
ನವದೆಹಲಿ (ಫೆ. 15): ತಪ್ಪಿತಸ್ಥರಿಗೆ ಕೋರ್ಟ್‌ಗಳು ಸಾಮಾನ್ಯವಾಗಿ ಜೈಲು ಶಿಕ್ಷೆ ಅಥವಾ ದಂಡ ವಿಧಿಸುತ್ತವೆ. ಆದರೆ, ಕೇರಳ ಹೈಕೋರ್ಟ್ ತೆರಿಗೆ ಸಂಗ್ರಹ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ ಕಾರಣಕ್ಕಾಗಿ ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಯೊಬ್ಬರಿಗೆ 100 ಸಸಿಗಳನ್ನು ನೆಡುವಂತೆ ನಿರ್ದೇಶನ ನೀಡಿದೆ.
ತಮಾಷೆ ಅಲ್ಲ! ಪೋಸ್ಟ್ ಆಫೀಸ್‌ಗೆ ಕನ್ನ ಹಾಕಿದವನಿಗೆ ಸಿಕ್ಕಿದ್ದು ಬರೀ 487 ರೂ!
ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ನಿರ್ದೇಶಕ ಕೆ.ಬಿಜು ಶಿಕ್ಷೆ ಗುರಿಯಾದ ಅಧಿಕಾರಿ. 2007ರಲ್ಲಿ ಖಾಸಗಿ ರಾಸಾಯನಿಕ ಕೈಗಾರಿಕಾ ಕಂಪನಿಯೊಂದಕ್ಕೆ ನೀಡಲಾದ ತೆರಿಗೆ ವಿನಾಯಿತಿ ಆದೇಶವನ್ನು ಜಾರಿ ಮಾಡಲು 10 ವರ್ಷ ವಿಳಂಬ ಆದ ಕಾರಣಕ್ಕೆ ಈ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ತೆರಿಗೆ ಹಣದಲ್ಲಿ 5 ಲಕ್ಷ ರು. ವಿನಾಯಿತಿ ನೀಡಿತ್ತು. ಆದರೆ, ಆದೇಶದಂತೆ ಪ್ರಕರಣ ಇತ್ಯರ್ಥಪಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ