗಳಿವು!
ಇನ್ನು 31534 ಕೋಟಿ ರು. ಸಂಗ್ರಹದೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ, 13497 ಕೋಟಿ ರು.ನೊಂದಿಗೆ ಕರ್ನಾಟಕ 2ನೇ ಸ್ಥಾನ ಮತ್ತು 11795 ಕೋಟಿ ರು. ಜಿಎಸ್ಟಿ ಸಂಗ್ರಹದೊಂದಿಗೆ ತಮಿಳುನಾಡು 3ನೇ ಸ್ಥಾನದಲ್ಲಿದೆ.