ಮಗನ ಮದುವೆಯಲ್ಲಿ ವಿಸ್ಕಿ ಗ್ಲಾಸ್ ತಲೆಯಲ್ಲಿಟ್ಟು ಜಮಾಲ್ ಹಾಡಿಗೆ ಕುಣಿದು ಕುಪ್ಪಳಿಸಿದ ತಾಯಿ!

By Chethan Kumar  |  First Published Jul 27, 2024, 12:40 PM IST

ಮಗನ ಮದುವೆ. ತಾಯಿ ಸಂಭ್ರಮ ಹೇಳತೀರದು. ವಿಸ್ಕಿ ಗ್ಲಾಸ್ ತಲೆಯಲ್ಲಿಟ್ಟು ಜನಪ್ರಿಯ ಜಮಾಲ್ ಕುಡು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಷ್ಟೇ ಅಲ್ಲ ಊ ಅಂಟವಾ ಸೇರಿದಂತೆ ಹಲವು ಹಾಡಿಗೆ ಹೆಜ್ಜೆ ಹಾಕಿ ಎಲ್ಲರನ್ನು ಮೋಡಿ ಮಾಡಿದ್ದಾರೆ. ತಾಯಿಯ ಡ್ಯಾನ್ಸ್ ಸ್ಟೆಪ್ಸ್ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ.
 


ಮದುವೆ ಸಮಾರಂಭದಲ್ಲಿ ಪಾರ್ಟಿ, ಡ್ಯಾನ್ಸ್ ಸಾಮಾನ್ಯ. ಇತ್ತೀಚೆಗೆ ವಧು ವರರ ಎಂಟ್ರಿಗೆ ಡ್ಯಾನ್ಸ್, ವೇದಿಕೆ ಮೇಲೆ ಸರ್ಪ್ರೈಸ್ ಡ್ಯಾನ್ಸ್ ಹೀಗೆ ಹಲವು ಕಾರ್ಯಕ್ರಮ ಆಯೋಜನೆಯಾಗಿರುತ್ತದೆ. ಇನ್ನು ಪೋಷಕರು ಡ್ಯಾನ್ಸ್‌ಗೆ ಹೆಜ್ಜೆ ಹಾಕುವುದು ಹೊಸದೇನಲ್ಲ. ಇದೀಗ ಮಗನ ಮದುವೆಯಲ್ಲಿ ತಾಯಿ, ಬಾಲಿವುಡ್‌ನ ಜಮಾಲ್ ಕುಡು ಹಾಡಿನ ದೃಶ್ಯ ರಿಕ್ರಿಯೇಟ್ ಮಾಡಿದ್ದಾರೆ. ತಲೆಯಲ್ಲಿ ವಿಸ್ಕಿ ಗ್ಲಾಸ್ ಇಟ್ಟು ಆ್ಯನಿಮಲ್ ಚಿತ್ರದ ಜಮಾಲ್ ಕುಡು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತಾಯಿ ಜೋಶ್, ಸಂಭ್ರಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ತಾಯಿ ಹೃದಯ ತುಂಬಿದ ಸಂಭ್ರಮ ಎಲ್ಲರನ್ನು ಮೋಡಿ ಮಾಡಿದೆ.

ಶುಭ ಮುಹೂರ್ತದಲ್ಲಿ ಮದುವೆ ಸಮಾರಂಭ ಆಯೋಜನೆಗೊಂಡಿದೆ. ಸಂಪ್ರದಾಯಗಳು ಮುಗಿದ ಬೆನ್ನಲ್ಲೇ ಪಾರ್ಟಿ ಶುರುವಾಗಿದೆ. ಅದ್ಧೂರಿ ಮದುವೆಯಲ್ಲಿ ವಿಶೇಷ ಡಿಜೆ ಸೇರಿದಂತೆ ಎಲ್ಲರನ್ನೂ ಕರೆಸಲಾಗಿತ್ತು. ಆಹ್ವಾನಿತ ಗಣ್ಯರು, ಕುಟುಂಬಸ್ಥರು, ಆಪ್ತರು ಪಾರ್ಟಿ ಮೂಡ್‌ಗೆ ಜಾರಿದ್ದರು. ವಧು ವರ ಜೋಶ್‌ಗಿಂತ ವರನ ತಾಯಿಯ ಜೋಶ್ ಎಲ್ಲಕ್ಕಿಂತ ಮಿಗಿಲಾಗಿತ್ತು. 

Tap to resize

Latest Videos

ಮದುವೆಯಲ್ಲಿ ಸಿಂಧೂರ ತೊಡಿಸುತ್ತಿದ್ದಂತೆ ಕುಸಿದು ಬಿದ್ದ ವಧು, ಬಳಿಕ ನಡೆದಿದ್ದೇ ಅಚ್ಚರಿ!

ಡಿಜೆ ಹಾಡು ಹಾಕುತ್ತಿದ್ದಂತೆ ತಾಯಿ ಕುಣಿದು ಕುಪ್ಪಳಿಸಿದ್ದಾರೆ. ಆ್ಯನಿಮಲ್ ಚಿತ್ರದ ಜಮಾಲ್ ಹಾಡನ್ನು ವರನ ತಾಯಿ ರಿಕ್ರಿಯೇಟ್ ಮಾಡಿದ್ದಾರೆ. ಬಾಬಿ ಡಿಯೋಲ್ ತಲೆ ಮೇಲೆ ವಿಸ್ಕಿ ಗ್ಲಾಸ್ ಇಟ್ಟ ಸಿಗ್ನೇಚರ್ ಸ್ಟೆಪ್ಸ್‌ನ್ನು ವರನ ತಾಯಿ ಮಾಡಿದ್ದಾರೆ. ತಲೆ ಮೇಲೊಂದು ವಿಸ್ಕಿ ಗ್ಲಾಸ್ ಇಟ್ಟು ಅದ್ಭುತವಾಗಿ ಸ್ಪೆಪ್ಸ್ ಹಾಕಿದ್ದಾರೆ. ತಾಯಿಯ ಡ್ಯಾನ್ಸ್‌ಗೆ ಆಹ್ವಾನಿತ ಗಣ್ಯರು ಚಪ್ಪಾಳೆ ಮೂಲಕ ಹುರಿದುಂಬಿಸಿದ್ದಾರೆ.

 

 

ತಾಯಿಯ ಜೋಶ್ ಇಷ್ಟಕ್ಕೆ ಮುಗಿದಿಲ್ಲ, ಜಮಾಲ್ ಕುಡು ಹಾಡಿನ ಬಳಿಕ ಪುಷ್ಪಾ ಚಿತ್ರದ ಊ ಅಂಟವಾ ಹಾಡಿಗೂ ಹೆಜ್ಜೆ ಹಾಕಿದ್ದಾರೆ. ಒಂಕಾರಾ ಚಿತ್ರದ ಬೀಡಿ ಹಾಡಿಗೂ ಹೆಜ್ಜೆ ಹಾಕಿದ್ದಾರೆ. ಡಿಜೆ ಮಿಕ್ಸರ್ ಹಾಡು ಬದಲಿಸುತ್ತಿದ್ದಂತೆ ತಾಯಿ ಹಾಡಿಗೆ ತಕ್ಕಂತೆ ಡ್ಯಾನ್ಸ್ ಮಾಡಿದ್ದಾರೆ. ಡಿಜಿ ಸುಕ್ಬೀರ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಿಮಗಾಗಿ ವರನ ತಾಯಿ ಅದ್ಭುತ ಡ್ಯಾನ್ಸ್ ಎಂದು ವಿಡಿಯೋ ಶೇರ್ ಮಾಡಿದ್ದಾರೆ.

ಈ ಮದುವೆ ಎಲ್ಲಿ ನಡೆದಿದೆ ಅನ್ನೋ ಕುರಿತು ಮಾಹಿತಿ ಲಭ್ಯವಿಲ್ಲ. ಆದರೆ ಈ  ವಿಡಿಯೋ ನೆಟ್ಟಿಗರನ್ನು ಇಂಪ್ರೆಸ್ ಮಾಡಿದೆ. ಅದ್ಬುತ ಕುಟುಂಬ, ಇದು ಮದುವೆಯ ನಿಜವಾದ ಸಂಭ್ರಮ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಪ್ರೀತಿ, ಸುಲುಗೆ, ಸ್ವಾತಂತ್ರ್ಯ, ಸಂಬಂಧ, ಗೌರವ, ಸಂಸ್ಕಾರ ಇದ್ದರೆ ಮಾತ್ರ ಇಷ್ಟು ಸಂಬ್ರಮಿಸಲು ಸಾಧ್ಯ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.

ವಧು ಕೆಳಕ್ಕೆ ಬಿದ್ದರೂ ಕ್ರೂರವಾಗಿ ಎಳೆದಾಡಿದ ವರನಿಗೆ ವೇದಿಕೆಯಲ್ಲೇ ಥಳಿಸಿದ ಅಣ್ಣ, ದೃಶ್ಯ ಸೆರೆ!
 

click me!