* ಎಲ್ಲ ಅರ್ಹ ವಯಸ್ಕರಿಗೂ ಶೀಘ್ರ ಬೂಸ್ಟರ್ ಡೋಸ್?
* ವಿಶ್ವದಾದ್ಯಂತ ಮತ್ತೆ ಕೋವಿಡ್ ಸೋಂಕಿನ ಪ್ರಮಾಣ ಏರಿಕೆ ಹಿನ್ನೆಲೆ
* ಬೂಸ್ಟರ್ ಡೋಸ್ ಪಡೆದವರಿಗೆ ಮಾತ್ರ ಕೆಲವೆಡೆ ಪ್ರವೇಶ ಕಾರಣ
ನವದೆಹಲಿ(ಮಾ.22): ವಿಶ್ವದ ವಿವಿಧ ದೇಶಗಳಲ್ಲಿ ಕೋವಿಡ್(Covid-19) ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ(India) ಎಲ್ಲ ಅರ್ಹ ವಯಸ್ಕರಿಗೂ ಕೋವಿಡ್ ಲಸಿಕೆಯ ಬೂಸ್ಟರ್ ಡೋಸುಗಳನ್ನು ಒದಗಿಸುವ ಕುರಿತು ಕೇಂದ್ರ ಸರ್ಕಾರ(Central Government) ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಬೂಸ್ಟರ್ ಡೋಸ್(Booster Dose) ನೀಡಲಾಗುತ್ತಿದೆ. ಇಸ್ರೇಲಿನಂತಹ ಕೆಲವು ದೇಶಗಳಿಗೆ ಪ್ರಯಾಣಿಸಲು ಬೂಸ್ಟರ್ ಡೋಸುಗಳನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯರು ವಿದೇಶಗಳಿಗೆ ಪ್ರಯಾಣಿಸಲು ಕಷ್ಟವಾಗುತ್ತಿದೆ. ಹೀಗಾಗಿ ಎಲ್ಲ ಅರ್ಹ ವಯಸ್ಕರಿಗೂ ಉಚಿತವಾಗಿ ಬೂಸ್ಟರ್ ಡೋಸನ್ನು ಒದಗಿಸುವ ಕುರಿತು ಸರ್ಕಾರ ಚರ್ಚೆ ನಡೆಸಿದೆ. ಆದರೆ ಇದರ ಬಗ್ಗೆ ಇನ್ನೂ ಯಾವುದೇ ನಿರ್ಣಯ ತೆಗೆದುಕೊಳ್ಳಲಾಗಿಲ್ಲ. ಶೀಘ್ರದಲ್ಲೇ ಸಂಸತ್ತಿನಲ್ಲಿ ಬೂಸ್ಟರ್ ಡೋಸುಗಳ ಕುರಿತು ನಿರ್ಣಯವನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
undefined
Covid-19 Vaccine: 3ನೇ ಡೋಸ್‌ಗೆ ಮುಂಚೂಣಿ ಕಾರ್ಯಕರ್ತರೇ ಹಿಂದೇಟು..!
ಅಮೆರಿಕ, ಯುರೋಪ ಹಾಗೂ ಏಷ್ಯಾದ ಹಲವಾರು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಭಾರತದಲ್ಲಿ ಸಾರ್ವಕಾಲಿಕ ಕನಿಷ್ಟಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಈಗಾಗಲೇ 181.39 ಜನರಿಗೆ ಕೋವಿಡ್ ಲಸಿಕೆಯ 2 ಡೋಸುಗಳನ್ನು ಒದಗಿಸಲಾಗಿದೆ. ಹಾಗೂ ಸುಮಾರು 2 ಕೋಟಿ ಬೂಸ್ಟರ್ ಡೋಸುಗಳನ್ನು ನೀಡಲಾಗಿದೆ.
ಮಾರ್ಚ್ 16 ರಿಂದ 12-14 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ, 60+ ಆದವರಿಗೆ ಬೂಸ್ಟರ್!
ನವದೆಹಲಿ(ಮಾ.14): ಕೇಂದ್ರ ಸರ್ಕಾರ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ನಿರ್ಧರಿಸಿದೆ. ಮಾರ್ಚ್ 16ರಿಂದ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಆರಂಭವಾಗಲಿದೆ. ಇದರೊಂದಿಗೆ, 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಈಗ ಕೊರೋನಾ ಬೂಸ್ಟರ್ ಡೋಸ್ ಪಡೆಯಲು ಸಾಧ್ಯವಾಗುತ್ತದೆ. ಸೋಮವಾರ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಮಕ್ಕಳ ಪೋಷಕರು ಮತ್ತು 60 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸಿದ್ದರು.
ಜನವರಿ 3, 2022 ರಿಂದ ಸರ್ಕಾರವು 15 ರಿಂದ 17 ವರ್ಷ ವಯಸ್ಸಿನ ಹದಿಹರೆಯದವರಿಗೆ ಲಸಿಕೆ ಹಾಕಲು ಪ್ರಾರಂಭಿಸಿದೆ ಎಂಬುವುದು ಉಲ್ಲೇಖನೀಯ. ದೇಶದಲ್ಲಿ ಈ ವಯೋಮಾನದ ಸುಮಾರು 7.5 ಕೋಟಿ ಮಕ್ಕಳಿದ್ದಾರೆ. ಭಾರತದಲ್ಲಿ 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಈಗಾಗಲೇ ಅನುಮೋದನೆ ಪಡೆದಿದೆ. ಈ ವಯೋಮಾನದವರಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಸಹ ಅನುಮೋದನೆಯನ್ನು ಪಡೆದುಕೊಂಡಿದೆ.
Booster Dose: ಒಮಿಕ್ರೋನ್ ವಿರುದ್ಧ ಬೂಸ್ಟರ್ ಡೋಸ್ ಪರಿಣಾಮಕಾರಿ: ಅಧ್ಯಯನ
ಲಸಿಕೆ ಸಂಖ್ಯೆ 180 ಕೋಟಿ ದಾಟಿದೆ
ಭಾರತದಲ್ಲಿ ಕೊರೋನಾ ಲಸಿಕೆಗಳ ಸಂಖ್ಯೆ 180.19 ಕೋಟಿ ದಾಟಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ 2,503 ಹೊಸ ಪ್ರಕರಣಗಳು ವರದಿಯಾಗಿವೆ, ಕಳೆದ 680 ದಿನಗಳಲ್ಲಿ ಇದು ಭಾರತದ ಅತ್ಯಂತ ಕನಿಷ್ಟ ಪ್ರಕರಣಗಳಾಗಿವೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 36,168 ಆಗಿದೆ, ಇದು 675 ದಿನಗಳ ಕನಿಷ್ಠವಾಗಿದೆ. ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ 0.08% ರಷ್ಟಿವೆ.
ದೇಶದಲ್ಲಿ ಚೇತರಿಕೆ ದರ ಮತ್ತು ಪರೀಕ್ಷೆ
ಭಾರತದ ಚೇತರಿಕೆ ದರ 98.72%. ಕಳೆದ 24 ಗಂಟೆಗಳಲ್ಲಿ 4,377 ರೋಗಿಗಳು ಗುಣಮುಖರಾಗಿದ್ದಾರೆ ಮತ್ತು ಒಟ್ಟು ಗುಣಮುಖರಾದ ರೋಗಿಗಳ ಸಂಖ್ಯೆ (ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ) ಈಗ 4,24,41,449 ಆಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 5,32,232 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತ ಇದುವರೆಗೆ ಒಟ್ಟು 77.90 ಕೋಟಿ (77,90,52,383) ಪರೀಕ್ಷೆಗಳನ್ನು ನಡೆಸಿದೆ. ಸಾಪ್ತಾಹಿಕ ಮತ್ತು ದೈನಂದಿನ ಧನಾತ್ಮಕ ದರಗಳಲ್ಲಿ ಸ್ಥಿರವಾದ ಇಳಿಕೆ ಕಂಡುಬಂದಿದೆ. ದೇಶದಲ್ಲಿ ಸಾಪ್ತಾಹಿಕ ಸಕಾರಾತ್ಮಕತೆಯ ದರವು ಪ್ರಸ್ತುತ 0.47% ಮತ್ತು ದೈನಂದಿನ ಧನಾತ್ಮಕತೆಯ ದರವು 0.47% ಎಂದು ವರದಿಯಾಗಿದೆ.