ಫುಟ್‌ಪಾತ್‌ನಲ್ಲಿ ಬಂದ ವ್ಯಕ್ತಿಗೆ ಸೆಟೆದು ನಿಂತು ಗ್ರಹಚಾರ ಬಿಡಿಸಿದ ಅಜ್ಜಿ; ಭೇಷ್‌ ಎಂದ ನಟಿ ಸುಹಾಸಿನಿ!

Published : Feb 13, 2026, 10:49 AM ISTUpdated : Feb 13, 2026, 10:54 AM IST
Grandma stops man from riding a scooter in footpath

ಸಾರಾಂಶ

Grandma Video: ಪುರುಷನೋರ್ವ ಫುಟ್‌ಪಾತ್‌ನಲ್ಲಿ ಸ್ಕೂಟಿಯಲ್ಲಿ ಬಂದಿದ್ದನು. ಇದನ್ನು ವೃದ್ಧೆಯೋರ್ವರು ತಡೆದಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ಪುರುಷನಿಗೆ ವೃದ್ಧೆ ಬುದ್ಧಿ ಕಲಿಸಿದ್ದಾರೆ.

ಫುಟ್‌ಪಾತ್‌ನಲ್ಲಿ ಸ್ಕೂಟಿ ಓಡಿಸಿಕೊಂಡು ಬರುತ್ತಿದ್ದ ಪುರುಷನನ್ನು ಅಜ್ಜಿಯೋರ್ವರು ತಡೆದ ಘಟನೆ ಕೇರಳದಲ್ಲಿ ನಡೆದಿದೆ. ಹೌದು, ಈ ವಿಡಿಯೋ ಈಗ ವೈರಲ್‌ ಆಗ್ತಿದ್ದು, ನಟಿ ಸುಹಾಸಿನಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾಮೆಂಟ್‌ ಮಾಡಿದ್ದಾರೆ.

ಏನಿದು ಘಟನೆ?

ಫುಟ್‌ಪಾತ್‌ನಲ್ಲಿ ವೃದ್ಧೆಯೋರ್ವರು ನಡೆದುಕೊಂಡು ಬರುತ್ತಿದ್ದರು. ಟ್ರಾಫಿಕ್‌ ಜಾಸ್ತಿ ಇದೆ ಎಂದು ಕೆಲವರು ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿಕೊಂಡು ಬಂದಿದ್ದಾರೆ. ಆಗ ಆ ಅಜ್ಜಿ ಅದನ್ನು ತಡೆದಿದ್ದಾರೆ. ಪುರುಷ ಎಷ್ಟೇ ಧಮ್ಕಿ ಹಾಕಿದರೂ ಕೂಡ ಆ ಲೇಡಿ ಮಾತ್ರ ಫುಟ್‌ಪಾತ್‌ನಲ್ಲಿ ಒಂದು ಹೆಜ್ಜೆ ಮುಂದೆ ಹೋಗಲು ಬಿಟ್ಟಿಲ್ಲ, ಆ ಪುರುಷನ ಮುಂದೆ ಅವರು ಸೆಟೆದು ನಿಂತಿದ್ದಾರೆ. ಈ ವಿಡಿಯೋದಲ್ಲಿ ಆಡಿಯೋ ಇದೆ. ಆದರೆ ಅಜ್ಜಿ ಏನು ಮಾಡಲು ಹೊರಟಿದ್ದಾರೆ? ಅವರ ಉದ್ದೇಶ ಏನು ಎನ್ನೋದು ಗೊತ್ತಾಗುವುದು. ಅಷ್ಟೇ ಅಲ್ಲದೆ ಆ ಲೇಡಿ ತನ್ನ ಮೊಬೈಲ್‌ ಫೋನ್‌ ತಗೊಂಡು ರೆಕಾರ್ಡ್‌ ಮಾಡಲು ರೆಡಿಯಾಗುತ್ತಾರೆ. ಆಗ ಆ ಪುರುಷ ಫುಟ್‌ಪಾತ್‌ನಿಂದ ಹೊರಗಡೆ ಹೋಗುತ್ತಾರೆ.

ಬುದ್ಧಿ ಕಲಿಸಲು ಹಿಂದೇಟು ಹಾಕಿಲ್ಲ!

ಇನ್ನು ಇದನ್ನು ಯುವಕನೋರ್ವ ಒಂದು ಕಟ್ಟಡದ ಮೇಲೆ ನಿಂತು ವಿಡಿಯೋ ಮಾಡಿದ್ದಾನೆ. ಅದನ್ನು ಕೊನೆಯಲ್ಲಿ ಅಜ್ಜಿ ನೋಡಿ ಒಂದು ಮುಗುಳ್ನಕ್ಕು ಥಂಬ್ಸ್‌ಅಪ್‌ ಮಾಡುತ್ತಾರೆ. ಈ ವಿಡಿಯೋ ನೋಡಿ ಅನೇಕರು ಖುಷಿಪಟ್ಟಿದ್ದಾರೆ. ವಯಸ್ಸಾದರೂ ಕೂಡ ಅಜ್ಜಿಯೇ ಆ ಪುರುಷನಿಗೆ ನಿಯಮ ಏನು ಎಂದು ಹೇಳಬೇಕಾಯ್ತು, ಬುದ್ಧಿ ಕಲಿಸಲು ಹಿಂದೇಟು ಹಾಕಲಿಲ್ಲ ಎಂದು ಖುಷಿಪಟ್ಟಿದ್ದಾರೆ. ನಟಿ ಸುಹಾಸಿನಿ ಸೇರಿ ಅನೇಕರು ಈ ವಿಡಿಯೋವನ್ನು ನೋಡಿ ಕಾಮೆಂಟ್‌ ಮಾಡಿದ್ದಾರೆ.

ಜನರು ಹೇಳಿದ್ದೇನು?

ಕೇರಳದ ಸಾಕ್ಷರತೆ ಬಗ್ಗೆ ಟೀಕೆ ಮಾಡುವವರು ಯಾಕೆ ಶಿಕ್ಷಣ ಬೇಕು ಎಂದು ಎಚ್ಚೆತ್ತುಕೊಳ್ಳಬೇಕು. ಶಿಕ್ಷಣ ಅಂದರೆ ಕೇವಲ ಮಾರ್ಕ್ಸ್‌ ಅಲ್ಲ, ಬದಲಾಗಿ ನಾಗರಿಕ ಪ್ರಜ್ಞೆ, ಜವಾಬ್ದಾರಿ, ತಪ್ಪಿದ್ದಾಗ ಪ್ರಶ್ನೆ ಮಾಡುವ ಧೈರ್ಯವೂ ಕೂಡ ಆಗಿದೆ. ಆ ಮಹಿಳೆಗೆ ಫುಟ್‌ಪಾತ್‌ ಇರೋದು ವಾಹನಗಳು ಓಡಾಡೋಕೆ ಆಗಲ್ಲ, ಬದಲಾಗಿ ಪಾದಚಾರಿಗಳಿಗೆ ಎಂದು ಗೊತ್ತಿದೆ, ಆದರೆ ಆ ಪುರುಷನಿಗೆ ಗೊತ್ತಿಲ್ಲ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ನಟಿ ಸುಹಾಸಿನಿ ಕೂಡ ಇವರು ರಿಯಲ್‌ ಹೀರೋ ಎಂದಿದ್ದಾರೆ. ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live ಬಾಂಗ್ಲಾದೇಶದಲ್ಲಿ ಬಿಎನ್‌ಪಿ ಪಕ್ಷಕ್ಕೆ ಅಭೂತಪೂರ್ವ ಗೆಲುವು: ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
ರಾಹುಲ್ ಗಾಂಧಿ ಸಂಸತ್ ಸದಸ್ಯತ್ವಕ್ಕೆ ಮತ್ತೆ ಕುತ್ತು? ಬಿಜೆಪಿಯ ಹೊಸ ನಿರ್ಣಯ