Haryana: ಗೋಮೂತ್ರ ಸೇವನೆ ರಕ್ತದೊತ್ತಡದ ಸಮಸ್ಯೆಗೆ ಪರಿಹಾರ : ವೈದ್ಯನ ಸಲಹೆ!

By Suvarna NewsFirst Published Nov 19, 2021, 10:21 PM IST
Highlights

*ವೈದ್ಯ ಗೋಮೂತ್ರ ಕುಡಿದ ವಿಡಿಯೋ ವೈರಲ್‌
*ಗೋಮುತ್ರ ಸೇವನೆಯಿಂದ ಸಹಜ ಹೆರಿಗೆ
*ರಕ್ತದೊತ್ತಡಕ್ಕೂ ಗೋಮೂತ್ರ ರಾಮಬಾಣ
*ದೇಹ, ಮನಸ್ಸು ಶುದ್ಧಿಗಾಗಿ ಗೋವಿನ ಸಗಣಿ
*ಸ್ವತ: ಗೋಮೂತ್ರ ಸೇವಿಸಿದ  ವೈದ್ಯನ ಸಲಹೆ

ಹರಿಯಾಣ(ನ.19): ಗೋಮೂತ್ರ (Cow Urine) ಮತ್ತು ಗೋಮೂತ್ರದ ಔಷಧೀಯ ಪ್ರಯೋಜನಗಳ ಬಗ್ಗೆ ಸಚಿವರು ಸೇರಿದಂತೆ ಜನರು ಸಾಮಾಜಿಕ ಮಾಧ್ಯಮದಲ್ಲಿ (Social Media) ಹೇಳಿಕೊಳ್ಳುವುದು ಸಾಮಾನ್ಯ. ಅಲ್ಲದೇ ಗೋಮೂತ್ರ ಬಳಕೆಯಿಂದಾಗುವ ಪ್ರಯೋಜನಗಳ ಬಗ್ಗೆ ಜನರು ಕ್ಯಾಮೆರಾ ಮುಂದೆ ಬಂದು ತಮ್ಮ ಅಭಿಪ್ರಯಾ (Opinion) ಹೇಳುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗುತ್ತವೆ. ಕೆಲವು ಬಾರಿ ಈ ವಿಷಯದ ಪರ ವಿರೋಧದ ಚರ್ಚೆಗಳು ಕೂಡ ನಡೆಯುತ್ತವೆ. ಈಗ ವಿಷಯಕ್ಕೆ  ಇನ್ನಷ್ಟು ಪುಷ್ಟಿ ಎಂಬಂತೆ, ಹರಿಯಾಣದ ವೈದ್ಯರೊಬ್ಬರು ಹಸುವಿನ  ಸಗಣಿ  (Cow Dung) ತಿಂದು  ಗೋಮೂತ್ರವನ್ನು ಕುಡಿದು ದೇಹ, ಮನಸ್ಸು ಮತ್ತು ಆತ್ಮವನ್ನು (Body Mind and Soul) ಶುದ್ಧಗೊಳಿಸಿಕೊಳ್ಳಿ ಎಂದು ವಿಡಿಯೋವೊಂದರಲ್ಲಿ ಹೇಳಿದ್ದಾರೆ.

ರಕ್ತದೊತ್ತಡಕ್ಕೂ ಗೋಮುತ್ರ ರಾಮಬಾಣ!

ಹರಿಯಾಣದ ಈ ವೈರಲ್ ಲೈವ್ (live) ವೀಡಿಯೊದಲ್ಲಿ, ಕರ್ನಾಲ್‌ನ ಡಾ ಮನೋಜ್ ಮಿತ್ತಲ್ (Manoj Mittal) ಅವರು ಕೆಲವು ಗೋವುಗಳಿಂದ ಸುತ್ತುವರಿದ ಹಸುವಿನ ಕೊಟ್ಟಿಗೆಯಲ್ಲಿ ನಿಂತಿದ್ದಾರೆ ಮತ್ತು ಕೈಯಲ್ಲಿ ಸಗಣಿಯನ್ನು ಹಿಡಿದಿದ್ದಾರೆ. ಅವರು ‘ಪಂಚಗವ್ಯ’ ಅಥವಾ ಪ್ರಾಣಿ ಒದಗಿಸುವ ಐದು ಅಂಶಗಳ ಬಗ್ಗೆ ವಿವರಿಸುವಾಗ, ಅವರು ಸ್ವಲ್ಪ ಪ್ರಮಾಣದ ಹಸುವಿನ ಸಗಣಿಯನ್ನು ಎತ್ತಿಕೊಂಡು ಅದನ್ನು ಬಾಯಿಗೆ ಹಾಕಿಕೊಳ್ಳುವುದನ್ನು ಕಾಣಬಹುದು. ಅವರ ತಾಯಿ ಅದನ್ನೇ ತಿನ್ನುವ ಮೂಲಕ ಉಪವಾಸ (Fast) ಮುರಿಯುತ್ತಿದ್ದರು ಎಂದು ಅವರು ಹೇಳಿದ್ದಾರೆ. ಜತಗೆ  ಗೋಮೂತ್ರವನ್ನು ಸ್ವತಃ ಕುಡಿಯುವ ಮೂಲಕ ಇದು  ದೇಹವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿದೆ ಮತ್ತು ರಕ್ತದೊತ್ತಡದ (Blood Pessure) ಸಮಸ್ಯೆಗಳನ್ನು ಹತೋಟಿಯಲ್ಲಿಡುತ್ತದೆ ಎಂದು ಹೇಳಿದ್ದಾರೆ.

ಸಗಣಿ ತಿನ್ನುತ್ತಿರುವ ವಿಡಿಯೋ ವೈರಲ್!

ಪ್ರಾಣಿಗಳ ಮೇಲೆ ಕೈಗಳನ್ನು ಉಜ್ಜುವುದು ಸಹ ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಾಗೆಯೇ ಮಕ್ಕಳ ಸಾಮಾನ್ಯ ಹೆರಿಗೆಗೆ (Normal delivery) ಮಹಿಳೆಯರು ಹಸುವಿನ ಸಗಣಿ ತಿನ್ನಬೇಕು ಎಂದು ಹೇಳಿದ್ದಾರೆ.  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ವಿವಿದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾರೆ. ಗೋಮುತ್ರ ಕುಡಿ ಸಗಣಿ ಸೇವಿಸಿದ ವೈದ್ಯನನ್ನು ಕೆಲವರು ಟ್ರೋಲ್‌ ಮಾಡಿದರೆ ಇನ್ನು ಕೆಲವರು ಅವರ ಬೆಂಬಲಕ್ಕ ನಿಂತು ಗೋಮುತ್ರದಿಂದಾಗುವ ಪ್ರಯೋಹನಗಳ ಬಗ್ಗೆ ವಿವರಿಸಿದ್ದಾರೆ.

ಗೋಮೂತ್ರವು ಆರ್ಥಿಕತೆಗೆ ವೇಗ ನೀಡುತ್ತವೆ: ಸಿಎಂ ಶಿವರಾಜ್ ಸಿಂಗ್ ಚೌಹಾಣ್!

ಇತ್ತೀಚೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj singh Chauhan) ಅವರು  ಹಸುಗಳು ಮತ್ತು ಅವುಗಳ ಸಗಣಿ, ಮೂತ್ರ ಉತ್ತಮ ಆರ್ಥಿಕ ಸಾಮರ್ಥ್ಯವನ್ನು (Economy) ಹೊಂದಿದೆ ಮತ್ತು ಅವು ರಾಜ್ಯ ಮತ್ತು ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಹೇಳಿದ್ದರು. ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಚೌಹಾಣ್, "ಗೋವುಗಳು, ಅವುಗಳ ಸಗಣಿ ಮತ್ತು ಮೂತ್ರವು ರಾಜ್ಯ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಸರಿಯಾದ ವ್ಯವಸ್ಥೆ ಜಾರಿಗೆ ಬಂದರೆ  ಈ ವಿಚಾರದಲ್ಲಿ ಯಶಸ್ವಿಯಾಗುತ್ತೇವೆ (Succesful) ಎಂದು ನನಗೆ ವಿಶ್ವಾಸವಿದೆ ಎಂದಿದ್ದರು. 

ಪುತ್ತೂರಿನಲ್ಲಿ ಎಂಜಿನಿಯರಿಂಗ್‌ ಪದವೀಧರನ ಕೃಷಿ ಸಾಧನೆ

ಭೋಪಾಲ್‌ನಲ್ಲಿ ನಡೆದ ಭಾರತೀಯ ಪಶುವೈದ್ಯಕೀಯ ಸಂಘದ ಮಹಿಳಾ ವಿಭಾಗದ 'ಶಕ್ತಿ 2021' ಸಮಾವೇಶದಲ್ಲಿ ಮಾತನಾಡಿದ್ದ ಸಿಎಂ ಚೌಹಾಣ್, ಗೋವಿನ ಸಗಣಿ ಮತ್ತು ಮೂತ್ರದಿಂದ ಈಗ ಅನೇಕ ವಸ್ತುಗಳನ್ನು ತಯಾರಿಸಲಾಗುತ್ತಿದೆ ಎಂದು ವಿವರಿಸಿದ್ದರು. “ರಾಜ್ಯದಲ್ಲಿ ಅನೇಕ ಜನರು ಕೆಲವು ಸ್ಮಶಾನಗಳಲ್ಲಿ ಮರದ ಬದಲಿಗೆ ಹಸುವಿನ ಸಗಣಿ ಬಳಸುತ್ತಿದ್ದಾರೆ,” ಎಂದು ಅವರು ಉಲ್ಲೇಖಿಸಿದ್ದರು.

click me!