ಲಸಿಕಾ ಸಾಮರ್ಥ್ಯ ಹೆಚ್ಚಿಸಲು ಕೇಂದ್ರದ ಮಹತ್ವದ ಹೆಜ್ಜೆ; ಮತ್ತೆರಡು ವ್ಯಾಕ್ಸಿನ್ ಟೆಸ್ಟ್ ಲ್ಯಾಬ್!

By Chethan Kumar  |  First Published Jul 4, 2021, 7:50 PM IST
  • ಲಸಿಕಾ ಉತ್ಪಾದನೆ ಹೆಚ್ಚಿಸಲು ಕೇಂದ್ರದಿಂದ ಮಹತ್ವದ ಹೆಜ್ಜೆ
  • ಮತ್ತೆರೆಡು ಲಸಿಕಾ ಪರೀಕ್ಷಾ ಲ್ಯಾಬ್ ಸ್ಥಾಪನೆಕೆ ಕೇಂದ್ರದ ಸಿದ್ಧತೆ
  • ಪುಣೆ ಹಾಗೂ ಹೈದರಾಬಾದ್‌ನಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆ
     

ನವದೆಹಲಿ(ಜು.04): ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಮುಂದಾಗಿದೆ. ಆದರೆ ಲಸಿಕೆ ಉತ್ಪಾದನೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಪೂರೈಕೆಯಲ್ಲೂ ವಿಳಂಬವಾಗುತ್ತಿದೆ. ಈಗಾಗಲೇ ಲಸಿಕೆ ಉತ್ಪಾದನೆ ಹೆಚ್ಚಿಸಲು ಕೇಂದ್ರ ಹಲವು ಕ್ರಮ ಕೈಗೊಂಡಿದೆ. ಇದೀಗ ಮತ್ತೆರೆಡು ಲಸಿಕಾ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕೇಂದ್ರ ಮುಂದಾಗಿದೆ.

ಕೋವಿಶೀಲ್ಡ್ ಲಸಿಕೆಗೆ ಅನುಮತಿ; 9 ಯುರೋಪಿಯನ್ ರಾಷ್ಟ್ರಗಳ ರಾಷ್ಟ್ರೀಯ ಪ್ರಯಾಣ ಪಟ್ಟಿಗೆ ಸೇರ್ಪಡೆ!

Tap to resize

Latest Videos

ಕೊರೋನಾ ವೈರಸ್ ಸಾಂಕ್ರಾಮಿಕ ಹಿನ್ನಲೆಯಲ್ಲಿ ಕೋವಿಡ್ ಲಸಿಕೆ ಪರಿಗಣಿಸಿ, ಚುಚ್ಚು ಮದ್ದಿನ ತ್ವರಿತ ಪರೀಕ್ಷೆ, ಪ್ರಮಾಣೀಕರಣಕ್ಕೆ ಅನೂಕೂಲವಾಗುವಂತೆ ಸರ್ಕಾರ ಹೆಚ್ಚುವರಿ ಪ್ರಯೋಗಾಲಯ ಸ್ಥಾಪಿಸಲು ಕೇಂದ್ರ ನಿರ್ಧಾರ ತೆಗೆದುಕೊಂಡಿದೆ.  ಸದ್ಯ ಕಸೌಲಿಯಲ್ಲಿ ಕೇಂದ್ರ ಡ್ರಗ್ಸ್ ಲ್ಯಾಬೊರೇಟರಿ (ಸಿಡಿಎಲ್) ಹೊಂದಿದೆ. ದು ಭಾರತದಲ್ಲಿ ಮಾನವ ಬಳಕೆಗಾಗಿ ಉದ್ದೇಶಿಸಲಾದ ಇಮ್ಯುನೊಬಯಾಲಾಜಿಕಲ್ಸ್ (ಲಸಿಕೆಗಳು ಮತ್ತು ಆಂಟಿಸೆರಾ) ಗಳ ಪರೀಕ್ಷೆ ಮತ್ತು ಪೂರ್ವ-ಬಿಡುಗಡೆ ಪ್ರಮಾಣೀಕರಣದ ರಾಷ್ಟ್ರೀಯ ನಿಯಂತ್ರಣ ಪ್ರಯೋಗಾಲಯವಾಗಿದೆ.

ಅಪಾಕಾರಿ ಡೆಲ್ಟಾ ವೈರಸ್‌ ವಿರುದ್ಧ ಜಾನ್ಸನ್ ಲಸಿಕೆ ಪರಿಣಾಮಕಾರಿ; ಅಧ್ಯಯನ ವರದಿ!.

ಪುಣೆ ಹಾಗೂ ಹೈದರಾಬಾದ್‌ನಲ್ಲಿ ಎರಡು ಲಸಿಕಾ ಪರೀಕ್ಷಾ ಕೇಂದ್ರ ಸ್ಥಾಪನೆಯಾಗಲಿದೆ. ಈ ಮೂಲಕ ಲಸಿಕಾ ಉತ್ಪಾದನೆ ವೇಗ ಹೆಚ್ಚಾಗಲಿದೆ. ಈಗಾಗಲೇ ಬ್ಯಾಚ್ ಪರೀಕ್ಷೆ ಮತ್ತು ಲಸಿಕೆಗಳ ಗುಣಮಟ್ಟ ನಿಯಂತ್ರಣಕ್ಕಾಗಿ ಪ್ರಯೋಗಾಲಯ , ಪಿಎಂ-ಕೇರ್ಸ್ ಫಂಡ್ಸ್ ಟ್ರಸ್ಟ್ ಧನ ಸಹಾಯದೊಂದಿಗೆ, ಎರಡು ಹೊಸ ಲಸಿಕೆ ಪರೀಕ್ಷಾ ಸೌಲಭ್ಯಗಳನ್ನು ಡಿಬಿಟಿ- ಎನ್‌ಸಿಸಿಎಸ್ ಮತ್ತು ಡಿಬಿಟಿ-ಎನ್‌ಐಎಬಿಗಳಲ್ಲಿ ಕೇಂದ್ರ ಔಷಧ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ.

ಪಿಎಂ ಕೇರ್ಸ್ ಫಂಡ್‌ನಿಂದ ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದೆ. ಪರಿಣಾಮ ತಿಂಗಳಿಗೆ ಸುಮಾರು 60 ಬ್ಯಾಚ್ ಲಸಿಕೆಗಳನ್ನು ಪರೀಕ್ಷಿಸುವ ನಿರೀಕ್ಷೆಯಿದೆ.ರಾಷ್ಟ್ರದ ಬೇಡಿಕೆಯಂತೆ ಅಸ್ತಿತ್ವದಲ್ಲಿರುವ COVID-19 ಲಸಿಕೆಗಳು ಮತ್ತು ಇತರ ಹೊಸ COVID-19 ಲಸಿಕೆಗಳನ್ನು ಪರೀಕ್ಷಿಸಲು ಈ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗಿದೆ. ಇದು ಲಸಿಕೆ ತಯಾರಿಕೆ ಮತ್ತು ಸರಬರಾಜನ್ನು ಚುರುಕುಗೊಳಿಸಿಲಿದೆ.
 

click me!