ಚೆನ್ನೈ(ನ.20): ಕೊರೋನಾ ವೈರಸ್(Coronavirus) ವಕ್ಕರಿಸಿದ ಬಳಿಕ ಕ್ವಾರಂಟೈನ್, ಐಸೋಲೇಶನ್ ಸಾಮಾನ್ಯವಾಗಿದೆ. ಅದರಲ್ಲೂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಎಲ್ಲರೂ ಕೋವಿಡ್ ಪ್ರೋಟೋಕಾಲ್ ಪಾಲಿಸಲೇಬೇಕು. ಸಿಬ್ಬಂದಿಗಳಿಗೆ ಸಮಸ್ಯೆಯಾಗಬಾರದು ಎಂದು ಹಲವು ಆಸ್ಪತ್ರೆಗಳು ಪ್ರತ್ಯೇಕ ಕ್ವಾರಂಟೈನ್(quarantine) ಸೆಂಟರ್ ಎರ್ಪಾಟು ಮಾಡಿತ್ತು. ಹೀಗೆ ವೈದ್ಯರಿಗೆ(Doctors) ಆಸ್ಪತ್ರೆ ಆಡಳಿತ ಮಂಡಳಿ ಹೊಟೆಲ್‌ನಲ್ಲಿ ಕ್ವಾರಂಟೈನ್‌ಗೆ ರೂಂ ನೀಡಲಾಗಿತ್ತು. ಆದರೆ ಇದೇ ಕ್ವಾರಂಟೈನ್‌ನಲ್ಲಿ ಇಬ್ಬರು ವೈದ್ಯರು ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ಸರ್ಕಾರಿ ಆಸ್ಪತ್ರೆ(Governmet Hospital) ವೈದ್ಯರ ಕಾಮಕ್ಕೆ ಸಹದ್ಯೋಗಿ ಇನ್ನಿಲ್ಲದ ಸಂಕಟ ಪಡಬೇಕಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಕರ್ತವ್ಯದಲ್ಲಿದ್ದ ವೈದ್ಯರು, ನರ್ಸ್ ಸೇರಿದಂತೆ ಇತರ ಸಿಬ್ಬಂದಿಗಳಿಗೆ ಸರ್ಕಾರಿ ಆಸ್ಪತ್ರೆ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿರುವ ರೂಮ್ ವ್ಯವಸ್ಥೆ ಮಾಡಿಕೊಟ್ಟಿತು. ಇಷ್ಟು ವ್ಯವಸ್ಥೆ ಮಾಡಿಕೊಟ್ಟಿದ್ದೇ ವೈದ್ಯರೊಳಗಿದ್ದ ಕಾಮುಕ ಭಾವನೆಗೆ ರೆಕ್ಕೆ ಪುಕ್ಕ ಸೇರಿಕೊಂಡಿತು.
Suicide; ಭೌತಶಾಸ್ತ್ರ ಶಿಕ್ಷಕನಿಂದ ನಿರಂತರ ದೌರ್ಜನ್ಯ, ನೇಣಿಗೆ ಶರಣಾದ ಪಿಯು ಸ್ಟುಡೆಂಟ್!
ಕೋವಿಡ್ ಕರ್ತವ್ಯ(Covid Duty) ಮುಗಿಸಿ ಹೊಟೆಲ್‌ಗೆ ತೆರಳಿದ ವೈದ್ಯೆ ನೇರವಾಗಿ ತನ್ನ ಕೊಠಡಿಗೆ ತೆರಳಿ ವಿಶ್ರಾಂತಿಗೆ ಜಾರಿದ್ದಾರೆ. ಆದರೆ ಇತ್ತ 35 ವರ್ಷ ಹಾಗೂ 28 ವರ್ಷದ ಇಬ್ಬರು ವೈದ್ಯರು ತಮ್ಮ ರೂಂನಿಲ್ಲಿ ಸಹದ್ಯೋಗಿಯನ್ನು ಮಂಚಕ್ಕೆ ಕರೆಸಲು ಭಾರಿ ಪ್ಲಾನ್ ಮಾಡಿದ್ದಾರೆ. ತಡ ರಾತ್ರಿ ಇಬ್ಬರು ವೈದ್ಯರು ನೇರವಾಗಿ ಸಹದ್ಯೋಗಿ ಕೊಠಡಿಗೆ ತೆರಳಿ ತಕ್ಷಣ ನೆರವು ಬೇಕು ಎಂದು ಕೇಳಿದ್ದಾರೆ. ಪ್ರತಿ ದಿನ ಒಂದೇ ಆಸ್ಪತ್ರೆಯಲ್ಲಿ ಕೋವಿಡ್ ಕರ್ತವ್ಯದಲ್ಲಿರುವ ವೈದ್ಯರು ನಡು ರಾತ್ರಿಯಲ್ಲಿ ಸಹಾಯ ಕೇಳಿದ್ದಾರೆ. ನೆರವು ನೀಡಲು ಬಾಗಿಲು ತೆರೆದು ವಿಚಾರಿಸಿದ್ದಾರೆ.
ಕೊಠಡಿಯೊಳಕ್ಕೆ ಸೇರಿಕೊಂಡ ಇಬ್ಬರು ವೈದ್ಯರು ನೇರವಾಗಿ ಆಕೆಯನ್ನು ಸ್ಪರ್ಶಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆಕೆಯನ್ನು ಬಲವಂತವಾಗಿ ಹಿಡಿದು ಅತ್ಯಾಚಾರ ಎಸಗಿದ್ದಾರೆ. ಇಬ್ಬರು ವೈದ್ಯರು ಅತ್ಯಾಚಾರ ಎಸಗಿ ಹೊಟೆಲ್‌ನಿಂದ(Chennai hotel) ಪರಾರಿಯಾಗಿದ್ದಾರೆ.
ಅಪ್ರಾಪ್ತೆ ಮೇಲೆ 6 ತಿಂಗಳಲ್ಲಿ 400 ಮಂದಿ ಅತ್ಯಾಚಾರ!
ಘಟನೆಯಿಂದ ಮಾನಸಿಕ ಹಾಗೂ ದೈಹಿಕ ಆಘಾತಕ್ಕೊಳಗಾದ ಸಹದ್ಯೋಗಿ ಮರುದಿನ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದಾಳೆ. ಕುಟುಂಬಸ್ಥರಿಗೆ ತನಗೆ ತೀವ್ರ ಆರೋಗ್ಯ ಸಮಸ್ಯೆ ಇದೆ ಎಂದಿದ್ದಾಳೆ. ಬಳಿಕ ಕುಟುಂಬಸ್ಥರು ಹೊಟೆಲ್‌ಗೆ ಆಗಮಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ವೈದ್ಯೆ , ಸುಧಾರಿಸಿಕೊಂಡು ಪೋಷಕರಲ್ಲಿ ಘಟನೆ ವಿವರಿಸಿದ್ದಾರೆ.
ಪೋಷಕರ ಮಾತಿನಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ಸ್ವೀಕರಿಸಿದ ಚೆನ್ನೈ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ. ಪೊಲೀಸರು ವೈದ್ಯಕೆ ಕೌನ್ಸಿಲಿಂಗ್ ನೆರವು ನೀಡಿದ್ದಾರೆ. ಇತ್ತ ಹೊಟೆಲ್ ಸಿಸಿಟಿವಿಯಲ್ಲಿ ವೈದ್ಯರು ಸಹದ್ಯೋಗಿ ಕೊಠಡಿಗೆ ತೆರಳಿ ಕೆಲ ಹೊತ್ತಿನ ಬಳಿಕ ಅಲ್ಲಿಂದ ಪರಾರಿಯಾಗುತ್ತಿರುವ ದೃಶ್ಯ ಪತ್ತೆಯಾಗಿದೆ.
Gang Rape Case:ಅಖಿಲೇಶ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ SP ನಾಯಕನಿಗೆ ಜೀವಾವಧಿ ಶಿಕ್ಷೆ!
ಕೌನ್ಸಿಲಿಂಗ್, ಪೋಷಕರ ಬೆಂಬಲದಿಂದ ವೈದ್ಯೆ ಕೊಂಚ ಸುಧಾರಿಸಿಕೊಂಡಿದ್ದಾರೆ. ಇದೀಗ 2 ತಿಂಗಳ ಬಳಿಕ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇತ್ತ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಇತರ ಪ್ರಕರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕ್ವಾರೈಟನ್ ಸೆಂಟರ್, ಐಸೋಲೇಶನ್ ವಾರ್ಡ್‌ಗಲ್ಲಿ ಈ ರೀತಿ ಅತ್ಯಾಚಾರ ನಡೆದಿರುವ ಕೆಲ ಘಟನೆಗಳು ವರದಿಯಾಗಿದೆ.
ವಿದೇಶಗಳಲ್ಲಿ ಸದ್ಯ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಭಾರತದ ಆತಂಕಕ್ಕೆ ಕಾರಣವಾಗಿದೆ. ಹೆಚ್ಚಾಗಿ ಡೆಲ್ಟಾ ವೈರಸ್ ತಳಿಗಳು ಕಾಣಿಸಿಕೊಳ್ಳುತ್ತಿದೆ. ಪಶ್ಚಿಮ ಯೂರೋಪ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೊರೋನಾ ಮೀತಿಮೀರುತ್ತಿದೆ. ಆಸ್ಟ್ರಿಯಾ ಲಾಕ್‌ಡೌನ್ ಘೋಷಿಸಿದೆ. ಹೀಗಾಗಿ ಭಾರತದಲ್ಲಿ ಎಚ್ಚರಿಕೆ ಕರೆಗಂಟೆಗಳು ಮೊಳಗುತ್ತಿದೆ.