'ಮೋದಿ ರಜೆ ಇಲ್ಲದೇ ಕೆಲಸ ಮಾಡುವುದು ವಿಶೇಷವಲ್ಲ'

By Suvarna News  |  First Published Feb 15, 2020, 3:43 PM IST

ಸರ್ಕಾರಿ ನೌಕರರ ಕೆಲಸವನ್ನು ಐದು ದಿನಕ್ಕೆ ಇಳಿಸಿದ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಲು ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದೆ.


ಮುಂಬೈ (ಫೆ. 15): ಸರ್ಕಾರಿ ನೌಕರರ ಕೆಲಸವನ್ನು ಐದು ದಿನಕ್ಕೆ ಇಳಿಸಿದ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಲು ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದೆ.

3 ಗಂಟೆ ಇರಲಿರುವ ಟ್ರಂಪ್‌ಗಾಗಿ 100 ಕೋಟಿ ರೂ. ಖರ್ಚು ಮಾಡಿದ ಸರ್ಕಾರ!

Latest Videos

undefined

ಪ್ರಧಾನಿ ಮೋದಿ ರಜೆ ಪಡೆಯದೇ ಕೆಲಸ ಮಾಡುವುದು ವಿಶೇಷವೇನಲ್ಲ. ಪ್ರಧಾನಿಗಳು ವಿಮಾನದಲ್ಲಿ, ಐಷಾರಾಮಿ ಕಾರಲ್ಲಿ ಪ್ರಯಾಣಿಸುತ್ತಾರೆ. ಅವರಿಗೆ ರಜೆಯ ಅವಶ್ಯಕತೆ ಇರುವುದಿಲ್ಲ. ಆದರೆ ಸಾಮಾನ್ಯ ನೌಕರರು ಸಾರ್ವಜನಿಕ ಸಾರಿಗೆ ಬಳಸುತ್ತಾರೆ.ಹಾಗಾಗಿ ಅವರಿಗೆ ರಜೆ ಹಾಗೂ ವಿಶ್ರಾಂತಿಯ ಅಗತ್ಯವಿದೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ. ಇದೇ ವೇಳೆ ರೈತರು, ಕಾರ್ಮಿಕರಿಗೂ ಇದೇ ರೀತಿಯ ರಜೆಯ ಅವಶ್ಯಕತೆ ಇದೆ ಎಂದು ಅದು ಪ್ರತಿಪಾದಿಸಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ, ನಂತರ ಸರಕಾರ ರಚಿಸುವಾಗ ಕೈ ಕೊಟ್ಟಿತ್ತು. ಎನ್‌ಸಿಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದೆ. ಅದಕ್ಕೂ ಮುನ್ನ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಶಿವಸೇನೆ ಮೋದಿ ವಿರುದ್ಧ ಒಂದಲ್ಲ ಒಂದು ವಿಷಯವಾಗಿ ಹರಿಹಾಯುತ್ತಲೇ ಇತ್ತು. ಒಟ್ಟಿನಲ್ಲಿ ಸದಾ ಪ್ರಧಾನಿ ಮೋದಿ ಕಿಡಿಕಾರುವ ಸೇನೆ ಇದೀಗ ಮೋದಿ ರಜೆ ತೆಗೆದುಕೊಳ್ಳದೇ ಕೆಲಸ ಮಾಡುವ ವೈಖರಿಯನ್ನು ವಿಭಿನ್ನವಾಗಿ ಟೀಸಿಸಿದೆ. 

ಈ ಬಗ್ಗೆ ಸುವರ್ಣನ್ಯೂಸ್.ಕಾಮ್ ಫೇಸ್‌ಬುಕ್ ಹಾಕಿದ ಪೋಲ್‌ಗೆ ಪ್ರತಿಕ್ರಿಯೆ ಬಂದಿದ್ದು ಹೀಗೆ...

ಫೆಬ್ರವರಿ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!