ಆತ್ಮನಿರ್ಭರ್ ಭಾರತ್: ಕೋವಾಕ್ಸಿನ್ ಸೇರಿ ಸ್ಥಳೀಯ ಲಸಿಕೆ ಉತ್ಪಾದನೆ ವೇಗ ಹೆಚ್ಚಿಸಿದ ಸರ್ಕಾರ!

Published : Apr 16, 2021, 06:31 PM IST
ಆತ್ಮನಿರ್ಭರ್ ಭಾರತ್: ಕೋವಾಕ್ಸಿನ್ ಸೇರಿ ಸ್ಥಳೀಯ ಲಸಿಕೆ ಉತ್ಪಾದನೆ ವೇಗ ಹೆಚ್ಚಿಸಿದ ಸರ್ಕಾರ!

ಸಾರಾಂಶ

ಕೊರೋನಾ ವೈರಸ್ ದೇಶದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಸೋಂಕಿತರ ಪ್ರಮಾಣ ದಿಢೀರ್ ಏರಿಕೆ ಕಾರಣ ಇದೀಗ ಲಸಿಕೆ ಅಭಾವ ಕಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಕೋವಿಡ್ ಸುರಕ್ಷಾ ಮಿಶನ್ ಅಡಿಯಲ್ಲಿ ಇದೀಗ ಸ್ಥಳೀ ಕೊರೋನಾ ಲಸಿಕೆ ಉತ್ಪಾದನೆ ವೇಗ ಹೆಚ್ಚಿಸಲು ಮಿಶನ್ 3.0 ಘೋಷಿಸಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಏ.16): ಕೊರೋನಾ ಪ್ರಕರಣ ದಿಢೀರ್ ಏರಿಕೆಯಿಂದ ಇದೀಗ ದೇಶದಲ್ಲಿ ಮತ್ತೆ ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಲಾಕ್‌ಡೌನ್ ಇಲ್ಲದೆ ಕೊರೋನಾ ನಿಯಂತ್ರಿಸಲು ಸರ್ಕಾರ ಹೆಣಗಾಡುತ್ತಿದೆ. ಇದರ ನಡುವೆ ಲಸಿಕೆ ಅಭಾವ ಕೂಡ ಎದ್ದು ಕಾಣುತ್ತಿದೆ. ಹೀಗಾಗಿ ಆತ್ಮನಿರ್ಭರ್ ಭಾರತ್ 3.0 ಕೋವಿಡ್ ಸುರಕ್ಷಾ ಮಿಶನ್ ಅಡಿಯಲ್ಲಿ ಸ್ಥಳೀಯ ಕೊರೋನಾ ಲಸಿಕೆ ಉತ್ಪಾದನೆ ವೇಗ ಹೆಚ್ಚಿಸಲು ಕೇಂದ್ರ ಮುಂದಾಗಿದೆ.

'ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್‌ ಸುರಕ್ಷಿತ, ರೋಗ ನಿರೋಧಕ ಶಕ್ತಿ ಸೃಷ್ಟಿಸುತ್ತೆ, ಅಡ್ಡ ಪರಿಣಾಮ ಇಲ್ಲ

ಸ್ಥಳೀಯ ಲಸಿಕೆ ಉತ್ಪಾದನೆ ವೇಗ ವರ್ಧಿಸಲು  ಕೋವಿಡ್ ಸುರಕ್ಷಾ ಮಿಷನ್ ಅಡಿಯಲ್ಲಿ ಭಾರತ ಜೈವಿಕ ತಂತ್ರಜ್ಞಾನ ಇಲಾಖೆ ಹೆಚ್ಚಿನ ಹಣಕಾಸಿನ ಅನುದಾನ ನೀಡಲಿದೆ. ಇದರಿಂದ ಸ್ಥಳೀಯವಾಗಿ ಆಭಿವೃದ್ಧಿ ಪಡಿಸಿರುವ ಕೋವಾಕ್ಸಿನ್ ಕೊರೋನಾ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಮೇ-ಜೂನ್ ತಿಂಗಳಿಗೆ ದುಪ್ಪಟ್ಟಾಗಲಿದೆ. ಜುಲೈ ಹಾಗೂ ಆಗಸ್ಟ್ ವೇಳೆಗೆ ಲಸಿಕೆ ಉತ್ಪಾದನೆ ಪ್ರಮಾಣ 6 ರಿಂದ 7 ಪಟ್ಟು ಹೆಚ್ಚಾಗಲಿದೆ. 

ಏಪ್ರಿಲ್‌ನಲ್ಲಿ 1 ಕೋಟಿ ಲಸಿಕೆ ಉತ್ಪಾದನೆಯಾಗುತ್ತಿದ್ದ ಪ್ರಮಾಣ ಜುಲೈ ಹಾಗೂ ಆಗಸ್ಟ್ ವೇಳೆಗೆ 6-7 ಕೋಟಿ ಲಸಿಕೆ ಉತ್ಪಾದನೆಯಾಗಲಿದೆ. ಇನ್ನು ಸೆಪ್ಟೆಂಬರ್ 2021 ರ ವೇಳೆಗೆ ಇದು ತಿಂಗಳಿಗೆ ಸುಮಾರು 10 ಕೋಟಿ ಪ್ರಮಾಣವನ್ನು ತಲುಪುವ ನಿರೀಕ್ಷೆಯಿದೆ.

ಬ್ರಿಟನ್‌ ವೈರಸ್‌ ವಿರುದ್ಧವೂ ಕೋವ್ಯಾಕ್ಸಿನ್‌ ಲಸಿಕೆ ಪರಿಣಾಮಕಾರಿ: ಅಧ್ಯಯನ

ಏಪ್ರಿಲ್ ಮೊದಲ ವಾರದಲ್ಲಿ ಎರಡು ತಂಡಗಳು ಲಸಿಕೆ ಉತ್ಪಾದನೆ ಘಟನೆಗಳಿಗೆ ಭೇಟಿ ನೀಡಿ ಉತ್ಪಾದನೆ ಹೆಚ್ಚಿಸುವ ಕುರಿತು ಮಹತ್ವದ ಚರ್ಚೆ ನಡೆಸಿದೆ. ಈ ಯೋಜನೆ ಅಡಿಯಲ್ಲಿ ಭಾರತ್ ಬಯೋಟೆಕ್ ಲಿಮಿಡೆಟ್ ಸೇರಿದಂತೆ ಸ್ಥಳೀಯ ಲಸಿಕೆ ಉತ್ಪದಾನ ಘಟಕಗಳ ಸಾಮರ್ಥ್ಯ ಹಾಗೂ ಮೂಲ ಸೌಕರ್ಯ, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲು ಸರ್ಕಾರ ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ