ಕೊರೋನಾ ನಿಯಂತ್ರಣ, ಚೀನಾ ಅತಿಕ್ರಮಣ; ಕೇಂದ್ರಕ್ಕೆ ಖಡಕ್ ಸೂಚನೆ ನೀಡಿದ ಆನಂದ್ ಶರ್ಮಾ!

Suvarna News   | Asianet News
Published : Jun 29, 2020, 03:50 PM IST
ಕೊರೋನಾ ನಿಯಂತ್ರಣ, ಚೀನಾ ಅತಿಕ್ರಮಣ; ಕೇಂದ್ರಕ್ಕೆ ಖಡಕ್ ಸೂಚನೆ ನೀಡಿದ ಆನಂದ್ ಶರ್ಮಾ!

ಸಾರಾಂಶ

ಒಂದೆಡೆ ಮೀತಿ ಮೀರುತ್ತಿರುವ ಕೊರೋನಾ ವೈರಸ್ ಮತ್ತೊಂದೆಡೆ ಚೀನಾ ದಾಳಿಯಿಂದ ಭಾರತ ಹೆಜ್ಜೆ ಹೆಜ್ಜೆಗೂ ಹಿನ್ನಡೆ ಅನುಭವಿಸುತ್ತಿದೆ. ಇದೀಗ ಕಾಂಗ್ರೆಸ್ ಸಂಸದ ಆನಂದ್ ಶರ್ಮಾ, ಕೇಂದ್ರ ಸರ್ಕಾರಕ್ಕೆ ಕೆಲ ಸೂಚನೆ ನೀಡಿದ್ದಾರೆ. ಅಮಿತ್ ಶಾ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಕೇಂದ್ರದ ಕಿವಿ ಹಿಂಡಿದ್ದಾರೆ.

ನವದೆಹಲಿ(ಜೂ.29):  ಕಾಂಗ್ರೆಸ್ ಅಥವಾವಿರೋಧ ಪಕ್ಷ ಟೀಕೆ, ಟಿಪ್ಪಣಿ ಮುಖ್ಯಮಲ್ಲ. ದೇಶದ ಜನತೆಯ ಆರೋಗ್ಯ, ದೇಶದ ಭದ್ರತೆ ಮುಖ್ಯ. ಇದರತ್ತ ಕೇಂದ್ರ ಸರ್ಕಾರ ಗಂಭೀರ ಚಿಂಚನೆ ನಡೆಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದಾರೆ.

ಮಾಜಿ ಸಿಎಂಗೆ ಕೊರೋನಾ ಸೋಂಕು: ಮೋದಿಯಿಂದ ಕರೆ!...

ಕೊರೋನಾ ವೈರಸ್ ಹಾಗೂ ದೇಶದ ಗಡಿ ಸಮಸ್ಯೆ ಭಾರತವನ್ನು ಇನ್ನಲ್ಲದಂತೆ ಕಾಡುತ್ತಿದೆ. ಇದೀಗ ಬೆಜೆಪಿ-ಕಾಂಗ್ರೆಸ್ ಪಕ್ಷದ ವಿಚಾರವಲ್ಲ. ದೇಶದ ವಿಚಾರ. ಹೀಗಾಗಿ ಸರ್ಕಾರದ ನಿರ್ಧಾರಗಳನ್ನು ಸಂಸತ್ತಿನಲ್ಲಿ ಹೇಳಬೇಕು. ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಕುರಿತು ಭಯಪಡುವ ಅಗತ್ಯವಿಲ್ಲ. ದೇಶವನ್ನು ಆಪಾಯಿಂದ ಪಾರುಮಾಡುವ ವಿಧಾನದತ್ತ ಗಮನಹರಿಸಿ ಎಂದು ಆನಂದ್ ಶರ್ಮಾ, ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ.

ಮುಂದಿನ ಅತ್ಯಾಧುನಿಕ ಯುದ್ಧ ವಿಮಾನಕ್ಕೆ ಖಾಸಗಿ ಸಹಭಾಗಿತ್ವ!

ಇಂದಿರಾ ಗಾಂಧಿ ಬಳಿ ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬ ಮಾತ್ರ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದೆ ಎಂದು ಅಮಿತ್ ಶಾ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಆನಂದ್ ಶರ್ಮಾ ಸಿತಾರಾಂ ಕೇಸರಿ ಹಾಗೂ ಪಿವಿ ನರಸಿಂಹ ರಾವ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಗಾಂಧಿ ಕುಟುಂಬ ಹೆಚ್ಚು ಬಾರಿ ಅಧ್ಯಕ್ಷರಾಗಿದ್ದಾರೆ ನಿಜ. ಆದರೆ ಈ ಸಮಯದಲ್ಲಿ ಪಕ್ಷ, ಅಧ್ಯಕ್ಷ, ಟೀಕೆ ಟಿಪ್ಪಣಿಗಳ ಸಮಯವಲ್ಲ ಎಂದು ಆನಂದ್ ಶರ್ಮಾ ಹೇಳಿದ್ದಾರೆ.

ಕೊರೋನಾ ವೈರಸ್ ನಿಯಂತ್ರಣ ಹಾಗೂ ಚೀನಾ ಅತಿಕ್ರಮಣ ಕುರಿತು ಸರ್ಕಾರ ವಿರೋಧ ಪಕ್ಷ ಹಾಗೂ ಸಂಸದರ ಪ್ರಶ್ನೆಗೆ ಉತ್ತರಿಸಬೇಕು. ನಮ್ಮ ಯೋಧರ ಜೊತೆಗೆ ನಾವಿದ್ದೇವೆ. ಮತ್ತೆ ಅನಾಹುತ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಆನಂದ್ ಶರ್ಮಾ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ