Wedding Trouble ಮದುವೆಗೆ ಧೋತಿ ಬದಲು ಶೆರ್ವಾನಿ ತೊಟ್ಟ ಮಧಮಗ, ಕುಟಂಬಸ್ಥರ ಬಡಿದಾಟ ನಾಲ್ವರಿಗೆ ಗಾಯ!

Published : May 09, 2022, 07:41 PM IST
Wedding Trouble ಮದುವೆಗೆ ಧೋತಿ ಬದಲು ಶೆರ್ವಾನಿ ತೊಟ್ಟ ಮಧಮಗ, ಕುಟಂಬಸ್ಥರ ಬಡಿದಾಟ ನಾಲ್ವರಿಗೆ ಗಾಯ!

ಸಾರಾಂಶ

ಬುಡಕಟ್ಟು ಸಂಪ್ರದಾಯದಂತೆ ಧೂತಿ ಉಡಲು ಹೇಳಿದ್ದ ವಧು ವಧು ಮಾತು ಧಿಕ್ಕರಿಸಿ ಶೆರ್ವಾನಿ ತೊಟ್ಟ ಮಧುಮಗ ಎರಡು ಕುಟಂಬಸ್ಥರ ನಡುವೆ ಹೊಡೆದಾಟ, ಪ್ರಕರಣ ದಾಖಲು  

ಮಧ್ಯಪ್ರದೇಶ(ಮೇ.09): ಮದುವೆಗೆ ವಧು ವರರ ಇದೇ ರೀತಿಯ ಉಡುಪು ತೊಡಬೇಕು, ಡಿಸೈನ್ ಹೀಗಿರಬೇಕು, ಕಲರ್ ಒಂದೇ ರೀತಿ ಇರಬೇಕು ಅನ್ನೋದು ಈಗ ಸಾಮಾನ್ಯ. ಇದಕ್ಕಾಗಿ ಮದುವೆಗೂ ಮೊದಲೇ ಹುಡುಗ ಹಾಗೂ ಹುಡುಗಿ ಸಾಕಷ್ಟು ತಯಾರಿ ಮಾಡಿಕೊಂಡಿರುತ್ತಾರೆ. ಇಲ್ಲೊಂದು ಮದುವೆಯಲ್ಲಿ ಇದೇ ಉಡುಗೆ ವಿಚಾರದಲ್ಲಿ ದೊಡ್ಡ ಹೊಡೆದಾಟವೇ ನಡೆದಿದೆ. ಧೋತಿ ಉಡುವ ಬದಲು ಸ್ಟೈಲ್ ಆಗಿ ಶೆರ್ವಾನಿ ತೊಟ್ಟ ಕಾರಣ ಎರಡೂ ಕುಟುಂಬಸ್ಥರ ನಡುವೆ ಮಾರಾಮಾರಿಯಾಗಿ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಂಗಬಯೆದಾ  ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬುಡಕಟ್ಟು ಸಮುದಾಯದ ಮದುವೆ. ಹುಡುಗಿ ಮನೆಯ ಸಂಪ್ರದಾಯದ ಪ್ರಕಾರ ಹುಡುಗ ಧೋತಿ ಉಡಬೇಕು. ಇದನ್ನು ಹುಡುಗಿ ಮೊದಲೇ ವರನಿಗೆ ಸೂಚಿಸಿದ್ದಳು. ಆದರೆ ಮದುವೆ ದಿನ ಹಾಗಾಲಿಲ್ಲ.

ಕುಮಾರಣ್ಣನಿಗೆ ವೋಟ್‌ ಹಾಕೋದೇ ನಮಗೆ ಮಾಡೋ ಆಶೀರ್ವಾದ: ಲಗ್ನ ಪತ್ರಿಕೆ ವೈರಲ್

ವರ ಧೋತಿ ಬದಲು ಶೆರ್ವಾನಿ ತೊಟ್ಟಿದ್ದಾನೆ. ಇದು ಹುಡುಗಿ ಕುಟುಂಬಸ್ಥರ ಕಣ್ಣು ಕಂಪಾಗಿಸಿದೆ. ಶೆರ್ವಾನಿ ತೊಟ್ಟಿದ್ದೇಕೆ ಎಂದು ಜಗಳ ಶುರುವಾಗಿದೆ. ಎರಡು ಕುಟಂಬಸ್ಥರ ನಡುವೆ ಮಾತಿ ಮಾತು ಬೆಳೆದಿದೆ. ಅಷ್ಟರಲ್ಲೇ ಹುಡುಗಿ ಕುಟುಂಸ್ಥರು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕೆರಳಿದ ಹುಡುಗನ ಕಡೆಯವರು ಬಡಿಗೆ, ಕೋಲುಗಳಿಂದ ದಾಳಿ ಮಾಡಿದ್ದಾರೆ. 

ಈ ಹೊಡೆದಾಟದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಹೊಡೆದಾಟ ಹೆಚ್ಚಾದಾಗ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಎರಡು ಕುಟುಂಬಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದುವೆ ಮುಹೂರ್ತ ಸಮಯದಲ್ಲಿ ಹೊಡೆದಾಟ ಬಡಿದಾಟ ಜೋರಾಗಿತ್ತು.

ಪ್ರಕರಣ ದಾಖಲಾದ ಕಾರಣ ವಧು ವರರು ಪೊಲೀಸ್ ಠಾಣೆ ಮೇಟ್ಟಿಲೇರಬೇಕಾಯಿತು. ಹೀಗಾಗಿ ದಿನವಿಡಿ ಪೊಲೀಸ್ ಠಾಣೆಯಲ್ಲೇ ಕಳೆದಿದ್ದಾರೆ. ಸಂಜೆ ವೇಳೆಗೆ ವಧು ವರರು ಮಂಟಪಕ್ಕೆ ಆಗಮಿಸಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. 

ನಿನಗೆ ನಾನು ನನಗೆ ನೀನು : ಮೂರಡಿ ಯುವಕನ ಮದ್ವೆ ಆದ 2.8 ಅಡಿಯ ಯುವತಿ

ಮಾಂಗಬೈಡಾ ಗ್ರಾಮದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಂದರಲಾಲ್‌ ಶೆರ್ವಾನಿ ಧರಿಸಿ ಮದುವೆಗೆ ಆಗಮಿಸಿದ್ದ. ಆದರೆ ವಧುವಿನ ಕಡೆಯವರು ಸಂಪ್ರದಾಯಕ್ಕೆ ತಕ್ಕಂತೆ ವರನಿಗೆ ಧೋತಿ-ಕುರ್ತಾ ಧರಿಸುವಂತೆ ತಿಳಿಸಿದರು. ಈ ಹಿನ್ನೆಲೆಯಲ್ಲೇ ವಧು ಹಾಗೂ ವರನ ಪಕ್ಷದ ಜನರ ನಡುವೆ ಮಾತಿಗೆ ಮಾತು ಬೆಳೆದು, ಜನರು ಕಲ್ಲು ತೂರಾಟ ನಡೆಸಿದ್ದಾರೆ. ಮದುವೆ ಮನೆಯಲ್ಲಿ ಭಾರೀ ಹಿಂಸಾಚಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಎರಡೂ ಕುಟುಂಬದವರು ಪರಸ್ಪರರ ವಿರುದ್ಧ ಪೊಲೀಸರಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಧುವಿನ ಕುಟುಂಬದವರು ನಡೆಸಿದ ಕಲ್ಲು ತೂರಾಟದಲ್ಲಿ ಕೆಲವು ಮಹಿಳೆಯರು ಗಾಯಗೊಂಡಿದ್ದಾಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಗಲಭೆ ಶಾಂತವಾದ ನಂತರ ಇಬ್ಬರ ವಿವಾಹ ನೆರವೇರಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮದುವೆಯಾಗಲು ಬಾಲಕಿಯನ್ನು ಕರೆದೊಯ್ದಿದ್ದ ಯುವಕನ ಬಂಧನ
ಪ್ರೀತಿ-ಪ್ರೇಮ ಎಂದು ತಲೆಕೆಡಿಸಿ ಮದುವೆಯಾಗಲು ಬಾಲಕಿಯನ್ನು ಕರೆದೊಯ್ದ ಘಟನೆ ಚಾಮರಾಜನಗರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.ಚಾಮರಾಜನಗರ ಅರಳೀಪುರ ಗ್ರಾಮದ ಪ್ರಕಾಶ್‌(31) ಬಂಧಿತ ಆರೋಪಿ. ಪ್ರೀತಿ-ಪ್ರೇಮ ಎಂದು ಪುಸಲಾಯಿಸಿ ಮದುವೆಯಾಗೋಣ ಬಾ ಎಂದು ನಂಬಿಸಿ ಪ್ರೌಢಶಾಲೆ ವಿದ್ಯಾರ್ಥಿನಿಯನ್ನು 3 ದಿನಗಳ ಹಿಂದೆ ಕರೆದೊಯ್ದಿದ್ದ ಎನ್ನಲಾಗಿದೆ. ಡೇರಿಗೆ ಹಾಲು ಹಾಕಲು ತೆರಳಿದ್ದ ವೇಳೆ ಮೊಮ್ಮಗಳು ಕಾಣೆಯಾಗಿರುವುದು ಗೊತ್ತಾಗಿ, ಅನುಮಾನದಿಂದ ಬಾಲಕಿಯ ಅಜ್ಜಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಪಿಐ ಬಿ.ಪುಟ್ಟಸ್ವಾಮಿ ತಮಿಳುನಾಡಿಗೆ ಕರೆದೊಯ್ದಿದ್ದ ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಹದಿನಾಲ್ಕು ವರ್ಷದ ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ಬಿಡಲಾಗಿದೆ.ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ