* ಅಂತಾರಾಷ್ಟ್ರೀಯ ಗಡಿ ಬಳಿ ಭಾರತದ ಮೊದಲ 'ಎಮರ್ಜೆನ್ಸಿ ಲ್ಯಾಂಡಿಂಗ್ ಫೀಲ್ಡ್'
* ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇವೆಂದ ರಕ್ಷಣಾ ಸಚಿವ ಸಿಂಗ್
ನವದೆಹಲಿ(ಸೆ.09): ಭಾರತದ ವಾಯುಪಡೆ ಇತಿಹಾಸದಲ್ಲಿ ಇಂದು ಮಹತ್ವದ ದಿನ, ಇಂದು ದೇಶದ ಮೊದಲ ಎಮರ್ಜೆನ್ಸಿ ಲ್ಯಾಂಡಿಂಗ್ ಫೀಲ್ಡ್ ಉದ್ಘಾಟನೆಗೊಂಡಿದೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಗುರುವಾರ ಉದ್ಘಾಟಿಸಿದ್ದಾರೆ. ರಾಜಸ್ಥಾನದ ಬರ್ಮಾರ್‌ನ ಗಾಂಧವ್ ಭಕಾಸರ್ ವಿಭಾಗದ ರಾಷ್ಟ್ರೀಯ ಹೆದ್ದಾರಿ 925 ರಲ್ಲಿ ಸತ್ತಾ-ಗಂಧವ್ ವಿಸ್ತೀರ್ಣದಲ್ಲಿ ಈ ತುರ್ತು ವಿಮಾನ ಭೂಸ್ಪರ್ಶ ನೆಲೆ ನಿರ್ಮಿಸಲಾಗಿದೆ.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಹಾಗೂ ನಿತಿನ್ ಗಡ್ಕರಿ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರನ್ನು ಹೊತ್ತ ಭಾರತೀಯ ವಾಯುಪಡೆಯ ಎ ಹರ್ಕ್ಯುಲಸ್ ಸಿ–130ಜೆ ವಿಮಾನ ಉದ್ಘಾಟನೆಗೊಂಡ ಎಮರ್ಜೆನ್ಸಿ ಲ್ಯಾಂಡಿಂಗ್ ಫೀಲ್ಡ್‌ನ್ಲಲಿ ಅಣಕು ಲ್ಯಾಂಡಿಂಗ್ ಮಾಡಿತು. ಭಾರತ ದೇಶದಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶಕ್ಕಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಬಳಸುವುದು ಇದೇ ಮೊದಲ ಬಾರಿಯಾಗಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಈ ವಾಯುನೆಲೆ ಸಹಾಯಕ ಮಿಲಿಟರಿ ವಾಯುನೆಲೆಯಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ಸಿದ್ಧವಾಗಿದೆ ಎಂಬುವುದು ಸ್ಪಷ್ಟವಾಗಿದೆ.
undefined
ಇನ್ನು ಇದೇ ವೇಳೆ ರಾ.ಹೆ 925ರಲ್ಲಿನ ತುರ್ತು ಲ್ಯಾಂಡಿಂಗ್ ಸ್ಟ್ರಿಪ್‌ನಲ್ಲಿ ನಡೆದ ಬಹು ಯುದ್ಧವಿಮಾನಗಳ ಕಾರ್ಯಚಾರಣೆಗೂ ಗಡ್ಕರಿ ಹಾಗೂ ರಾಜನಾಥ್ ಸಿಂಗ್ ಸಾಕ್ಷಿಯಾದರು. ಸಚಿವರ ಸಮ್ಮುಖದಲ್ಲಿ ಸುಖೋಯಿ–30ಎಂಕೆಐ ಯುದ್ಧ ವಿಮಾನ ಕೂಡ ಅಣಕು ತುರ್ತು ಭೂ ಸ್ಪರ್ಶ ನಡೆಸಿದೆ. ಸುಖೋಯ್ -30 ಎಂಕೆಐ ಫೈಟರ್ ಜೆಟ್ ಸಚಿವರೆದು ಇಎಲ್‌ಎಫ್‌ನಲ್ಲಿ ಈ ಲ್ಯಾಂಡಿಂಗ್ ನಡೆಸಿದ್ದಾರೆ.
| C-130J Super Hercules transport aircraft with Defence Minister Rajnath Singh, Road Transport Minister Nitin Gadkari & Air Chief Marshal RKS Bhadauria onboard lands at Emergency Field Landing at the National Highway in Jalore, Rajasthan pic.twitter.com/BmOKmqyC5u
— ANI (@ANI)ಇನ್ನು ಈ ಫೀಲ್ಡ್ ಉದ್ಘಾಟಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಂತಾರಾಷ್ಟ್ರೀಯ ಗಡಿಯ ಬಳಿ ಇಂತಹ ಫೀಲ್ಡ್ ಮಾಡುವ ಮೂಲಕ, ನಾವು ಯಾವುದೇ ಪರಿಸ್ಥಿತಿಯಲ್ಲೂ ನಮ್ಮ ದೇಶದ ಏಕತೆ, ವೈವಿಧ್ಯತೆ ಮತ್ತು ಸಾರ್ವಭೌಮತ್ವಕ್ಕಾಗಿ ಎದ್ದು ನಿಲ್ಲುತ್ತೇವೆ ಎಂಬ ಸಂದೇಶವನ್ನು ನೀಡಿದ್ದೇವೆ." ಎಂದಿದ್ದಾರೆ
ಇನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಭಾರತೀಯ ವಾಯುಪಡೆಗೆ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ (ಇಎಲ್‌ಎಫ್) ರಾ.ಹೆ 925ರ ಸತ್ತಾ – ಗಾಂಧವ್ ಸ್ಟ್ರೆಚ್‌ನಲ್ಲಿ 3 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಿದೆ.