ಗುಜರಾತ್ ಮಾಜಿ ಸಿಎಂ ವಘೇಲಗೂ ಸೋಂಕು| ಅಹಮದಾಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ| ಶನಿವಾರವೇ ಸೋಂಕಿಗೆ ತುತ್ತಾಗಿದ್ದ ವಘೇಲಾ ಹೋಮ್ ಕ್ವಾರಂಟೈನ್‌ನಲ್ಲಿದ್ದರು
ಅಹಮದಾಬಾದ್(ಜೂ.29): ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖಂಡ ಶಂಕರ್ ಸಿನ್ಹ ವಘೇಲಾ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಭಾನುವಾರ ಅಹಮದಾಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಘೇಲಾ ಅವರ ಆಪ್ತ, ‘ಶನಿವಾರವೇ ಸೋಂಕಿಗೆ ತುತ್ತಾಗಿದ್ದ ವಘೇಲಾ ಹೋಮ್ ಕ್ವಾರಂಟೈನ್‌ನಲ್ಲಿದ್ದರು. ಇದೀಗ ವೈದ್ಯರ ಸೂಚನೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಅವರ ಆರೋಗ್ಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ’ ಎಂದಿದ್ದಾರೆ.
undefined
17 ವರ್ಷದ ಗರ್ಭಿಣಿ ಮಗಳನ್ನು 50 ಸಾವಿರಕ್ಕೆ ಮಾರಾಟ ಮಾಡಿದ ಪೋಷಕರು
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ವಘೇಲಾ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಗುಜರಾತ್‌ನಲ್ಲಿ ಏರುತ್ತಿದೆ ಕೊರೋನಾ ಸೋಂಕಿತರ ಸಂಖ್ಯೆ
ಗುಜರಾತ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಲ್ಲಿ ಒಟ್ಟು 31,397 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 1,809 ಮಂದಿ ಬಲಿಯಾಗಿದ್ದಾರೆ
ಒಟ್ಟು ಸೋಂಕಿತರ ಸಂಖ್ಯೆ 541040ಕ್ಕೆ ತಲುಪಿದೆ. ಇನ್ನು ನಿನ್ನೆ 390 ಜನರ ಸಾವಿನೊಂದಿಗೆ ಈವರೆಗೆ ವೈರಸ್‌ಗೆ ಬಲಿಯಾದವರ ಸಂಖ್ಯೆ 16478ಕ್ಕೆ ಮುಟ್ಟಿದೆ. ಇದರ ನಡುವೆಯೇ 320887 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಅಂದರೆ ಗುಣಮುಖರಾದವರ ಪ್ರಮಾಣ ಶೇ.59.30ಕ್ಕೆ ತಲುಪಿದೆ.