ರಾಜ್ಯಪಾಲರು ರಾಜಕೀಯ ಮಾತನಾಡಬಾರದು: ತಮಿಳುನಾಡು ಗವರ್ನರ್‌ ವಿರುದ್ಧ ಅಣ್ಣಾಮಲೈ ಕಿಡಿ

Published : Jul 06, 2023, 01:17 PM IST
ರಾಜ್ಯಪಾಲರು ರಾಜಕೀಯ ಮಾತನಾಡಬಾರದು: ತಮಿಳುನಾಡು ಗವರ್ನರ್‌ ವಿರುದ್ಧ ಅಣ್ಣಾಮಲೈ ಕಿಡಿ

ಸಾರಾಂಶ

ರಾಜ್ಯಪಾಲರು ರಾಜಕೀಯ ಮಾತನಾಡುವ ರಾಜಕಾರಣಿಯಲ್ಲ. ಅದರ ಬಗ್ಗೆ ನನಗೆ ಸ್ಪಷ್ಟತೆ ಇದೆ. ಅವರು ಡಿಎಂಕೆ ಟೀಕಿಸಿದ್ದರೆ, ತಪ್ಪು ನಿದರ್ಶನವನ್ನು ನೀಡುತ್ತಾರೆ ಎಂದು ಅಣ್ಣಾಮಲೈ ತಮಿಳುನಾಡು ಗವರ್ನರ್‌ ವಿರುದ್ಧ ಕಿಡಿ ಕಾರಿದ್ದಾರೆ.

ಚೆನ್ನೈ (ಜುಲೈ 6, 2023): ತಮಿಳುನಾಡು ರಾಜ್ಯಪಾಲರ ವಿರುದ್ಧ ಆಡಳಿತಾರೂಢ ಡಿಎಂಕೆ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಅವರು ಬಿಜೆಪಿಯ ಏಜೆಂಟ್‌ ಎಂದೂ ಡಿಎಂಕೆ ನಾಯಕರು ಟೀಕಿಸಿದ್ದಾರೆ. ಈಗ, ತಮಿಳುನಾಡು ರಾಜ್ಯಪಾಲರ ವಿರುದ್ಧ ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರೇ ಮಾತನಾಡಿದ್ದು, ರಾಜ್ಯಪಾಲರು ರಾಜಕೀಯ ಮಾತಾಬಾರದು ಎಂದಿದ್ದಾರೆ.

ತಮಿಳುನಾಡಿನ ವಿಲ್ಲುಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ರಾಜ್ಯಪಾಲರು ರಾಜಕೀಯ ಮಾತನಾಡುವ ರಾಜಕಾರಣಿಯಲ್ಲ. ಅದರ ಬಗ್ಗೆ ನನಗೆ ಸ್ಪಷ್ಟತೆ ಇದೆ. ಅವರು ಡಿಎಂಕೆ ಟೀಕಿಸಿದ್ದರೆ, ಅವರು ತಪ್ಪು ನಿದರ್ಶನವನ್ನು ನೀಡುತ್ತಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಮಂಗಳವಾರ ರಾಜಭವನದಲ್ಲಿ ಉಪಕುಲಪತಿಗಳೊಂದಿಗೆ ನಡೆದ ಸಭೆಯಲ್ಲಿ ರಾಜ್ಯಪಾಲ ರವಿ ಅವರು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಅಣ್ಣಾಮಲೈ ಈ ಬಗ್ಗೆ ಮಾತನಾಡಿದ್ದಾರೆ. ರಚನಾತ್ಮಕ ಟೀಕೆಗಳಿದ್ದರೆ, ರಾಜ್ಯಪಾಲರು ಸೂಕ್ತ ವೇದಿಕೆಗಳಲ್ಲಿ ವ್ಯಕ್ತಪಡಿಸಬೇಕು ಎಂದೂ ಅಣ್ಣಾಮಲೈ ಹೇಳಿದರು.

ಇದನ್ನು ಓದಿ: ಸಂಸದನ ವಿರುದ್ಧ ಟ್ವೀಟ್‌: ಬಿಜೆಪಿ ರಾಜ್ಯ ಕಾರ್ಯದರ್ಶಿ ಬಂಧಿಸಿದ ಸೈಬರ್‌ ಕ್ರೈಂ ಪೊಲೀಸರು

"ರಾಜ್ಯಪಾಲರು ನಿಜವಾಗಿಯೂ ಸರ್ಕಾರವನ್ನು ಟೀಕಿಸಲು ಬಯಸಿದರೆ, ಅವರು ರಾಜ್ಯಪಾಲರ ಭಾಷಣದ ಸಮಯದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಹಾಗೆ ಮಾಡಬಹುದು. ರಾಜ್ಯಪಾಲರು ವಿರೋಧ ಪಕ್ಷಗಳಂತೆ ರಾಜ್ಯ ಸರ್ಕಾರವನ್ನು ಟೀಕಿಸಲು ಸಾಧ್ಯವಿಲ್ಲ. ರಾಜ್ಯಪಾಲರು ರಾಜ್ಯ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸಿದರೆ, ಅದರ ಆಧಾರದ ಮೇಲೆ ಅವರು ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾರೆ’’  ಎಂದೂ ಅಣ್ಣಾಮಲೈ ಹೇಳಿರುವುದು ಅಚ್ಚರಿ ಮೂಡಿಸಿದೆ.

ಇತ್ತೀಚೆಗೆ, ಭ್ರಷ್ಟಾಚಾರದ ಆರೋಪಗಳನ್ನು ಹೊಂದಿರುವ ಕೆಲವು ಕೇಂದ್ರ ಸಚಿವರ ಹೆಸರುಗಳನ್ನು ಹೊಂದಿದ್ದ ಡಿಎಂಕೆಯ ಪೋಸ್ಟರ್‌ಗಳು ಚೆನ್ನೈನಲ್ಲಿ ಕಾಣಿಸಿಕೊಂಡಿದ್ದವು. ವಿ. ಸೆಂಥಿಲ್ ಬಾಲಾಜಿ ಅವರನ್ನು ತಮ್ಮ ಸ್ಥಾನದಿಂದ ತೆಗೆದುಹಾಕಿದಂತೆ, ರಾಜ್ಯಪಾಲರು ಕೇಂದ್ರ ಸಚಿವರನ್ನು ತೆಗೆಯುವಂತೆಯೂ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುತ್ತಾರೆಯೇ ಎಂದೂ ಈ ಪೋಸ್ಟರ್‌ಗಳಲ್ಲಿ ಕೇಳಲಾಗಿತ್ತು. ಅಲ್ಲದೆ, ಡಿಎಂಕೆ ಪೋಸ್ಟರ್‌ಗಳು ರಾಜ್ಯಪಾಲರನ್ನು ಮಾಧ್ಯಮಗಳೊಂದಿಗೆ ಮಾತನಾಡಲು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಲು ಧೈರ್ಯಮಾಡುವಂತೆಯೂ ಹೇಳಿದ್ದರು.

ಇದನ್ನೂ ಓದಿ: 120 ಜನ​ರಿಂದ ಯೋಧನ ಪತ್ನಿ ಅರೆ​ಬೆ​ತ್ತಲೆ ಮಾಡಿ ಹಲ್ಲೆ ಆರೋಪ: ಇದು ಕಟ್ಟುಕತೆ ಎಂದ ತಮಿಳುನಾಡು ಪೊಲೀಸ್‌

ಈ ಡಿಎಂಕೆ ಪೋಸ್ಟರ್‌ಗಳು ವೈರಲ್‌ ಆದ ಬೆನ್ನಲ್ಲೇ, ರಾಜ್ಯಪಾಲರು ಮಾಧ್ಯಮದವರನ್ನು ಭೇಟಿ ಮಾಡುವುದು ಸೂಕ್ತವಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ. “ಅವರು ಮಾಧ್ಯಮದವರನ್ನು ಭೇಟಿ ಮಾಡಬಾರದು ಎಂಬುದು ನಮ್ಮ ಅಭಿಪ್ರಾಯ. ಅಗತ್ಯವಿದ್ದಾಗ ಮಾತ್ರ ರಾಜ್ಯಪಾಲರು 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಪ್ರಿಂಟ್ ರೂಪದಲ್ಲಿ ಸಂದರ್ಶನ ನೀಡುತ್ತಿದ್ದರು.ಇಷ್ಟು ವರ್ಷಗಳ ಕಾಲ ರಾಜ್ಯಪಾಲರು ಹಾಗೆ ಕಾರ್ಯನಿರ್ವಹಿಸುತ್ತಿದ್ದರು. ನಮಗೆ (ಬಿಜೆಪಿ) ಅನುಕೂಲವಾಗಿದರೂ ರಾಜ್ಯಪಾಲರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಬಾರದು ಎಂಬುದು ನನ್ನ ಅಭಿಪ್ರಾಯ’’ ಎಂದೂ ಅಣ್ಣಾಮಲೈ ಹೇಳಿದ್ದಾರೆ. 

ಈ ಮಧ್ಯೆ, "ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ವಿಷಯದ ಬಗ್ಗೆ ರಾಜ್ಯಪಾಲರು ಮಾತನಾಡಿದರೆ ಏನಾಗುತ್ತದೆ? ರಾಜ್ಯಪಾಲರ ಕ್ರಮವನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳುತ್ತದೆಯೇ? ಪಕ್ಷದಲ್ಲಿ ಹಿರಿಯ ಸದಸ್ಯರನ್ನು ಹೊಂದಿರುವ ಡಿಎಂಕೆಗೆ ಇದು ಏಕೆ ಅರ್ಥವಾಗುತ್ತಿಲ್ಲ?" ಎಂದೂ ಅಣ್ಣಾಮಲೈ ಕೇಳಿದ್ದಾರೆ. ತಮಿಳುನಾಡು ರಾಜ್ಯ ಸರ್ಕಾರದ ವಿರುದ್ಧ ಬಾಕಿ ಉಳಿದಿರುವ ಮಸೂದೆಗಳು ಅಥವಾ ರಾಜಭವನವು ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವುದೇ ಆಗಲಿ ಬಿಜೆಪಿ ಇದುವರೆಗೆ ರಾಜ್ಯಪಾಲರ ಕ್ರಮಗಳನ್ನು ಬೆಂಬಲಿಸಿತ್ತು.

ಇದನ್ನೂ ಓದಿ: From the India Gate: ಸೈಲೆಂಟ್‌ ಆದ ಕರ್ನಾಟಕ ಸಿಂಗಂ, ತೆಲಂಗಾಣ ಸಿಎಂ ಕನಸಿನ ಕಾರು ಪಂಕ್ಚರ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್