ಕೊರೋನಾ ಸಂಕಷ್ಟ: ಗೂಗಲ್‌ನಿಂದ ಭಾರತಕ್ಕೆ 135 ಕೋಟಿ ನೆರವು

Published : Apr 26, 2021, 01:20 PM ISTUpdated : Apr 26, 2021, 02:09 PM IST
ಕೊರೋನಾ ಸಂಕಷ್ಟ: ಗೂಗಲ್‌ನಿಂದ ಭಾರತಕ್ಕೆ 135 ಕೋಟಿ ನೆರವು

ಸಾರಾಂಶ

ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಗೂಗಲ್ ನೆರವು | 135 ಕೋಟಿ ರೂ.ಗಳ ನೆರವು ವಾಗ್ದಾನ ಮಾಡಿದ ಗೂಗಲ್

ದೆಹಲಿ(ಏ.26): ಭಾರತದಲ್ಲಿ ಕೋರೋನಾ ಉಲ್ಬಣಗೊಳ್ಳುತ್ತಿರುವುನ್ನು ನೋಡಿ ತಾನು ನೊಂದಿದ್ದೇನೆ. ದೇಶದಲ್ಲಿ ವೈದ್ಯಕೀಯ ಸರಬರಾಜು ಮತ್ತು ಬೆಂಬಲಕ್ಕಾಗಿ 135 ಕೋಟಿ ರೂ.ಗಳ ನೆರವು ವಾಗ್ದಾನ ಮಾಡಿದ್ದೇನೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಸೋಮವಾರ ಹೇಳಿದ್ದಾರೆ.

ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ ಪರಿಸ್ಥಿತಿ ನೋಡಿ ಸೋತಿದ್ದೇನೆ. ಗೂಗಲ್ ಮತ್ತು ಗೂಗ್ಲರ್‌ಗಳು 135 ಕೋಟಿ ನೆರವು ನೀಡಲಿದೆ ಎಂದು ಪಿಚ್ಚೈ ಟ್ವೀಟ್ ಮಾಡಿದ್ದಾರೆ.

ಮೊದಲೇ ಎಚ್ಚರಿಸಿದ್ದರೂ ನಿರ್ಲಕ್ಷಿಸಿದ್ದ ಸರ್ಕಾರ?

ಗೂಗಲ್ ಇಂಡಿಯಾ ಮುಖ್ಯಸ್ಥ ಸಂಜಯ್ ಗುಪ್ತಾ ಕಷ್ಟದ ಸಂದರ್ಭದಲ್ಲಿ ಭಾರತವನ್ನು ಬೆಂಬಲಿಸಲು ಕಂಪನಿಯು ದೇಶದ ಸ್ಥಳೀಯ ಆಡಳಿತದೊಂದಿಗೆ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

ಇಂದು ನಾವು ಭಾರತಕ್ಕೆ 135 ಕೋಟಿ ರೂ. ಘೋಷಿಸುತ್ತಿದ್ದೇವೆ. ಕೊರೋನಾದಿಂದ ಹೆಚ್ಚು ತೊಂದರೆಗೊಳಗಾದ ಕುಟುಂಬಗಳಿಗೆ ತಮ್ಮ ದೈನಂದಿನ ಖರ್ಚುಗಳನ್ನು ಭರಿಸಲು ಮತ್ತು ಹೆಚ್ಚು ಅಗತ್ಯವಿರುವ ಸ್ಥಳಕ್ಕೆ ಆಮ್ಲಜನಕ ಮತ್ತು ಕೊರೋನಾ ಪರೀಕ್ಷಾ ಉಪಕರಣಗಳು ಸೇರಿದಂತೆ ತುರ್ತು ವೈದ್ಯಕೀಯ ಸರಬರಾಜುಗಳನ್ನು ಪಡೆಯಲು ಸಹಾಯ ಮಾಡಲಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್