
ನವದೆಹಲಿ(ಸೆ.09): ಚುನಾವಣೆ ಸಮೀಪಿಸುತ್ತಿದ್ದಂತೆ ಇತ್ತೀಚೆಗೆ ಪಕ್ಷ ತೊರೆದು ಬೇರೆ ಪಕ್ಷ ಸೇರುವವರ ಸಂಖ್ಯೆ ಹೆಚ್ಚಿದೆ. ಕೆಲ ನಾಯಕರು ಮಂತ್ರಿಗಿರಿ ಸಿಗುವ ವರೆಗೂ ಪಕ್ಷ ಬದಲಾಯಿಸಿ ತಮ್ಮ ಬೇಳೆ ಬೇಯಿಸಿಕೊಂಡವರಿದ್ದಾರೆ. ಇದೀಗ ನಾಯಕರ ವಲಸೆ ಪರ್ವ ಕುರಿತು ಅಧ್ಯಯನ ವರದಿ ಬಿಡುಗಡೆಯಾಗಿದೆ. ಈ ವರದಿಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬೇರೆ ಪಕ್ಷ ಸೇರಿದವರ ಸಂಖ್ಯೆ ಅತೀ ಹೆಚ್ಚು.
ಜೆಡಿಎಸ್ ನಡೆಗೆ ದತ್ತಾ ಅಸಮಾಧಾನ: ಕಾಂಗ್ರೆಸ್ ಸೇರ್ತಾರಾ ದೇವೇಗೌಡ್ರ ಮಾನಸ ಪುತ್ರ?
ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಬಿಡುಗಡೆ ಮಾಡಿದ ಅಧ್ಯಯನ ವರದಿ ರಾಜಕೀಯ ಪಕ್ಷಗಳು ಹಾಗೂ ನಾಯಕರ ಪಕ್ಷ ತೊರೆಯುವಿಕೆ, ಬೇರೆ ಪಕ್ಷ ಸೇರ್ಪಡೆ ಕುರಿತು ಕುತೂಹಲ ಮಾಹಿತಿಯನ್ನು ಹೊರಹಾಕಿದೆ.
ಅಧ್ಯಯನದ ಪ್ರಕಾರ 2014-2021ರ ಅವದಿಯಲ್ಲಿನ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳ ಪೈಕಿ ಕಾಂಗ್ರೆಸ್ ಅತೀ ಹೆಚ್ಚು ನಾಯಕರನ್ನು ಕಳೆದುಕೊಂಡು ನಷ್ಟ ಅನುಭವಿಸಿದೆ. 2014ರಿಂದ 2021ರ ಅವದಿಯಲ್ಲಿ ಬರೋಬ್ಬರಿ 222 ನಾಯಕರು(ಶೆ.20) ಕಾಂಗ್ರೆಸ್ ತೊರೆದು ಇತರ ಪಕ್ಷ ಸೇರಿಕೊಂಡಿದ್ದಾರೆ. ಇನ್ನು ಬಿಎಸ್‌ಪಿ ಪಕ್ಷದಿಂದ 153(ಶೇ.14) ನಾಯಕರು ಪಕ್ಷ ತೊರೆದು ಇತರ ಪಕ್ಷ ಸೇರಿಕೊಂಡಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರು : ಸ್ವಾಗತಿಸಿದ ಶಾಸಕರು
ಪಕ್ಷ ತೊರೆದು ಇನ್ನೊಂದು ಪಕ್ಷ ಸೇರಿಕೊಳ್ಳುವ ಪೈಕಿ ಬಿಜೆಪಿ ಮುಂದಿದೆ. ಹೆಚ್ಚಿನ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. 2014-2021ರ ಅವದಿಯಲ್ಲಿ 253 ನಾಯಕರು ಇತರ ಪಕ್ಷದಿಂದ ಬಿಜೆಪಿ ಸೇರಿಕೊಂಡಿದ್ದಾರೆ. 2014 ರಿಂದ 2021ರೊಳಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ 175 ಸಂಸದರು ಹಾಗೂ ಶಾಸಕರು ಪಕ್ಷ ತೊರೆದು ಇತರ ಪಕ್ಷ ಸೇರಿಕೊಂಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಇತರ ಪಕ್ಷ ಸೇರಿದ ಸಂಸದರು, ಶಾಸಕರ ಸಂಖ್ಯೆ 33. ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ 1133 ಪ್ರಮಾಣ ವಚನ ಸ್ವೀಕರಿಸಿದ ನಾಯಕರು, ಮೇಲೆ ಅಧ್ಯಯನ ನಡೆಸಿದೆ. 2014ರ ಬಳಿಕ ನಡೆದ ಚುನಾವಣೆಗಳಲ್ಲಿ 500 ಅಭ್ಯರ್ಥಿಗಳು ಪಕ್ಷ ಬದಲಿಸಿ ಸ್ಪರ್ಧಿಸಿದ್ದಾರೆ ಎಂದು ಅಧ್ಯಯನ ವರದಿ ಹೇಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ