ರಾಷ್ಟ್ರಪತಿ ಭವನದ ಸಭಾಂಗಣಗಳ ಆಂಗ್ಲ ಹೆಸರು ಬದಲು: ಹೊಸ ಹೆಸರು ಇಲ್ಲಿದೆ

By Kannadaprabha News  |  First Published Jul 26, 2024, 8:50 AM IST

ದೇಶದ ರಾಷ್ಟ್ರಪತಿಗಳ ನಿವಾಸವಾದ ರಾಷ್ಟ್ರಪತಿ ಭವನದ ಕೆಲ ಸಭಾಂಗಣಗಳ ಹೆಸರನ್ನು ಬದಲಿಸಲಾಗಿದೆ. ವಿಧ್ಯುಕ್ತ ಕಾರ್ಯಕ್ರಮಗಳು ನಡೆಯುವ ದರ್ಬಾರ್‌ ಹಾಲ್‌ ಹಾಗೂ ಅಶೋಕ ಹಾಲ್‌ಗಳಿಗೆ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ ಮಂಟಪ’ ಎಂದು ಗುರುವಾರ ಮರುನಾಮಕರಣ ಮಾಡಲಾಗಿದೆ.


ನವದೆಹಲಿ: ದೇಶದ ರಾಷ್ಟ್ರಪತಿಗಳ ನಿವಾಸವಾದ ರಾಷ್ಟ್ರಪತಿ ಭವನದ ಕೆಲ ಸಭಾಂಗಣಗಳ ಹೆಸರನ್ನು ಬದಲಿಸಲಾಗಿದೆ. ವಿಧ್ಯುಕ್ತ ಕಾರ್ಯಕ್ರಮಗಳು ನಡೆಯುವ ದರ್ಬಾರ್‌ ಹಾಲ್‌ ಹಾಗೂ ಅಶೋಕ ಹಾಲ್‌ಗಳಿಗೆ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ ಮಂಟಪ’ ಎಂದು ಗುರುವಾರ ಮರುನಾಮಕರಣ ಮಾಡಲಾಗಿದೆ. ರಾಷ್ಟ್ರಪತಿ ಭವನದ ವಾತಾವರಣವನ್ನು ಭಾರತದ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರತಿಬಿಂಬಿಸುವಂತೆ ಮಾಡುವ ಉದ್ದೇಶವಿದೆ ಎಂದು ರಾಷ್ಟ್ರಪತಿಗಳ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ರಾಷ್ಟ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವ ದರ್ಬಾರ್ ಹಾಲ್, ಬ್ರಿಟಿಷರ ದರ್ಬಾರಿಗೆ ಹೆಸರು ಪಡೆದಿತ್ತು. ಆದರೆ ಭಾರತ ಗಣತಂತ್ರ ದೇಶವಾದ ಬಳಿಕ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತ್ತು. ಈಗ ಅದಕ್ಕೆ ಹೊಂದಿಕೆಯಾಗುವಂತೆ ಗಣತಂತ್ರ ಮಂಟಪ ಎಂದು ಹೆಸರಿಸಲಾಗಿದೆ. ಅಂತೆಯೇ ಅಶೋಕ ಹಾಲ್ ಎಂಬ ಆಗ್ಲ ಪದವನ್ನು ಅಶೋಕ ಪಂಟಪ ಎಂದು ಬದಲಿಸಲಾಗಿದೆ. ಇದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಸಂತಸ ತಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Latest Videos

undefined

ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ಮುರ್ಮು!

ಪುಟ್ಟ ವಯಸ್ಸಿನ ವಿಧವೆಗೆ ಕೀರ್ತಿ ಚಕ್ರ ನೀಡಿ ಸಂತೈಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

click me!