ವಕ್ಫ್‌ ತಿದ್ದುಪಡಿ ಮಸೂದೆಯಿಂದ ಅನ್ಯಾಯವಿಲ್ಲ: ಕೇರಳ ಚರ್ಚ್‌ ಪತ್ರಿಕೆ ಸಂಸದರಿಗೆ ಆಗ್ರಹ

ಕೇರಳದ ಚರ್ಚ್ ಪತ್ರಿಕೆಯೊಂದು ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ನೀಡುವಂತೆ ಸಂಸದರಿಗೆ ಎಚ್ಚರಿಕೆ ನೀಡಿದೆ. ತಿದ್ದುಪಡಿಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ, ಬೆಂಬಲಿಸದಿದ್ದರೆ ಧಾರ್ಮಿಕ ಮೂಲಭೂತವಾದ ಇತಿಹಾಸದಲ್ಲಿ ದಾಖಲಾಗುತ್ತದೆ ಎಂದು ಹೇಳಿದೆ.

No injustice from Waqf Amendment Bill: Kerala church newspaper urges MPs rav

ತಿರುವನಂತಪುರಂ:ತಿದ್ದುಪಡಿ ಮಸೂದೆಯಿಂದ ಯಾರಿಗೂ ಅನ್ಯಾಯವಾಗಲ್ಲ. ಇದು ಸಂಸತ್ತಿನಲ್ಲಿ ಜಾತ್ಯಾತೀತ ತೆಯ ಕಠಿಣ ಪರೀಕ್ಷೆ. ರಾಜ್ಯದ ಸಂಸದರು ಇದಕ್ಕೆ ಬೆಂಬಲಿಸಬೇಕು. ಇಲ್ಲದಿದ್ದರೆ ಅವರ ಧಾರ್ಮಿಕ ಮೂಲಭೂತವಾದ ಇತಿಹಾಸದಲ್ಲಿ ದಾಖಲಾಗುತ್ತದೆ’ ಎಂದು ಕೇರಳದಲ್ಲಿ ಚರ್ಚ್‌ವೊಂದು ನಡೆಸುತ್ತಿರುವ ಪತ್ರಿಕೆಯೊಂದು ಎಚ್ಚರಿಸಿದೆ.

ದೀಪಿಕಾ ಎನ್ನುವ ದಿನಪತ್ರಿಕೆ ಕೇಂದ್ರ ಸರ್ಕಾರವು ಬಜೆಟ್‌ ಅಧಿವೇಶನದಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಮಂಡಿಸಲು ಮುಂದಾಗಿರುವ ಹೊತ್ತಲ್ಲಿ ತನ್ನ ಸಂಪಾದಕೀಯದಲ್ಲಿ ಈ ಬಗ್ಗೆ ಬರೆದುಕೊಂಡಿದೆ. ‘ವಕ್ಫ್‌ ತಿದ್ದುಪಡಿ ವಿಚಾರದಲ್ಲಿ ರಾಜಕೀಯ ಪಕ್ಷಗಳು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯವಿದು. ವಕ್ಫ್‌ ಕಾನೂನು ರದ್ದುಗೊಳಿಸುವುದು ಬೇಡಿಕೆಯಲ್ಲ. ಬದಲಾಗಿ ನಿಬಂಧನೆಗಳನ್ನು ತಿದ್ದುಪಡಿ ಮಾಡುವುದು ಬೇಡಿಕೆ. 

Latest Videos

ಇದನ್ನೂ ಓದಿ: ಕೇಂದ್ರದ ವಕ್ಫ್‌ ಬಿಲ್‌ ಮಂಡನೆ ಸ್ವಾಗತಾರ್ಹ

ಇದರಿಂದ ಮುಸ್ಲಿಂಮರಿಗೆ ಅನ್ಯಾಯವಾಗಲ್ಲ. ಈ ಕಾನೂನು ಸಾವಿರಾರು ಹಿಂದೂ, ಕ್ರೈಸ್ತ ಮತ್ತು ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸುತ್ತದೆ, ಕಾಂಗ್ರೆಸ್‌ ಮತ್ತು ಸಿಪಿಎಂ ಇದನ್ನು ಅರ್ಥೈಸಲು ವಿಫಲವಾದರೆ ಏನೂ ಹೇಳಲು ಸಾಧ್ಯವಿಲ್ಲ. ವಕ್ಪ್‌ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಜಾತ್ಯಾತೀ ತತೆಯ ಪರೀಕ್ಷೆ. ನೀವು ಅದನ್ನು ಬೆಂಬಲಿಸುತ್ತಿರೋ, ಇಲ್ಲವೋ, ಅದರ ಅಂಗೀಕಾರ ಬೇರೆ ವಿಷಯ, ಆದರೆ ನೀವು ಅದನ್ನು ಬೆಂಬಲಿಸದಿದ್ದರೆ ಕೇರಳ ಸಂಸದರ ಧಾರ್ಮಿಕ ಮೂಲಭೂತವಾದಿ ನಿಲುವು ಇತಿಹಾಸದಲ್ಲಿ ದಾಖಲಾಗುತ್ತದೆ’ ಎಂದು ಬರೆದಿದೆ

ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆಗೆ ಕ್ಯಾಥೋಲಿಕ್ ಬಿಷಪ್‌ಗಳ ಸಂಘಟನೆ ಬೆಂಬಲ: ನಾಳೆ ಲೋಕಸಭೆಯಲ್ಲಿ ಮಂಡನೆ

vuukle one pixel image
click me!