Suspension of 12 Rajya Sabha Members: ಕ್ಷಮೆ ಕೇಳದೆ 12 ಸಂಸದರ ಅಮಾನತು ವಾಪಸ್‌ ಇಲ್ಲ!

Kannadaprabha News   | stockphoto
Published : Dec 01, 2021, 08:00 AM ISTUpdated : Dec 01, 2021, 08:02 AM IST
Suspension of 12  Rajya Sabha Members: ಕ್ಷಮೆ ಕೇಳದೆ 12 ಸಂಸದರ ಅಮಾನತು ವಾಪಸ್‌ ಇಲ್ಲ!

ಸಾರಾಂಶ

*ಸಂಸದರು ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿಲ್ಲ: ವೆಂಕಯ್ಯ *ದೇಶದ ಕ್ಷಮೆ ಕೇಳಿದರೆ ಸಸ್ಪೆಂಡ್‌ ಪರಿಶೀಲನೆ: ಕೇಂದ್ರ *ಸದನ ಮತ್ತು ದೇಶದ ಜನರ ಕ್ಷಮೆ ಕೇಳಬೇಕು: ಗೋಯಲ್  

ನವದೆಹಲಿ(ಡಿ. 01): ಸಂಸತ್ತಿನ  ಮುಂಗಾರು ಅಧಿವೇಶನದಲ್ಲಿ (Parliament Winter Session) ದುರ್ವರ್ತನೆ ತೋರಿದ ಕಾರಣಕ್ಕಾಗಿ ಪ್ರಸಕ್ತ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಂಡ 12 ರಾಜ್ಯಸಭಾ ಸದಸ್ಯರ ( Suspension Rajya Sabha Members) ಮೇಲಿನ ಶಿಸ್ತು ಕ್ರಮವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ರಾಜ್ಯಸಭೆಯ ಸಭಾಪತಿ ವೆಂಕಯ್ಯನಾಯ್ಡು ಸ್ಪಷ್ಟಪಡಿಸಿದ್ದಾರೆ. ಆದರೆ, ಸದಸ್ಯರು ತಮ್ಮ ವರ್ತನೆ ಬಗ್ಗೆ ಕ್ಷಮೆ ಕೇಳಿದರೆ (apologise) ಅಮಾನತು ರದ್ದು ವಿಷಯವನ್ನು ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಲಿದೆ ಎಂದು ಸಂಸದೀಯ ಖಾತೆ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಮತ್ತು ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಪೀಯೂಷ್‌ ಗೋಯಲ್‌ (Piyush Goyal) ಭರವಸೆ ನೀಡಿದ್ದಾರೆ.

ಮಂಗಳವಾರ ರಾಜ್ಯಸಭೆ ಕಲಾಪ ಆರಂಭವಾಗುತ್ತಲೇ, ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿಪಕ್ಷಗಳ ಸದಸ್ಯರು 12 ಸದಸ್ಯರ ಅಮಾನತು ಆದೇಶ ರದ್ದುಪಡಿಸಬೇಕು. ರಾಜ್ಯಸಭೆಯ ಕಲಾಪದ ನಿಯಮಗಳಿಗೆ ವಿರುದ್ಧವಾಗಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸದಸ್ಯರು ತಮ್ಮ ವರ್ತನೆಯ ಬಗೆ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ!

ಈ ವೇಳೆ ಮಧ್ಯಪ್ರವೇಶಿಸಿದ ರಾಜ್ಯಸಭೆಯ ಸಭಾಪತಿ ವೆಂಕಯ್ಯನಾಯ್ಡು, ‘12 ಸಂಸದರನ್ನು ಅಮಾನತು ಮಾಡುವ ಗೊತ್ತುವಳಿಗೆ ಒಪ್ಪಿಗೆ ನೀಡಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದೇ ಅಂತಿಮ. ಅಮಾನತುಗೊಂಡಿರುವ ಸದಸ್ಯರು ತಮ್ಮ ವರ್ತನೆಯ ಬಗೆ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ಅಷ್ಟುಮಾತ್ರವಲ್ಲ ಅವರ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಮೇಲಾಗಿ ಇದು ಕೇವಲ ಸಭಾಧ್ಯಕ್ಷರು ತೆಗೆದುಕೊಂಡ ಕ್ರಮವಲ್ಲ. ಮೇಲ್ಮನೆ ತೆಗೆದುಕೊಂಡ ಕ್ರಮ. ಎಲ್ಲಾ ನಿಯಮಗಳನ್ನು ಪಾಲಿಸಿಯೇ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟನೆ ನೀಡಿದರು.

ಸದನ ಮತ್ತು ದೇಶದ ಜನರ ಕ್ಷಮೆ ಕೇಳಬೇಕು!

ಇದೇ ವೇಳೆ ಮಾತನಾಡಿದ ಸಚಿವ ಪೀಯೂಷ್‌ ಗೋಯಲ್‌, ‘ಅಮಾನತಾದ 12 ಸದಸ್ಯರು ಸಭಾಪತಿ ಪೀಠ, ಸದನ ಮತ್ತು ದೇಶದ ಜನರ ಕ್ಷಮೆ ಕೇಳಬೇಕು’ ಎಂದು ಆಗ್ರಹ ಮಾಡಿದರು. ಮತ್ತೊಂದೆಡೆ ಪ್ರಕರಣ ಕುರಿತು ಟ್ವೀಟ್‌ (Tweet) ಮಾಡಿರುವ ಸಂಸದೀಯ ಖಾತೆ ಸಚಿವ ಪ್ರಹ್ಲಾದ್‌ ಜೋಶಿ, ‘ಸದನದ ಗೌರವ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅನಿವಾರ್ಯವಾಗಿ 12 ಸದಸ್ಯರನ್ನು ಅಮಾನತು ಮಾಡಬೇಕಾಯಿತು. ಒಂದು ವೇಳೆ ಸದಸ್ಯರು, ಪೀಠ ಮತ್ತು ಸದನದ ಕ್ಷಮೆ ಕೇಳಿದರೆ ಅಮಾನತು ರದ್ದು ಮಾಡುವ ಬಗ್ಗೆ ಸರ್ಕಾರ ಪರಿಶೀಲನೆ ಮಾಡಲಿದೆ’ ಎಂದು ಭರವಸೆ ನೀಡಿದರು.

 

 

Parliament session: ಇಡೀ ಚಳಿಗಾಲದ ಕಲಾಪ ಬಹಿಷ್ಕರಿಸಲು ವಿಪಕ್ಷಗಳ ನಿರ್ಧಾರ!?

ಆದರೆ ಸಭಾಪತಿಗಳು ಮತ್ತು ಸಚಿವ ಗೋಯಲ್‌ ಮಾತಿಗೆ ಒಪ್ಪದ ಕಾಂಗ್ರೆಸ್‌ (Congress), ಟಿಎಂಸಿ (TMC) ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಕಳೆದ ಅಧಿವೇಶನದಲ್ಲಿ ತೋರಿದ ದುರ್ವರ್ತನೆಗೆ ಈ ಅಧಿವೇಶನದಿಂದ ಅಮಾನತು ಮಾಡುವುದು ಸಂಸತ್ತಿನ ಕಾನೂನಿಗೆ ವಿರುದ್ಧ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಅಮಾನತು ಹಿಂಪಡೆಯಲು ಸಭಾಧ್ಯಕ್ಷರು ಒಪ್ಪದ ಕಾರಣ ವಿಪಕ್ಷಗಳು ಸಭಾತ್ಯಾಗ ನಡೆಸಿದವು.

Modi meets HD Deve Gowda:ಪರಿಷತ್‌ನಲ್ಲಿ ಹೊಂದಾಣಿಕೆ ಬಗ್ಗೆ ಮೋದಿ ಜೊತೆ ದೇವೇಗೌಡ ಚರ್ಚೆ

ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಂಸದರ ಅಮಾನತು ಹಿಂಪಡೆಯುವಂತೆ ಪ್ರತಿಪಕ್ಷಗಳ ಸದಸ್ಯರು ಮತ್ತೆ ಗಲಾಟೆ ಎಬ್ಬಿಸಿದರು. ಇದರಿಂದ ಕಲಾಪದ ವಾತಾವರಣ ಮತ್ತೆ ಗದ್ದಲಕ್ಕೀಡಾಯಿತು. ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು(Venkayya Naidu) ಅವರಿಗೆ ವಿರೋಧ ಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಮಾನತು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಆದರೆ ಅವರು ಅಮಾನತು ಹಿಂಪಡೆಯಲಾಗದು ರಾಜ್ಯಸಭಾ ಅಧ್ಯಕ್ಷರು ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿದ್ದಾರೆ ಎಂದಿದ್ದಾರೆ. ಇದರಿಂದ ಆಕ್ರೋಶಗೊಂಡು ಕಲಾಪದಿಂದ ಹೊರ ನಡೆದ ವಿರೋಧ ಪಕ್ಷದ ಸದಸ್ಯರು, ಲೋಕಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ(Mallikarjuna Kharge) ಅವರ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್