
ವಿವಾಹ ಮಹೋತ್ಸವದ ಪ್ರತಿ ಕ್ಷಣಗಳು ವಿಶೇಷ. ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುವ ಉತ್ಸಾಹ, ಕುಟುಂಬಸ್ಥರು, ಆಪ್ತರಲ್ಲಿ ಸಂಭ್ರಮ. ಒಟ್ಟು ಹಬ್ಬದ ವಾತಾವರಣ. ಆದರೆ ಇದರ ನಡುವೆ ನಡೆಯುವ ಹಲವು ಘಟನೆಗಳು ಭಾರಿ ಸದ್ದು ಮಾಡುತ್ತದೆ. ಹಲವು ಬಾರಿ ಸಣ್ಣ ಘಟನೆಗಳಿಂದ ಮದುವೆ ಮುರಿದು ಬೀಳುತ್ತದೆ. ಇದೀಗ ವಧು ಹಾಗೂ ವರ ಇಬ್ಬರೂ ವೇದಿಕೆಯಲ್ಲಿ ಕೈಯಲ್ಲಿ ಹಾರ ಹಿಡಿದು ನಿಂತಿದ್ದಾರೆ. ಇನ್ನೇನು ಬದಲಾಯಿಸಬೇಕು ಎನ್ನುಷ್ಟರಲ್ಲೇ ವೇದಿಕೆ ಹತ್ತಿದ ವರನ ಗೆಳೆಯ ಕಿವಿಯಲ್ಲಿ ಏನೋ ಊದಿದ್ದಾನೆ. ಹೆಚ್ಚೆಂದರೆ ಎರಡೇ ಶಬ್ದ. ಈ ಮಾತು ಕೇಳಿದ ಬೆನ್ನಲ್ಲೇ ವರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬಿದ್ದ ಘಟನೆ ನಡೆದಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಅಷ್ಟಕ್ಕೂ ವರನ ಒಂದೇ ಕ್ಷಣದಲ್ಲಿ ಪ್ರಜ್ಞೆ ತಪ್ಪಿ ಬೀಳುವಂತೆ ಮಾಡಿದ ಆ ಮಾತುಗಳೇನು? ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಚರ್ಚೆ ಜೋರಾಗಿದೆ. ಇದು ಆರೇಂಜ್ ಮ್ಯಾರೇಜ್. ಎರಡೂ ಕುಟುಂಬಸ್ಥರು ಪರಸ್ಪರ ಒಪ್ಪಿಗೆಯಿಂದ ಮದುವೆ ಫಿಕ್ಸ್ ಆಗಿತ್ತು. ಮದುವೆಗಾಗಿ ಭಾರಿ ತಯಾರಿಗಳು ನಡೆದಿತ್ತು.
ಮಗನ ಮದುವೆಯಲ್ಲಿ ವಿಸ್ಕಿ ಗ್ಲಾಸ್ ತಲೆಯಲ್ಲಿಟ್ಟು ಜಮಾಲ್ ಹಾಡಿಗೆ ಕುಣಿದು ಕುಪ್ಪಳಿಸಿದ ತಾಯಿ!
ಮದುವೆ ಹಿಂದಿನ ದಿನ ವರ ಹಾಗೂ ವಧುವಿನ ಮನೆಯಲ್ಲಿ ಸಂಪ್ರದಾಯದಂತೆ ಹಲವು ಕಾರ್ಯಕ್ರಮಗಳು ನಡೆದಿದೆ. ಮರುದಿನ ಬೆಳಗ್ಗೆ ಮೆರಣಿವೆಗೆ ಮೂಲಕ ವರ ಹಾಗೂ ವಧು ಮಂಟಪಕ್ಕೆ ಆಗಮಿಸಿದ್ದಾರೆ. ಬೆಳಗ್ಗೆಯಿಂದಲೇ ಕಾರ್ಯಕ್ರಮಗಳು ಶುರುವಾಗಿದೆ. ಕುಟುಂಬಸ್ಥರು, ಆಪ್ತರು, ಗೆಳೆಯರು ಮದುವೆಯಲ್ಲಿ ಹಾಜರಾಗಿದ್ದಾರೆ.
ವೇದಿಕೆಯಲ್ಲಿ ವರ ಹಾಗೂ ವಧು ಹಾರ ಹಿಡಿದು ನಿಂತಿದ್ದಾರೆ. ಹಿರಿಯರು ಹಾರ ಬದಲಾಸುವ ಮುನ್ನ ಒಂದು ನಿಮಿಷ ನಿಲ್ಲಲು ಸೂಚಿಸಿದ್ದಾರೆ. ಹೀಗಾಗಿ ಹಾರ ಹಿಡಿದು ನಿಂತಿದ್ದಾರೆ. ಇದೇ ವೇಳೆ ವೇದಿಕೆ ಕೆಳಗಿದ್ದ ವರನ ಗೆಳೆಯ ಆಗಮಿಸಿದ್ದಾನೆ. ವೇದಿಕೆ ಹತ್ತಿದ ಗೆಳೆಯ ವರನ ಕಿವಿಯಲ್ಲಿ ಏನೋ ಹೇಳಿದ್ದಾನೆ. ಗೆಳೆಯ ಹೆಚ್ಚು ಮಾತಾಡಿಲ್ಲ. ಹೆಚ್ಚೆಂದರೆ ಒಂದೆರಡು ಶಬ್ದ ಮಾತ್ರ. ಅಷ್ಟರಲ್ಲೇ ಏನಾಯ್ತೋ? ವರನ ಅಸ್ವಸ್ಥಗೊಂಡಿದ್ದಾನೆ.
ವರ ನಿಂತಲೇ ಮರ ಗಾಳಿಗೆ ಅತ್ತಿಂದಿತ್ತ ಅಲುಗಾಡುವಂತೆ ಆಗಿದ್ದಾನೆ. ನಿಲ್ಲಲು ಪ್ರಯತ್ನಿಸುತ್ತಿರುವಾಗಲೇ ತೀವ್ರ ಅಸ್ವಸ್ಥಗೊಂಡು ಹಿಂಭಾಗಕ್ಕ ಬಿದ್ದಿದ್ದಾನೆ. ಹಿಂಭಾಗದಲ್ಲಿಟ್ಟಿದ್ದ ಆಸನ ಬದಿಯಲ್ಲಿ ಬಿದ್ದಿದ್ದಾನೆ. ತಕ್ಷಣವೇ ಕುಟುಂಬಸ್ಥರು ಆಗಮಿಸಿ ವರನ ಎಬ್ಬಿಸಿದ್ದಾರೆ. ಆದರೆ ಸ್ಪಂದನೆ ಇಲ್ಲ, ನೀರು ಕುಡಿಸಿದ್ದಾರೆ. ಸದ್ಯ ಗೆಳೆಯ ಹೇಳಿದ ಅಷ್ಚು ಪ್ರಖರ ಮಾತುಗಳೇನು? ಅನ್ನೋ ಕುತೂಹಲ ಹಾಗೆ ಉಳಿದುಕೊಂಡಿದೆ.
ಮದುವೆಯಲ್ಲಿ ಸಿಂಧೂರ ತೊಡಿಸುತ್ತಿದ್ದಂತೆ ಕುಸಿದು ಬಿದ್ದ ವಧು, ಬಳಿಕ ನಡೆದಿದ್ದೇ ಅಚ್ಚರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ