ಹಿಂಸಾಪೀಡಿತ ಮಣಿಪುರಕ್ಕೆ 1 ವರ್ಷದ ಬಳಿಕ ಸರ್ಕಾರ

Kannadaprabha News   | Kannada Prabha
Published : Feb 04, 2026, 08:51 AM IST
Yumnam Khemchand Singh

ಸಾರಾಂಶ

ಜನಾಂಗೀಯ ಸಂಘರ್ಷದ ಕಾರಣ ಕಳೆದ ಒಂದು ವರ್ಷದಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಬಿಜೆಪಿ ನಾಯಕ ಖೇಮಚಂದ್‌ ಸಿಂಗ್‌ ಶಾಸಕಾಂಗ ಪಕ್ಷದ ನಾಯಕರಾಗಿ ಮಂಗಳವಾರ ಆಯ್ಕೆ

ನವದೆಹಲಿ: ಜನಾಂಗೀಯ ಸಂಘರ್ಷದ ಕಾರಣ ಕಳೆದ ಒಂದು ವರ್ಷದಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಬಿಜೆಪಿ ನಾಯಕ ಖೇಮಚಂದ್‌ ಸಿಂಗ್‌ ಶಾಸಕಾಂಗ ಪಕ್ಷದ ನಾಯಕರಾಗಿ ಮಂಗಳವಾರ ಆಯ್ಕೆಯಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನೇಮ್ಚಾ ಕಿಪ್‌ಗೆನ್‌ ಉಪಮುಖ್ಯಮಂತ್ರಿ

ಕುಕಿ ಮುಖಂಡೆ ಹಾಗೂ ಮಾಜಿ ಸಚಿವೆ ನೇಮ್ಚಾ ಕಿಪ್‌ಗೆನ್‌ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

2023ರಲ್ಲಿ ಕುಕಿ ಮತ್ತು ಮೈತೇಯಿ ಗುಂಪುಗಳ ನಡುವೆ ಹಿಂಸಾಚಾರ ಭುಗಿಲೆದ್ದು ಕನಿಷ್ಠ 260 ಜನ ಮೃತಪಟ್ಟಿದ್ದರು. ಪರಿಸ್ಥಿತಿ ನಿಯಂತ್ರಣ ತಪ್ಪಿ, ಕಳೆದ ವರ್ಷ ಫೆ.9ರಂದು ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿದ್ದರು. ಆ ಬಳಿಕ ಸರ್ಕಾರವನ್ನು ವಿಸರ್ಜಿಸಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಲಾಗಿತ್ತು.

ಇದೇ ಫೆ.12ಕ್ಕೆ ರಾಷ್ಟ್ರಪತಿ ಆಳ್ವಿಕೆಯ ಅವಧಿ ಮುಕ್ತಾಯ

ಇದೇ ಫೆ.12ಕ್ಕೆ ರಾಷ್ಟ್ರಪತಿ ಆಳ್ವಿಕೆಯ ಅವಧಿ ಮುಕ್ತಾಯವಾಗಲಿದೆ. ಈ ಬೆನ್ನಲ್ಲೇ ಬಿಜೆಪಿ ನೇತೃತ್ವದ ನೂತನ ಸರ್ಕಾರ ರಚನೆಯಾಗಿದೆ. 60 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ 37 ಸದಸ್ಯರನ್ನು ಹೊಂದಿದೆ. ಈ ಸರ್ಕಾರದ ಅವಧಿ 2027ರವರೆಗೆ ಇರಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Father of All Deals: ಟ್ರಂಪ್‌ ಮಣಿಸಿದ ಮೋದಿ? ಭಾರತದ ವ್ಯಾಪಾರ ಇತಿಹಾಸದಲ್ಲೇ ಮೆಗಾ ಡೀಲ್, ಇಲ್ಲಿದೆ ಪೂರ್ಣ ವಿವರ
Rahul Gandhi speech controversy: ಸ್ಪೀಕರ್‌ರತ್ತ ಕಾಗದ ಎಸೆದ 8 ಕೈ ಸಂಸದರು ಸಸ್ಪೆಂಡ್‌