
ನವದೆಹಲಿ(ಅ.28): ರಾಷ್ಟ್ರೀಯ ಮಾಹಿತಿ ಕೇಂದ್ರ(NIC), ರಾಷ್ಟ್ರೀಯ ಇ-ಗವರ್ನೆಂನ್ಸ್ ಡಿವಿಜನ್ ಹಾಗೂ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಧಿಕಾರಿಗಳಿಗೆ ಕೇಂದ್ರ ಮಾಹಿತಿ ಆಯೋಗ ಕಾರಣ ನೀಡಿ ಎಂಬ ನೋಟಿಸ್ ನೀಡಿದೆ. LiveLaw ವರದಿಯನ್ವಯ ಆರೋಗ್ಯ ಸೇತು ನಿರ್ಮಿಸಿರುವ ವಿಚಾರವಾಗಿ ಐಟಿಆರ್‌ನಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರೀಯ ಸಾರ್ವಜನಿಕ ಮಾಹಿತಿ ಇಲಾಖೆಯ ಅಧಿಕಾರಿಗಳು ಇದರಿಂದ ತಪ್ಪಿಸಿಕೊಳ್ಳಲು ಸೂಕ್ತವಾದ ಉತ್ತರ ನೀಡಿಲ್ಲ.
ಕೇಂದ್ರ ಮಾಹಿತಿ ಆಯೋಗ ಇಲಾಖೆ ಸದ್ಯ ಈ ನೋಟಿಸ್‌ನ್ನು ಸೌರವ್ ದಾಸ್ ಎಂಬವರು ದೂರು ನೀಡಿದ ಬಳಿಕ ಕಳುಹಿಸಿದೆ. ಸೌರವ್ ತಮ್ಮ ದೂರಿನಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ(NIC), ರಾಷ್ಟ್ರೀಯ ಇ-ಗವರ್ನೆಂನ್ಸ್ ಡಿವಿಜನ್ ಹಾಗೂ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಆರೋಗ್ಯ ಸೇತು ಆಪ್ ನಿರ್ಮಿಸಿದ ಪ್ರಕ್ರಿಯೆ ಹಾಗೂ ಇದನ್ನು ನಿರ್ಮಿಸಿದ ಬಗೆಗೆ ಸಂಬಂಧಿಸಿದ ಫೈಲ್‌ಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಹೇಳಿದ್ದರು. ಇಷ್ಟೇ ಅಲ್ಲದೇ ಆಪ್ ನಿರ್ಮಿಸುವಲ್ಲಿ ಹಾಗೂ ಬಳಕೆದಾರರ ಖಾಸಗಿ ಡೇಟಾ ಪಡೆದುಕೊಳ್ಳುವುದಿಲ್ಲಈ ಬಗ್ಗೆ ಆಡಿಟ್ ನೀಡಲು ಯಾರು ಇನ್ಪುಟ್ ನೀಡಿದರು ಎಂಬ ಕುರಿತಾಗಿಯೂ ಯಾವುದೇ ಮಾಹಿತಿ ಇಲ್ಲ.
ಸಿಕ್ಕ ಉತ್ತರವೇನು?
ದಾಸ್ ಸಲ್ಲಿಸಿದ್ದ ಐಟಿಆರ್ ಅರ್ಜಿಗೆ NIC ತಮಗೆ ಆಪ್ ಬಗ್ಗೆ ಮಾಹಿತಿ ಇಲ್ಲ. NICಗೆ ಆಪ್‌ನಲ್ಲಿ ಡೆವಲಪರ್‌ನಂತೆ ಕಗ್ರೆಡಿಟ್ ನೀಡಲಾಗುತ್ತದೆ ಎಂದು ಹೇಳಿದೆ. ಅತ್ತ ರಾಷ್ಟ್ರೀಯ ಇ-ಗವರ್ನೆಂನ್ಸ್ ಡಿವಿಜನ್ ಈ ಮಾಹಿತಿ ತಮ್ಮ ವಿಬಾಗಕ್ಕೆ ಸಂಬಂಧಿಸಿದ್ದಲ್ಲ ಎಂದು ಉತ್ತರಿಸಿದೆ.
ಇನ್ನು ಅತ್ತ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳು ಅಪ್ಲಿಕೇಷನ್ ನಿರ್ಮಿಸಿರುವ ಸ್ಪಷ್ಟೀಕರಣ ನೀಡಲು ಸಾಧ್ಯವಿಲ್ಲ ಎಂದಿದೆ. ಇದನ್ನು ನಿರ್ಮಿಸಿರುವ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ ಎಂದಿದೆ. ಇದನ್ನು ನೀತಿ ಆಯೋಗದ ಸೂಚನೆ ಮೇರೆಗೆ ನಿರ್ಮಿಸಲಾಗಿದೆ ಎಂದು ತಿಳಿಸಿದೆ.
ನವೆಂಬರ್ 24ರೊಳಗೆ ಉತ್ತರಿಸಬೇಕು
ಸದ್ಯ ಕೇಂದ್ರ ಮಾಹಿತಿ ಆಯೋಗ ಕಳುಹಿಸಿರುವ ಈ ನೋಟಿಸ್‌ಗೆ ಸಂಬಂಧಪಟ್ಟ ಇಲಾಖೆಗಳು ನವೆಂಬರ್ 24ರೊಳಗೆ ಉತ್ತರಿಸಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ