ಅಂಬಾನಿ ದಂಪತಿಯಿಂದ ಮಹಾರಾಷ್ಟ್ರಕ್ಕೆ 100 ಟನ್ ಆಕ್ಸಿಜನ್ ಪೂರೈಕೆ

By Suvarna NewsFirst Published Apr 16, 2021, 6:19 PM IST
Highlights

ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ ಮಹಾರಾಷ್ಟ್ರಕ್ಕೆ ಆಕ್ಸಿಜನ್ ಪೂರೈಕೆ | ಈ ಬಗ್ಗೆ ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕಾಂತ ಶಿಂಧೆ ಟ್ವೀಟ್ | ಗುಜರಾತ್‌ನ ಜಾಮಾನಗರ ಸಂಸ್ಕರಣಾ ಘಟಕದಿಂದ ಪೂರೈಕೆಯಾಗಲಿದೆ 100 ಟನ್ ಆಮ್ಲಜನಕ

ಮುಂಬೈ(ಎ.16): ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ 15 ದಿನ ಲಾಕಡೌನ್ ಮಾದರಿಯ ನಿರ್ಬಂಧಗಳನ್ನು ಹೇರಲಾಗಿದೆ.

ಏಪ್ರಿಲ್ 14ರಿಂದ ಈ ನಿಯಮ ಜಾರಿಯಲ್ಲಿದ್ದೂ ಮೇ 1 ರಂದು ಕೊನೆಗೊಳ್ಳಲಿದೆ. ಈ ಮಧ್ಯೆ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ತಮ್ಮ ಸಂಸ್ಕರಣಾ ಘಟಕಗಳ ಉತ್ಪಾದಿಸಲಾಗುತ್ತಿರುವ ಆಮ್ಲಜನಕವನ್ನು ಮಹಾರಾಷ್ಟ್ರದ ಕೊರೊನಾ  ರೋಗಿಗಳ ಚಿಕಿತ್ಸೆಗೆ ಬಳಸಲು ನಿರ್ಧರಿಸಿದ್ದಾರೆ.

ಮೋದಿಗೆ ಆಪ್ತರಾಗಿದ್ದ ಪ್ರಶಾಂತ್ ಕಿಶೋರ್ ವಿರೋಧ ಪಾಳಯ ಸೇರಿದ್ಹೇಗೆ..?

ಮುಕೇಶ್ ಅಂಬಾನಿ ಮಾಲೀಕತ್ವದ, ಗುಜರಾತ್ನ ಜಾಮಾನಗರದಲ್ಲಿರುವ ಜಗತ್ತಿನ ಅತಿ ದೊಡ್ಡ ತೈಲ ಸಂಸ್ಕರಣಾ ಘಟಕ ರೀಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಹಾರಾಷ್ಟ್ರಕ್ಕೆ ಉಚಿತವಾಗಿ ಆಮ್ಲಜನಕ ಪೂರೈಸಲಿದೆ. ಈ ಬಗ್ಗ ಟ್ವಿಟ್ ಮಾಡಿರುವ ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕಾಂತ ಶಿಂಧೆ “ ರಿಲಯನ್ಸ ಕಂಪನಿಯಿಂದ 100 ಟನ್ಗಳಷ್ಟು ಆಮ್ಲಜನಕವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸರಬರಾಜು ಮಾಡಲಾಗುವುದು” ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ಎರಡನೇ ಅಲೆ ಎಲ್ಲ ರಾಜ್ಯಗಳಿಗೂ ದುಸ್ವಪ್ನವಾಗಿ ಕಾಡುತ್ತಿದೆ. ದೇಶದ ಬಹುತೇಕ ರಾಜ್ಯಗಳು ಕೊರೊನಾ ಹರಡುವಿಕೆಯ ನಿಯಂತ್ರಣಕ್ಕೆ ಹರಸಾಹಸಪಡುತ್ತಿವೆ. ಕೆಲವು ರಾಜ್ಯಗಳು ಲಾಕ ಡೌನ್, ಸೆಮಿ ಲಾಕಡೌನ್, ನೈಟ್ ಕರ್ಫ್ಯೂನಂತಹ ಕಠಿಣ ಕ್ರಮಗಳನ್ನು ಜಾರಿಗೊಳಿಸಿವೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಉಂಟಾಗುತ್ತಿದ್ದೂ ಒಂದೇ ಹಾಸಿಗೆಯ ಮೇಲೆ ಎರಡರಿಂದ ಮೂರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೂಡ ಕೊರತೆಯಾಗಿದ್ದು ಇದರಿಂದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಕೊರೋನಾ ರೋಗಿಗಳಿಗೆ ಉಚಿತ ಆಹಾರ; ಈತನ ಕಾರ್ಯಕ್ಕೆ ದೇಶವೇ ಸಲಾಂ!

ಆಮ್ಲಜನಕದ ಪೂರೈಕೆ ಹೆಚ್ಚಾದಂತೆ ನಾವು ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ದಿನನಿತ್ಯ ನಮಗೆ 50 ಆಕ್ಸಿಜನ್ ಸಿಲಿಂಡರ್ಗಳ ಅವಶ್ಯಕತೆ ಇದೆ, ಆದರೆ ಸದ್ಯದ ಮಟ್ಟಿಗೆ ಕೇವಲ 30 ಸಿಲಿಂಡರ್ಗಳ ಪೂರೈಕೆಯಾಗುತ್ತಿದೆ” ಎಂದು ಮಹಾರಾಷ್ಟ್ರದ ಉಮಾ ಆಸ್ಪತ್ರೆಯ ವೈದ್ಯರಾದ ಡಾ. ಯೋಗೇಶ್ ಮೋರೆ ಹೇಳಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಸಂಸ್ಕರಣಾ ಘಟಕದಲ್ಲಿ ಪೆಟ್ರೋಲನ್ನು ಸಂಸ್ಕರಣೆ ಮಾಡಲು ಬಳಸುವ ಆಮ್ಲಜನಕವನ್ನು ರೋಗಿಗಳ ಬಳಕೆಗೆ ಯೋಗ್ಯವಾಗುವಂತೆ ಉತ್ಪಾದಿಸಿ ಮಹಾರಾಷ್ಟ್ರಕ್ಕೆ ಪೂರೈಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

रिलायन्स च्या जामनगर प्लँट मधून महाराष्ट्रासाठी १०० मेट्रिक टन अतिरिक्त ऑक्सिजन पुरवठा होणार.

विभागीय आयुक्त, रायगड व ठाणे जिल्हाधिकारी आणि एफडीए आयुक्त यांची समन्वय समिती ऑक्सिजन पुरवठ्याबाबत समन्वयाचे काम करेल.

— Eknath Shinde - एकनाथ शिंदे (@mieknathshinde)

Embed Link: (Dr.Yogish More:ANI Tweet):

Maharashtra: Shortage of medical oxygen in a number of hospitals in Nashik District

Only when the oxygen supply is increased we'll be able to admit more patients. We need 50 cylinders daily but we're getting only 30 cylinders, says Dr.Yogesh More, Uma Hospital pic.twitter.com/F9NnYZHNIc

— ANI (@ANI)

ಮುಕೇಶದ ಅಂಬಾನಿ ಮಾಲಿಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಈ ಕಾರ್ಯಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಸಾಮಾಜಿಕ ಜಾಲತಾನಗಳಲ್ಲಿ ಕೂಡ ಮುಖೇಶ ಅಂಬಾನಿ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಕುಂಭಮೇಳದಲ್ಲಿ ಮುಮ್ತಾಜ್ ಎಂಬ ಮುಸ್ಲಿಂ ಮಹಾಯೋಗಿಯ ಭಗವದ್ಗೀತೆ ಪ್ರವಚನ

ಇನ್ನೂ ಮಹಾರಾಷ್ಟ್ರದ ಭಾರತ್ ಪೆಟ್ರೊಲಿಯಂ ಕೂಡ ಕೇರಳದ ಕೊಚ್ಚಿಯಲ್ಲಿ ತನ್ನ ಸಂಸ್ಕರಣಾ ಘಟಕದಲ್ಲಿ 20 ಟನ್ ಚಿಕಿತ್ಸೆಗೆ ಬಳಸಬುದಾದ ಆಮ್ಲಜನಕವನ್ನು ಶೇಖರಿಸಿಟ್ಟಿದೆ. ಈಗಾಗಲೇ 25 ಟನ್ ಆಮ್ಲಜನಕವನ್ನು ವೈದ್ಯಕೀಯ ಬಳಕೆಗೆ ಪೂರೈಸಲಾಗಿದೆ ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಭಾರತ್ ಪೆಟ್ರೊಲಿಯಂ ದಿನವೊಂದಕ್ಕೆ 1.5 ಟನ್ ಆಮ್ಲಜನಕವನ್ನು ಪೂರೈಸುವಂತಹ ಸಾಮರ್ಥ್ಯ ಹೊಂದಿದೆ. ತೈಲ ಸಂಸ್ಕರಣಾ ಘಟಕಗಳು ಕೈಗಾರಿಕೆಗೆ ಬಳಸಬಹುದಾದಂತಹ ಅಲ್ಪ ಪ್ರಮಾಣದ ಆಮ್ಲಜನಕವನ್ನು ಉತ್ಪಾದಿಸುತ್ತವೆ. ಈ ಆಮ್ಲಜನಕದಿಂದಲೇ ಬೇಡವಾದ ಅನಿಲಗಳನ್ನು ಹೊರ ಹಾಕಿ ವೈದ್ಯಕೀಯ ಚಿಕಿತ್ಸೆಗೆ ಬಳಸಬುದಾದ 99.9% ಶುದ್ಧ ಆಮ್ಲಜನಕವನ್ನು ಉತ್ಪಾದಿಸಬಹುದಾಗಿದೆ.

click me!