
ದೆಹಲಿಯಿಂದ ಕೋಲ್ಕತ್ತಾದತ್ತ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ಅನಾಹುತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಟೇಕಾಫ್‌ಗಾಗಿ ವಿಮಾನವೂ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಗಂಟೆಗೆ 155 ಕಿಲೋ ಮೀಟರ್ ವೇಗದಲ್ಲಿ ಸಾಗುತ್ತಿದ್ದಾಗಲೇ ಈ ತಾಂತ್ರಿಕ ದೋಷ ಕಂಡು ಬಂದಿದ್ದು, ಕೂಡಲೇ ಸಮಯಪ್ರಜ್ಞೆ ಮೆರೆದ ಪೈಲಟ್ ವಿಮಾನದ ಟೇಕಾಫ್ ಬ್ರೇಕ್ ಬಟನ್ ಒತ್ತಿ ಟೇಕಾಫ್ ನಿಲ್ಲಿಸಿದ್ದು, ವಿಮಾನವನ್ನು ಮಹಾ ದುರಂತವೊಂದರಿಂದ ಪಾರು ಮಾಡಿದ್ದಾರೆ.
ಈ ಏರ್ ಇಂಡಿಯಾ ವಿಮಾನವೂ ನಿನ್ನೆ ಸಂಜೆ ದೆಹಲಿ ವಿಮಾನ ನಿಲ್ದಾಣದಿಂದ 5.30ಕ್ಕೆ ಕೋಲ್ಕತ್ತಾಗೆ ಟೇಕಾಫ್ ಆಗಬೇಕಿತ್ತು. ಆದರೆ ವಿಮಾನ ರನ್‌ವೇಯಲ್ಲಿ ವೇಗವಾಗಿ ಓಡುತ್ತಿದ್ದಾಗಲಷ್ಟೇ ವಿಮಾನದಲ್ಲಿ ಪೈಲಟ್‌ಗೆ ತಾಂತ್ರಿಕ ದೋಷ ಕಂಡು ಬಂದಿದೆ. ಹೀಗಾಗಿ ವಿಮಾಣ 155 ಕಿಲೋ ಮೀಟರ್ ವೇಗದಲ್ಲಿ ಟೇಕಾಫ್‌ಗಾಗಿ ಸಾಗುತ್ತಿದ್ದರೂ ಪೈಲಟ್ ಬ್ರೇಕ್ ಒತ್ತಿ ವಿಮಾನವನ್ನು ದೊಡ್ಡ ಅಪಾಯದಿಂದ ತಪ್ಪಿಸಿದ್ದಾರೆ.
ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು(Standard Operating Procedure)ಅನುಸರಿಸಿ, ವಿಮಾನ ಟೇಕಾಫ್ ಆಗುವುದನ್ನು ತಡೆಯಲಾಯ್ತು. ಈ ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ಹೇಳಿಕೆ ಬಿಡುಗಡೆ ಮಾಡಿದೆ. 'ಜುಲೈ 21, 2025 ರಂದು ದೆಹಲಿಯಿಂದ ಕೋಲ್ಕತ್ತಾಗೆ ಹೊರಟಿದ್ದ AI2403 ವಿಮಾನವನ್ನು ಇಂದು ಸಂಜೆ ಮತ್ತೆ ಹಾರಾಟಕ್ಕೆ ಮರು ನಿಗದಿಪಡಿಸಲಾಗಿದೆ. ಟೇಕಾಫ್ ಸಮಯದಲ್ಲಿ ಪತ್ತೆಯಾದ ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ಹಾರಾಟವನ್ನು ತಡೆಯಲಾಯ್ತು. ಕಾಕ್‌ಪಿಟ್ ಸಿಬ್ಬಂದಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಅನುಸರಿಸಿ ಟೇಕಾಫ್ ಸ್ಥಗಿತಗೊಳಿಸಲು ನಿರ್ಧರಿಸಿದರು' ಎಂದು ಏರ್ ಇಂಡಿಯಾ ಪ್ರಕಟಣೆ ಬಿಡುಗಡೆ ಮಾಡಿದೆ.
ವಿಮಾನ ಟೇಕಾಫ್ ವೇಳೆ ಹಾರಾಟ ಸ್ಥಗಿತಗೊಳಿಸಿದ್ದರಿಂದಾಗಿ ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ನಂತರ ವಿಮಾನದಿಂದ ಕೆಳಗೆ ಇಳಿಸಲಾಯ್ತು. ದೆಹಲಿ ಗ್ರೌಂಡ್ ಸಿಬ್ಬಂದಿ ಪ್ರಯಾಣಿಕರಿಗೆ ಸಹಾಯ ಮಾಡಿದ್ದಾರೆ. ಈ ಅನಿರೀಕ್ಷಿತ ಅಡಚಣೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಏರ್ ಇಂಡಿಯಾದಲ್ಲಿ, ನಮ್ಮ ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
ನಿನ್ನೆ ಕೊಚ್ಚಿಯಿಂದ ಮುಂಬೈಗೆ ಆಗಮಿಸಿದ ಏರ್ ಇಂಡಿಯಾ ವಿಮಾನವೂ ಲ್ಯಾಂಡಿಂಗ್ ವೇಳೆ ಮಳೆಯಿಂದ ನೆನೆದಿದ್ದ ರನ್‌ವೇಯಿಂದಾಗಿ ತುಸು ಪಕ್ಕಕ್ಕೆ ಸರಿದು ದೊಡ್ಡ ಅನಾಹುತದಿಂದ ಪಾರಾಗಿದೆ. ಘಟನೆಯಲ್ಲಿವಿಮಾನದ ಎಂಜಿನ್‌ಗೆ ಹಾನಿಯಾಗಿತ್ತು. ಆದರೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.
ವಿಮಾನ ರನ್‌ವೇಯಿಂದ ಪಕ್ಕಕ್ಕೆ ಸರಿದಿದ್ದರಿಂದ ವಿಮಾನದ ಹಿಂಭಾಗಕ್ಕೆ ಹುಲ್ಲಿನ ಗೊಂಚಲು ಅಂಟಿಕೊಂಡಿತ್ತು, ಜೊತೆಗೆ ಒಂದು ಎಂಜಿನ್‌ಗೆಒಂದಕ್ಕೆ ಹಾನಿಯಾದ ಫೋಟೋಗಳು ನಂತರ ವೈರಲಾ ಆಗಿದ್ದವು. ಘಟನೆಯಲ್ಲಿ ರನ್‌ವೇಯೂ ಹಾನಿಗೊಳಗಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ