ರೈತರಿಗೆ ನೆರವಾಗಲು ಕೇಂದ್ರದ ಮಹತ್ವದ ನಿರ್ಧಾರ!

By Suvarna NewsFirst Published Sep 9, 2021, 5:39 PM IST
Highlights

* ಕೇಂದ್ರ ಸಂಪು​ಟದ ಮಹ​ತ್ವದ ನಿರ್ಧಾ​ರ

* ಗೋಧಿ, ಸಾಸಿವೆ ಸೇರಿ 5 ಬೆಳೆ ಬೆಂಬಲ ದರ ಏರಿಕೆ

 

ನವದೆಹಲಿ: ನೂತನ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆಯೇ, ಕೇಂದ್ರ ಸಚಿವ ಸಂಪು​ಟ, ಗೋಧಿ, ಸಾಸಿವೆ ಕಾಳು, ಸೂರ್ಯಕಾಂತಿ, ಬಾರ್ಲಿ, ಕಡಲೆ ಕಾಳುಗಳ ಕನಿಷ್ಠ ಬೆಂಬಲ ಬೆಲೆಯನ್ನು ಬುಧವಾರ ಏರಿಕೆ ಮಾಡುವ ನಿರ್ಧಾರ ಕೈಗೊಂಡಿ​ದೆ.

ಪ್ರತಿ ಕ್ಷಿಂಟಲ್‌ ಗೋಧಿಯ ಬೆಂಬಲ ದರವನ್ನು 40 ರು. ಏರಿಕೆ ಮಾಡಲಾಗಿದ್ದು, 1,975 ರು. ಇದ್ದ ಬೆಂಬಲ ದರ 2,015 ರು.ಗೆ ಏರಿಕೆ ಆಗಿದೆ. ಅದೇ ರೀತಿ ಸಾಸಿವೆ ಕಾಳಿನ ಬೆಂಬಲ ದರವನ್ನು ಪ್ರತಿ ಕ್ವಿಂಟಲ್‌ಗೆ 400 ರು. ಏರಿಕೆ ಮಾಡಲಾಗಿದ್ದು, 4,650 ರು. ನಿಂದ 5,050 ರು.ಗೆ ಹೆಚ್ಚಳಗೊಂಡಿದೆ.

ಬಾರ್ಲಿಯ ಬೆಂಬಲ ಖರೀದಿ ದರವನ್ನು ಪ್ರತಿ ಕ್ವಿಂಟಲ್‌ಗೆ 35 ರು. ಏರಿಕೆ ಮಾಡಲಾಗಿದ್ದು, 1,600 ರು.ನಿಂದ 1,635 ರು.ಗೆ ಹೆಚ್ಚಳಗೊಂಡಿದೆ. ಕಡಲೆ ಕಾಳಿನ ಬೆಂಬಲ ದರ ಪ್ರತಿ ಕ್ವಿಂಟಲ್‌ಗೆ 130 ರು. ಏರಿಕೆ ಮಾಡಲಾಗಿದ್ದು, 5,100 ರು. ನಿಂದ 5,230 ರು.ಗೆ ಏರಿಕೆ ಆಗಿದೆ. ಸೂರ್ಯಕಾಂತಿ ಬೀಜದ ಬೆಂಬಲ ದರ 114 ರು. ಹೆಚ್ಚಳವಾಗಿದ್ದು, 5,327 ರು. ಬದಲು 5,441 ರು.ನಲ್ಲಿ ಖರೀದಿಸಲಾಗುತ್ತದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಪ್ರತಿ ವರ್ಷ ಬೆಂಬಲ ದರಗಳನ್ನು ಪರಿಷ್ಕರಿಸುತ್ತಿದೆ. ಪ್ರಸ್ತುತ ಸರ್ಕಾರ ಮುಂಗಾರು ಮತ್ತು ಹಿಂಗಾರಿನಲ್ಲಿ ಬೆಳೆಯುವ 23 ಬೆಳೆಗಳಿಗೆ ಬೆಂಬಲ ದರವನ್ನು ನಿಗದಿ ಮಾಡಿದೆ.

ಎಷ್ಟುಏರಿ​ಕೆ? (ಕ್ವಿಂಟ​ಲ್‌​ಗೆ​)

ಬೆಳೆ| ​ಪ​ರಿ​ಷ್ಕೃತ ದರ ​|ಏ​ರಿಕೆ ಪ್ರಮಾ​ಣ

ಗೋಧಿ 2,015 ರು. (40 ರು.)

ಸಾಸಿವೆ ಕಾಳು 5,050 ರು. (400 ರು.)

ಸೂರ್ಯಕಾಂತಿ 5,441 ರು. (114 ರು.)

ಬಾರ್ಲಿ 1,635 ರು. (35 ರು.)

ಕಡಲೆ ಕಾಳು 5,230 ರು. (130 ರು.)

click me!