
ನವದೆಹಲಿ (ಡಿ.16): ಪಂಜಾಬ್‌ನ ಅಮೃತ್‌ಸರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಸ್ಕೂಟರ್‌ಗೆ ಜಿಪಿಎಸ್ ಟ್ರ್ಯಾಕರ್ ಹಾಕುವ ಮೂಲಕ ದಾಂಪತ್ಯ ಮೋಸ ಪತ್ತೆ ಮಾಡಿದ್ದಾನೆ. ಆತನ ಹೆಂಡತಿ ಹೋಟೆಲ್‌ನ ರೂಮ್‌ನಲ್ಲಿ ಲವರ್ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ತನ್ನ 15 ವರ್ಷದ ಸಂಸಾರದಲ್ಲಿ ಆಕೆ ಹೀಗೆ ಪರಪುರಷನ ಜೊತೆ ರೆಡ್‌ಹ್ಯಾಂಡ್ ಆಗಿ ತನ್ನ ಕೈಯಲ್ಲೇ ಸಿಕ್ಕಿ ಬಿದ್ದಿದ್ದು ಇದು ಎರಡನೇ ಬಾರಿ ಎಂದು ಗಂಡ ಕಣ್ಣೀರಿಟ್ಟಿದ್ದಾನೆ. 2018ರಲ್ಲಿ ಆಕೆ ಇದೇ ರೀತಿ ಇನ್ನೊಬ್ಬ ಪುರುಷರ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದಳು. ಆಗ ಮೊದಲ ಬಾರಿಗೆ ನಾನು ವಂಚನೆಗೆ ಒಳಗಾಗಿದ್ದೇನೆ ಎಂದನಿಸಿತ್ತು ಎಂದು ಪತಿ ರವಿ ಗುಲಾಟಿ ಕಣ್ಣೀರಿಟ್ಟಿದ್ದಾರೆ.
ಮೊದಲ ಬಾರಿ ತಪ್ಪು ಮಾಡಿದಾಗ ಕ್ಷಮಿಸಿದ್ದೆ. ಸಮಯ ಹಾಗೂ ಪಶ್ಚಾತ್ತಾಪ ನನ್ನ ಹೆಂಡತಿಯನ್ನು ಬದಲಾಯಿಸಬಹುದು ಎಂದು ನಂಬಿದ್ದೆ. ಅದಲ್ಲದೆ, ಚಿಕ್ಕ ಮಕ್ಕಳು ಇದ್ದ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡು ಆಕೆಯೊಂದಿಗೆ ಸಂಸಾರ ಸಾಗಿಸಿದ್ದೆ ಎಂದು ರವಿ ಹೇಳಿದ್ದಾರೆ.
ಆದರೆ, ಈಗ ಮತ್ತೊಮ್ಮೆ ಇಂಥ ಘಟನೆ ಆಗಿದೆ. ನನ್ನ ಪತ್ನಿ ಮಧ್ಯಾಹ್ನ ಮನೆಯಿಂದ ಹೊರಹೋಗಿದ್ದಳು. ಎಷ್ಟೇ ಬಾರಿ ಫೋನ್ ಕಾಲ್ ಮಾಡಿದರೂ ಅದಕ್ಕೆ ಆಕೆ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ರವಿ ಹೇಳಿದ್ದಾರೆ. ದೀರ್ಘಕಾಲದಿಂದಆಕೆಯ ಬಗ್ಗೆ ಅನುಮಾನ ಇದ್ದ ಕಾರಣಕ್ಕೆ ನಾನು ಆಕೆಯ ಸ್ಕೂಟರ್‌ನಲ್ಲಿ ಅವಳಿಗೆ ಗೊತ್ತಿಲ್ಲದಂತೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದೆ. ಆಕೆಯ ಲೊಕೇಷನ್ ಅಲರ್ಟ್ ಸಿಕ್ಕಾಗ, ಅದರ ಸಿಗ್ನಲ್‌ಅನ್ನು ಅನುಸರಿಸಿ ರವಿ ಹೋಗಿದ್ದಾನೆ. ಈ ವೇಳೆ ಅದು ಒಂದು ಹೋಟೆಲ್‌ನ ಬಳಿ ತೋರಿಸಿದೆ. ಈ ವೇಳೆ ಪತ್ನಿ ಪರ ಪುರುಷನ ಜೊತೆ ಇರೋದನ್ನು ರೆಡ್‌ಹ್ಯಾಂಡ್ ಆಗಿ ಪತ್ತೆ ಮಾಡಿದೆ ಎಂದು ಹೇಳಿಕೊಂಡಿದ್ದಾನೆ.
ವೈರಲ್ ವಿಡಿಯೋದಲ್ಲಿ ರವಿ ಗುಲಾಟಿ ತನ್ನ ನೋವನ್ನು ಹಂಚಿಕೊಂಡಿದ್ದಾನೆ. "ನಾನು 2010 ಏಪ್ರಿಲ್ 25ರಂದು ಹಿಮಾನಿ ಅವರನ್ನು ವಿವಾಹವಾದೆ. 2018 ರಲ್ಲಿ, ನನ್ನ ಹೆಂಡತಿ ಹೋಟೆಲ್‌ನಲ್ಲಿ ಪರ ಪುರುಷನ ಜೊತೆ ಇದ್ದಿದ್ದನ್ನು ಕಣ್ಣಾರೆ ನೋಡಿದ್ದೆ.ಆ ಸಮಯದಲ್ಲಿ, ನಾನು ಅವಳಿಗೆ ಎಚ್ಚರಿಕೆ ನೀಡಿದ್ದೆ ಮತ್ತು ಅವಳ ಹೆತ್ತವರಿಗೆ ಕರೆ ಮಾಡಿ ವಿಚಾರ ತಿಳಿಸಿದೆ. ಅವರು ಇಲ್ಲಿಗೆ ಬಂದು ವಿಷಯಗಳನ್ನು ವಿವರಿಸಿದರು ಮತ್ತು ನನ್ನ ಹೆಂಡತಿ ಮತ್ತು ಅವಳ ಹೆತ್ತವರು ಇಬ್ಬರೂ ಕ್ಷಮೆಯಾಚಿಸಿದರು. ನಮಗೆ ಚಿಕ್ಕ ಮಕ್ಕಳಿದ್ದ ಕಾರಣ ನಾನು ಅವಳನ್ನು ಕ್ಷಮಿಸಿದೆ ಮತ್ತು ತಪ್ಪುಗಳು ಆಗುವುದು ಸಾಮಾನ್ಯ ಎಂದು ನಾನು ಭಾವಿಸಿದ್ದೆ. ಇಂದು, ನನ್ನ ಹೆಂಡತಿ ಮಧ್ಯಾಹ್ನ 3 ರಿಂದ 3:30 ರ ಸುಮಾರಿಗೆ ಮನೆಯಿಂದ ಹೊರಟುಹೋದಳು. ನಾನು ಅವಳಿಗೆ 15-20 ಬಾರಿ ಕರೆ ಮಾಡಿದೆ, ಆದರೆ ಅವಳು ಉತ್ತರಿಸಲಿಲ್ಲ. ನಾನು ಅವಳ ಆಕ್ಟಿವಾದಲ್ಲಿ ಜಿಪಿಎಸ್ ಟ್ರ್ಯಾಕರ್ ಅನ್ನು ಈ ಹಿಂದೆ ಅಳವಡಿಸಿದ್ದೆ. ನಾನು ಜಿಪಿಎಸ್ ಪರಿಶೀಲಿಸಿದೆ, ನನ್ನ ಅಂಗಡಿಯನ್ನು ಮುಚ್ಚಿ ಸ್ಕೂಟರ್ ಇರುವ ಸ್ಥಳವನ್ನು ಅನುಸರಿಸಿದೆ. ಅದರ ಲೊಕೇಷನ್ ಈ ಹೋಟೆಲ್ ತೋರಿಸಿತು. ಇಲ್ಲಿ ಮತ್ತೊಮ್ಮೆ ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದೆ. ನನಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಅನುಮಾನವಿತ್ತು, ಅದಕ್ಕಾಗಿಯೇ ಅವಳು ಎಲ್ಲಿಗೆ ಹೋಗುತ್ತಿದ್ದಾಳೆಂದು ತಿಳಿಯಲು ನಾನು ಜಿಪಿಎಸ್ ಅನ್ನು ಅಳವಡಿಸಿದ್ದೆ' ಎಂದು ಹೇಳಿದ್ದಾರೆ.
ರವಿ ಅವರ ತಂದೆ ಪರ್ವೇಜ್ ಗುಲಾಟಿ ಅವರು, ಈ ವಿಷಯವು ವರ್ಷಗಳಿಂದ ನಡೆಯುತ್ತಿತ್ತು ಎಂದು ಹೇಳಿದ್ದಾರೆ. ಸೊಸೆಯನ್ನು ಸುಮಾರು ಐದು ರಿಂದ ಏಳು ವರ್ಷಗಳ ಹಿಂದೆಯೂ ಹೀಗೆ ಹಿಡಿದಿದ್ದೆವು. ನಂತರ ಎರಡೂ ಕುಟುಂಬಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿ ಮಾಡಿದ್ದವು ಎಂದು ಅವರು ಹೇಳಿದ್ದಾರೆ. ಆ ಸಮಯದಲ್ಲಿ, ಅವರ ಮನೆಯವರು ಕ್ಷಮೆ ಯಾಚಿಸಿದ್ದು ಮಾತ್ರವಲ್ಲದೆ ಶಾಸಕರ ನಿವಾಸದಲ್ಲಿ ವಿಷಯ ಇತ್ಯರ್ಥ ಮಾಡಲಾಯಿತು. ಹಾಗಾಗಿ ಆಕೆಯ ಜೀವನದಲ್ಲಿ ಇದು ಮುಗಿದ ಅಧ್ಯಾಯ ಎಂದು ಭಾವಿಸಿದ್ದೆವು ಎಂದಿದ್ದಾರೆ.
ಆ ಭರವಸೆ ಈಗ ಹುಸಿಯಾಗಿದೆ ಎಂದು ಪರ್ವೇಜ್ ಹೇಳಿದರು. ಅವರ ಪ್ರಕಾರ, ಅವರ ಸೊಸೆ ರವಿ ಜೊತೆ ಇನ್ನು ಮುಂದೆ ವಾಸಿಸಲು ಬಯಸುವುದಿಲ್ಲ ಮತ್ತು ತನ್ನ ಹೆತ್ತವರ ಮನೆಗೆ ಹೋಗಲು ಇಚ್ಚಿಸಿದ್ದಾಳೆ ಅನ್ನೋದು ಸ್ಪಷ್ಟವಾಗಿದೆ. ಹೋಟೆಲ್‌ನಲ್ಲಿ ಸೊಸೆಯ ಜೊತೆ ಇದ್ದ ವ್ಯಕ್ತಿಯನ್ನು ಕೆಲ ದಿನಗಳ ಹಿಂದೆ ಅವರ ಕುಟುಂಬ ಸಹೋದರ ಎಂದು ಪರಿಚಯಿಸಿತ್ತು. ಆತ ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದ ಮತ್ತು ಅವರ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದ ಎಂದು ಆರೋಪ ಮಾಡಿದ್ದಾರೆ.
ಈ ವಿಷಯವನ್ನು ಚರ್ಚಿಸಿ ಪರಿಹರಿಸಲು ಕುಟುಂಬವು ಆಕೆಯ ಪೋಷಕರನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದೆ, ಆದರೆ ಅವರ ಪ್ರಯತ್ನಗಳು ವ್ಯರ್ಥವಾಗಿವೆ ಎಂದು ಪರ್ವೇಜ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ