
ಬಿಜೆಪಿ ಹೊಗಳಿದ ಕಾಂಗ್ರೆಸ್
ಕೊರೋನಾ ತಡೆಗಟ್ಟಲು ಸರ್ಕಾರ ಸರ್ವಸನ್ನದ್ದವಾಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ ಬೆನ್ನಲ್ಲೇ, ಸೋಂಕು ತಡೆಗೆ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರ ಶ್ಲಾಘನೀಯ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೇಂದ್ರ ಸರ್ಕಾರವನ್ನು ಲೋಕಸಭೆಯಲ್ಲಿ ಹಾಡಿ ಹೊಗಳಿದ್ದಾರೆ. ಅಲ್ಲದೇ ಇದರಲ್ಲಿ ರಾಜಕೀಯ ಸಲ್ಲದು ಎಂದಿದ್ದಾರೆ.
ಊಟಿ ಬಿಡಲು 24 ಗಂಟೆ ಗಡುವು
ವ್ಯಾಧಿ ಹೆಚ್ಚುವ ಭೀತಿಯಿಂದ ರಾಜ್ಯದ ಎಲ್ಲಾ ಪ್ರವಾಸೋದ್ಯಮ ತಾಣಗಳನ್ನು ತಮಿಳುನಾಡು ಸರ್ಕಾರ ಮಾಚ್‌ರ್ 31ರ ವರೆಗೆ ಮುಚ್ಚಿದೆ. ಊಟಿಯಲ್ಲಿರುವ ಪ್ರವಾಸಿಗರನ್ನು 24 ಗಂಟೆಯೊಳಗೆ ಸ್ಥಳ ಬಿಡಲು ಸೂಚಿಸಲಾಗಿದೆ.
ರಾಜ್‌ಘಾಟ್‌ಗೆ ಪ್ರವಾಸಿಗರ ನಿಷೇಧ
ಕೋವಿಡ್ ಭಯದಿಂದ ಮಹಾತ್ಮ ಗಾಂಧೀಜಿ ಸಮಾಧಿ ರಾಜ್‌ಘಾಟ್‌ಗೆ ಮಂಗಳವಾರದಿಂದಲೇ ಮುಂದಿನ ಆದೇಶದ ವರೆಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ.
ರಾಜಸ್ಥಾನಲ್ಲಿ 50 ಜನರ ಮಿತಿ
ಕೋವಿಡ್-19 ತಡೆಗಟ್ಟಲು ದೆಹಲಿ ಮಾದರಿಯನ್ನು ರಾಜಸ್ಥಾನ ಅನುಸರಿಸಿದ್ದು, ಮಾಚ್‌ರ್ 31ರ ವರೆಗೆ 50ಕ್ಕೂ ಹೆಚ್ಚು ಮಂದಿ ಒಟ್ಟು ಸೇರುವುದನ್ನು ನಿಷೇಧಿಸಿ ಸಿಎಂ ಅಶೋಕ್ ಗೆಹ್ಲೋಟ್ ಆದೇಶಿಸಿದ್ದಾರೆ.
ಪ್ರವಾಸರಿಗಲ್ಲ ತಾಜ್ ಮಹಲ್
ವಿಶ್ವ ವಿಖ್ಯಾತ ಪ್ರೇಮ ಸೌಧ ತಾಜ್ ಮಹಲ್ ಹಾಗೂ ರಾಜ್ಯದ ಇತರೆ ಪ್ರವಾಸಿ ತಾಣಗಳನ್ನು ಮಾಚ್‌ರ್ 31ರ ವರೆಗೆ ಬಂದ್ ಮಾಡಿ ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವಾಲಯ ಆದೇಶ ಹೊರಡಿಸಿದೆ.
3 ದೇಶಗಳಿಗೆ ನಿರ್ಬಂಧ
ಆಷ್ಘಾನಿಸ್ತಾನ, ಫಿಲಿಪ್ಪೀನ್ಸ್ ಹಾಗೂ ಮಲೇಷ್ಯಾ ನಾಗರಿಕರಿಗೆ ಭಾರತ ಪ್ರವೇಶಿಸದಂತೆ ತಕ್ಷಣದಿಂದಲೇ ನಿರ್ಬಂಧ ಜಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ