ಸಿಂದೂರದ ಬಗ್ಗೆ ಖರ್ಗೆಗೆ ಸುದೀರ್ಘ ಅವಕಾಶ ಕೊಟ್ಟ ಧನ್‌ಕರ್‌ಗೆ ಬ್ರೇಕ್‌ ಹಾಕಿತಾ ಸರ್ಕಾರ?

Published : Jul 22, 2025, 12:12 PM ISTUpdated : Jul 22, 2025, 12:54 PM IST
Jagdeep Dhankhar

ಸಾರಾಂಶ

ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರ ಹಠಾತ್‌ ರಾಜೀನಾಮೆ ದೆಹಲಿ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಈ ಬೆಳವಣಿಗೆ ನಡೆದಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

2014 ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ 11 ವರ್ಷಗಳ ನಂತರ ಮೊದಲ ಬಾರಿಗೆ ಸರ್ಕಾರ ಮತ್ತು ಉಪ ರಾಷ್ಟ್ರಪತಿಗಳ ನಡುವಿನ ತಿಕ್ಕಾಟ ರಾಜೀನಾಮೆ ನೀಡುವ ಹಂತದ ವರೆಗೆ ಹೋಯಿತಾ? ಎನ್ನುವ ಪ್ರಶ್ನೆ ನಿನ್ನೆ ತಡ ರಾತ್ರಿ 9.35 ಕ್ಕೆ ರಾಷ್ಟ್ರ ಪತಿ ದ್ರೌಪದಿ ಮುರ್ಮು ಅವರಿಗೆ ಜಗದೀಪ್ ಧನ್ ಕರ್ ಉಪ ರಾಷ್ಟ್ರಪತಿ ಸ್ಥಾನಕ್ಕೆ ಸಲ್ಲಿಸಿದ ರಾಜೀನಾಮೆಯ ನಂತರ ಉದ್ಭವವಾಗಿದೆ. ಇಲ್ಲಿಯವರೆಗೂ ಸರ್ಕಾರದ ಕಡೆಯಿಂದಾಗಲಿ ಅಥವಾ ರಾಷ್ಟ್ರಪತಿ ಕಚೇರಿ ಇಂದಾಗಲಿ ಒಂದು ಅಧಿಕೃತ ಹೇಳಿಕೆ ಬರದೇ ಇರುವುದು ಧನ್ ಕರ್ ರಾಜೀನಾಮೆ ಸರ್ಕಾರಕ್ಕೂ ಒಂದು ಆಶ್ಚರ್ಯ ತಂದಿದೆ ಮತ್ತು ಸರ್ಕಾರ ಇದನ್ನು ನಿರ್ವಹಿಸುವುದು ಹೇಗೆ ಎಂಬುದರ ಬಗ್ಗೆ ಏನನ್ನು ಯೋಚಿಸಿಲ್ಲ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.

ರಾಷ್ಟ್ರಪತಿಗಳಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ವೈದ್ಯಕೀಯ ಕಾರಣಕ್ಕೆ ರಾಜೀನಾಮೆ ಎಂದು ಜಗದೀಪ್ ಧನ್ ಕರ್ ಹೇಳಿಕೊಂಡರು ಕೂಡ ನಿನ್ನೆ ಸೋಮವಾರ ಅರೋಗ್ಯವಾಗಿ ರಾಜ್ಯಸಭಾ ಸದನದ ಕಲಾಪ ನಿರ್ವಹಿಸಿದ ಉಪರಾಷ್ಟ್ರಪತಿಗಳಿಗೆ ಏಕಾ ಏಕೀ ರಾಜೀನಾಮೆ ಕೊಡಬೇಕು ಅನ್ನಿಸಿದ್ದು ತೆರೆಯ ಹಿಂದೆ ಏನೇನು ನಡೆದಿದೆ ಎಂಬ ಚರ್ಚೆ ಹುಟ್ಟು ಹಾಕಿದ್ದು ಹೊಸ ಹೊಸ ಚರ್ಚೆಗೂ ನಾಂದಿ ಹಾಡುತ್ತಿದೆ.

ತೆರೆಯ ಹಿಂದೆ ಏನು ನಡೆದಿರಬಹುದು? 

ಕಾರಣ 1.ಅಲಹಾಬಾದ್‌ ಹೈ ಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ತನಿಖೆಗೆ ವಿಪಕ್ಷ ಗಳ ಸಂಸದರು ಕೊಟ್ಟಿದ್ದ ಅರ್ಜಿ ಸ್ವೀಕರಿಸಿದ್ದು ಸರ್ಕಾರ ಮತ್ತು ಧನ್ ಕರ್ ನಡುವೆ ತಿಕ್ಕಾಟಕ್ಕೆ ಕಾರಣ ಆಯಿತಾ? 

2.ಸರ್ಕಾರವನ್ನು ಕಿಂಚಿತ್ತೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿಪಕ್ಷ ಸಂಸದರು ಕೊಟ್ಟ ಅರ್ಜಿ ಸ್ವೀಕರಿಸಿ ಸೇಕ್ರೆಟರಿ ಜೆನೆರಲ್ ಗೆ ನಿರ್ದೇಶನ ಕೊಟ್ಟಿದ್ದು ಸರ್ಕಾರದ ಅಸಮಾಧಾನಕ್ಕೆ ಕಾರಣ ಆಯಿತಾ?

3.ಬಿಜೆಪಿ ಸಂಸದರು ಕೂಡ judges enquiry act ಪ್ರಕಾರ ನ್ಯಾಯಮೂರ್ತಿಗಳ ವಿರುದ್ಧ ತನಿಖೆಗೆ ಅರ್ಜಿಗೆ ಸಹಿ ಹಾಕಿದರು ಕೂಡ ವಿಪಕ್ಷಗಳ ಅರ್ಜಿ ಸಲ್ಲಿಸಿದ್ದು ಸರ್ಕಾರದ ಬೇಸರಕ್ಕೆ ಕಾರಣ ಆಯಿತಾ?

4.  ಆಪರೇಷನ್ ಸಿಂದೂರ ವಿಷಯದಲ್ಲಿ ಖರ್ಗೆ ಅವರಿಗೆ ಸರ್ಕಾರದ ಜೊತೆ ಚರ್ಚಿಸದೆ ಸುದೀರ್ಘ ಮಾತಿಗೆ ಅವಕಾಶ ಕೊಟ್ಟಿದ್ದು ಸಂಸಾದೀಯ ಇಲಾಖೆ ಮತ್ತು ಉಪರಾಷ್ಟ್ರ ಪತಿ ನಡುವೆ ಕಿಡಿ ಹಚ್ಚಿತಾ?

5. ನ್ಯಾಯಮೂರ್ತಿಗಳ ವಿರುದ್ಧ ತನಿಖೆ ಕೋರಿ ಸಲ್ಲಿಸಿದ್ದ ವಿಪಕ್ಷಗಳ ಅರ್ಜಿಯನ್ನು ಸ್ವೀಕರಿಸಿದ್ದು ಶಾಸಕಾಂಗ ನ್ಯಾಯಾಂಗದ ನಡುವೆ ತಿಕ್ಕಾಟ ಕ್ಕೆ ಕಾರಣ ಆಗಬಹುದು ಎಂದು ಸರ್ಕಾರ ಉಪರಾಷ್ಟ್ರ ಪತಿ ಗಳ ರಾಜೀನಾಮೆಗೆ ಒತ್ತಡ ಹೇರಿತಾ?

6. ನಿನ್ನೆ ಮಧ್ಯಾಹ್ನ 4.30 ಕ್ಕೆ ನಡೆದ ರಾಜ್ಯಸಭೆಯ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸಭಾ ನಾಯಕ ಜೆ ಪಿ ನಡ್ದಾ ಮತ್ತು ಸಂಸಾದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗೈರು ಆಗಿ ಸರ್ಕಾರ ತನ್ನ ಬೇಸರವನ್ನು ಸೂಚಿಸಿತಾ?

ಇತಿಹಾಸ ದಲ್ಲಿ ಏನೇನು ಆಗಿತ್ತು?: ಇಲ್ಲಿಯವರೆಗೆ ಇಬ್ಬರು ಉಪ ರಾಷ್ಟ್ರಪತಿ ಗಳು ಅವಧಿಗೂ ಮುನ್ನ ರಾಜೀನಾಮೆ ಸಲ್ಲಿಸಿದ್ದರು. ಆದರೆ ಅದು ಟರ್ಮ್ ಎಂಡ್ ನಲ್ಲಿ ರಾಷ್ಟ್ರಪತಿ ಚುನಾವಣೆಗೆ ನಿಲ್ಲಲು.

  • ವಿ ವಿ ಗಿರಿ
  • ಆರ್ ವೆಂಕಟರಾಮ

ಆದರೆ ಜಗದೀಪ್ ಧನ್ ಕರ್ ಅವಧಿ ಆಗಸ್ಟ್ 2027 ರ ವರೆಗೆ ಇತ್ತು 2 ವರ್ಷ ಒಂದು ತಿಂಗಳು ಮೊದಲೇ ರಾಜೀನಾಮೆ ಕೊಟ್ಟಿದ್ದು ಮುಂದೆ ಯಾರು ಎಂಬ ಪ್ರಶ್ನೆಗೆ ಮುನ್ನುಡಿ ಬರೆದಿದೆ

ಮುಂದೇನು?: ಸಂವಿಧಾನದ ಪ್ರಕಾರ ಉಪ ರಾಷ್ಟ್ರಪತಿ ಚುನಾವಣೆಯನ್ನು ಇಷ್ಟೇ ದಿನಗಳಲ್ಲಿ ಅರ್ಥಾತ್ 6 ತಿಂಗಳಲ್ಲೇ ನಡೆಸಬೇಕು ಅಂತೇನು ನಿಯಮ ಇಲ್ಲ

ಅಭ್ಯರ್ಥಿಗಳು ಯಾರು?

1 ನಿತೀಶ್ ಕುಮಾರ್‌: ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ಪ್ರತ್ಯೇಕ ವಾಗಿ ಸ್ಪರ್ಧೆಸಿ ಎನ್‌ಡಿಎ ವೋಟು ಒಡೆಯುವ ಆತಂಕ ಇರುವಾಗ ನಿತೀಶ್ ರನ್ನು ಉಪರಾಷ್ಟ್ ಪತಿ ಮಾಡಿ ಬಿಜೆಪಿ ಯ ಹಿಂದುಳಿದ ವರ್ಗದ ನಾಯಕ ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುವುದು.ಆದರೆ ನಿತೀಶ್ ಒಪ್ಪುತ್ತಾರಾ ದೊಡ್ಡ ಪ್ರಶ್ನೆ.

2. ಶಶಿ ತರೂರ್: ಕೇರಳದ ಚುನಾವಣೆಗಳು ಮುಂದಿನ ವರ್ಷ ಇರುವಾಗ ಕಾಂಗ್ರೆಸ್ ಸಂಸದ ಶಶಿ ತರೂರ್ ರನ್ನು ಉಪ ರಾಷ್ಟ್ರಪತಿ ಮಾಡಿ ಲಾಭ ಪಡೆದು ಕೊಳ್ಳುವುದು ಜೊತೆಗೆ ಕಾಂಗ್ರೆಸ್ ಗೆ ಮುಜುಗರ ಉಂಟು ಮಾಡುವುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

PN
About the Author

Prashant Natu

ಮೂಲತಃ ಉತ್ತರ ಕರ್ನಾಟಕದ ಹುಬ್ಬಳ್ಳಿ. ಆಟೋ ಮೊಬೈಲ್ ಎಂಜಿನಿಯರಿಂಗ್ ಶಿಕ್ಷಣದ ನಂತರ ಬದಲಾಯಿತು ದಿಕ್ಕು. ರಾಜಕೀಯ ವರದಿಗಾರಿಕೆ ಮಾಡಲೆಂದೇ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ವಿದ್ಯುನ್ಮಾನ ಮಾಧ್ಯಮ ಸ್ನಾತಕೋತ್ತರ ಅಧ್ಯಯನ. ದಿಲ್ಲಿಯಲ್ಲಿ ಸುವರ್ಣ ನ್ಯೂಸ್ ವರದಿಗಾರನಾಗಿ ಆಯ್ಕೆ. 18 ವರ್ಷಗಳಿಂದಲೂ ಒಂದೇ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ರಾಜಕೀಯ ವರದಿಗಾರಿಕೆ ಮತ್ತು ನಿಖರ ವಿಶ್ಲೇಷಣೆಗಳಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲ, ರಾಷ್ಟ್ರೀಯ ಮಾಧ್ಯಮದಲ್ಲೂ ಹೆಸರುವಾಸಿ. 2015ರಿಂದ ಕನ್ನಡ ಪ್ರಭ ಪತ್ರಿಕೆಯಲ್ಲಿ 'ಇಂಡಿಯಾ ಗೇಟ್' ಎಂಬ ದಿಲ್ಲಿ ರಾಜಕೀಯದ ಒಳ ಸುಳಿವು ಅಂಕಣ ಪ್ರಕಟವಾಗುತ್ತಿದೆ. ಸುವರ್ಣ ನ್ಯೂಸ್‌ನ 'ಮಾರ್ನಿಂಗ್ ನ್ಯೂಸ್ ಅವರ್' ಸಂಜೆ 'ಪಾರ್ಟಿ ರೌಂಡ್ಸ್' 'ಲೆಫ್ಟ್ ರೈಟ್ ಸೆಂಟರ್' ಕಾರ್ಯಕ್ರಮಗಳು ಹೆಚ್ಚು ಪ್ರಸಿದ್ಧ.Read More...
Read more Articles on
click me!

Recommended Stories

ಗಿಗ್‌ ಕಾರ್ಮಿಕರ ಸೇವಾ ಭದ್ರತೆಗೆ ಕೇಂದ್ರ ನಿಯಮ
India Latest News Live: ಉಮರ್ ಪರ ಅಮೆರಿಕ ಸಂಸದೆ ಜೊತೆ ರಾಹುಲ್ ಗಾಂಧಿ; ಬಿಜೆಪಿ ಕಿಡಿ