
ಗುಜರಾತ್(ಜು.27) ಗುಜರಾತ್ ಸಾಂಪ್ರದಾಯಿಕ ನೃತ್ಯ ಗರ್ಬಾ ಅತ್ಯಂತ ಜನಪ್ರಿಯ. ನವರಾತ್ರಿ ವೇಳೆ ಗರ್ಬಾ ಡ್ಯಾನ್ಸ್ ಮಾಡಲಾಗುತ್ತದೆ. ಮಾ ದುರ್ಗೆ ಆರಾಧನೆಗಳಲ್ಲಿ ಗರ್ಬಾ ಕೂಡ ಒಂದಾಗಿದೆ. ಗರ್ಬಾ ನೃತ್ಯದ ಹಲವು ವಿಡಿಯೋಗಳು ವೈರಲ್ ಆಗಿದೆ. ಆದರೆ ಕಾರ್ಯಕ್ರಮ ಒಂದರಲ್ಲಿ ಬಾಲಕರ ಗುಂಪು ಗರ್ಬಾ ನೃತ್ಯ ಮಾಡುತ್ತಿತ್ತು. ಈ ಪೈಕಿ ಓರ್ವ ಬಾಲಕ ಧ್ರುವ್ ರಾಥೋಡ್ ಏಕಾಏಕಿ ಮಾಡಿದ ಸ್ಪೆಪ್ಸ್ ಎಲ್ಲರನ್ನು ಚಕಿತಗೊಳಿಸಿದೆ. ಇದು ಸೂಪರ್ ಪವರ್ ಶಕ್ತಿಮಾನ್ ನೃತ್ಯ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.
ಧ್ರುವ್ ರಾಥೋಡ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಧ್ರುವ್ ರಾಥೋಡ್ ಹಾಗೂ ಇತರ ಬಾಲಕರ ಗುಂಪು ಸಾಂಪ್ರದಾಯಿಕ ಸ್ಪೆಪ್ಸ್ ಮೂಲಕ ಗರ್ಬಾ ನೃತ್ಯದಲ್ಲಿ ತೊಡಗಿತ್ತು. ಈ ನೃತ್ಯವನ್ನು ಕಾರ್ಯಕ್ರಮದಲ್ಲಿ ಹಲವರು ವೀಕ್ಷಿಸುತ್ತಾ ಹುರಿದುಂಬಿಸುತ್ತಿದ್ದರು. ಇದೇ ವೇಳೆ ಧ್ರುವ್ ರಾಥೋಡ್ ಗಿರಿಗಿರನೆ ತಿರುಗುತ್ತಾ ಹೆಜ್ಜೆ ಹಾಕಿದ್ದಾರೆ. ಧ್ರುವ್ ರಾಥೋಡ್ ಈ ಹೆಜ್ಜೆ ಹಾಕುತ್ತಿದ್ದಂತೆ ವೀಕ್ಷಕರು ಎದ್ದುು ನಿಂತು ಚಪ್ಪಾಳೆ ತಟ್ಟಿದ್ದಾರೆ, ಶಿಳ್ಳೆ ಮೂಲಕ ಅದ್ಬುತ ಡ್ಯಾನ್ಸ್ ಪ್ರತಿಭೆಯನ್ನು ಹುರಿದುಂಬಿಸಿದ್ದಾರೆ.
ಭಾರಿ ಮಳೆಯಿಂದ ಖುಷಿಯಾದ ರೈತ, ಜಲಾವೃತ ಪ್ರದೇಶದಲ್ಲಿ ಅಪ್ಪ ಮಗನ ಭರ್ಜರಿ ಸ್ಟೆಪ್ಸ್!
ಧ್ರುವ್ ರಾಥೋಡ್ ಗಾಳಿಯಲ್ಲಿ ತಿರುಗುತ್ತಾ ಸಾಗಿದ ಈ ವಿಡಿಯೋ ನಿಜಕ್ಕೂ ಅಚ್ಚರಿಯಾಗದೇ ಇರದು. ಫ್ಯಾನ್ ತಿರುಗುವ ರೀತಿಯಲ್ಲಿ ತಿರುಗುತ್ತಾ ಗರ್ಬಾ ನೃತ್ಯದಲ್ಲಿ ಸುತ್ತು ಹಾಕುವ ಸಾಂಪ್ರದಾಯಿಕ ಹೆಜ್ಜೆಯನ್ನು ಹೊಸ ರೀತಿಯಲ್ಲಿ ಮಾಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿದರು, ಸೂಪರ್‌ಮ್ಯಾನ್ ಶಕ್ತಿಮಾನ್ ತಿರುಗು ರೀತಿಯಲ್ಲಿ ಗಿರಕಿ ಹೊಡೆದಿದ್ದಾನೆ. ಇದು ಸೂಪರ್ ಪವರ್ ಇದ್ದವರಿಗೆ ಮಾತ್ರ ಸಾಧ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೆ ಕೆಲವರು ಇದು ಹೆಲಿಕಾಪ್ಟರ್ ಸ್ಪೆಪ್ಸ್ ಎಂದು ಬಣ್ಣಿಸಿದ್ದಾರೆ. ಇದನ್ನ ಧ್ರುವ್ ಗರ್ಬಾ ಸ್ಪೆಪ್ಸ್ ಎಂದು ನಾಮಕರಣ ಮಾಡಿದ್ದಾರೆ. ಈ ಸ್ಪೆಪ್ಸ್ ಮತ್ತೊಬ್ಬರು ಮಾಡಲು ಸಾಧ್ಯವಿಲ್ಲ ಎಂದು ಹೊಗಳಿದ್ದಾರೆ. ಇದೀಗ ಈ ವಿಡಿಯೋ ಬಾರಿ ವೈರಲ್ ಆಗಿದೆ. ಅದ್ಭುತ ಡ್ಯಾನ್ಸ್ ಮೂಲಕ ಇದೀಗ ಧ್ರುವ್ ರಾಥೋಡ್ ಭಾರಿ ಜನಪ್ರಿಯತೆ ಪಡೆದಿದ್ದಾನೆ.
ಗರ್ಬಾ ಗುಜರಾತಿ ಮೂಲವಾಗಿದ್ದರೂ ದೇಶಾದ್ಯಂತ ಆಚರಿಸಲಾಗುತ್ತದೆ. ನವರಾತ್ರಿ ವೇಳೆ ದುರ್ಗಾ ಮಾತೆ ಪೂಜೆ ಜೊತೆಗೆ ಗರ್ಬಾ ನೃತ್ಯ ಮಾಡಲಾಗುತ್ತದೆ. ಬೃಹತ್ ಸಂಖ್ಯಯಲ್ಲಿ ಗರ್ಬಾ ನೃತ್ಯ ಆಯೋಜಿಸಲಾಗುತ್ತದೆ. ನವರಾತ್ರಿ ವೇಳೆ ಮೈದಾನಗಳಲ್ಲಿ ಗರ್ಬಾ ನೃತ್ಯ ಆಯೋಜಿಸಲಾಗುತ್ತದೆ.
ಮಹಿಳೆಯ ತೌಬಾ ತೌಬಾ ಡ್ಯಾನ್ಸ್‌ಗೆ ದಂಗಾದ ಬಾಲಿವುಡ್, ಖುದ್ದು ವಿಕ್ಕಿ ಹೇಳಿದ್ರು ವಾವ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ