
ನವದೆಹಲಿ/ ಬೆಂಗಳೂರು(ಜೂ.06): ದೇಶದಲ್ಲಿ ಕಳೆದ ತಿಂಗಳು ಮಿತಿಮೀರಿ ಅಬ್ಬರಿಸಿದ್ದ ಕೊರೋನಾ 2ನೇ ಅಲೆ ಕೊನೆಗೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗತೊಡಗಿದೆ. ಶನಿವಾರದ ವೇಳೆಗೆ ದೇಶ, ಕರ್ನಾಟಕ ಹಾಗೂ ಬೆಂಗಳೂರು ಮೂರೂ ಕಡೆ ಕೋವಿಡ್ ಸೋಂಕಿನ ಪ್ರಮಾಣ, ಸಾವು ಹಾಗೂ ಪಾಸಿಟಿವಿಟಿ ದರ ಇಳಿಕೆಯಾಗಿದೆ. ಅದರೊಂದಿಗೆ 2ನೇ ಅಲೆ ತಣ್ಣಗಾಗುವ ಸುಳಿವು ದೊರೆತಿದೆ.
ಶನಿವಾರ ದೇಶದಲ್ಲಿ 1.2 ಲಕ್ಷ ಸೋಂಕು ಪತ್ತೆಯಾಗಿದೆ. ಇದು ಕಳೆದ 58 ದಿನಗಳ ಕನಿಷ್ಠವಾಗಿದೆ. ಕಳೆದ ತಿಂಗಳು ದೈನಂದಿನ ಸೋಂಕಿನ ಸಂಖ್ಯೆ 4 ಲಕ್ಷ ದಾಟಿತ್ತು. ಶನಿವಾರ ಪಾಸಿಟಿವಿಟಿ ದರ ಕೂಡ ಶೇ.5.78ಕ್ಕೆ ಇಳಿಕೆಯಾಗಿದ್ದು, ಸಾವಿನ ಸಂಖ್ಯೆಯೂ 3380ಕ್ಕೆ ಇಳಿದಿದೆ. ದೇಶದಲ್ಲೀಗ ಸಕ್ರಿಯ ಸೋಂಕಿತರ ಸಂಖ್ಯೆ 15.5 ಲಕ್ಷಕ್ಕೆ ಇಳಿಕೆಯಾಗಿದೆ.
ಕರ್ನಾಟಕದಲ್ಲಿ ಶನಿವಾರ 13,800 ಪ್ರಕರಣ ಪತ್ತೆಯಾಗಿದ್ದು, ಇದು .... ದಿನಗಳ ಕನಿಷ್ಠವಾಗಿದೆ. ಕಳೆದ ತಿಂಗಳು ರಾಜ್ಯದಲ್ಲಿ ದೈನಂದಿನ ಸೋಂಕಿನ ಸಂಖ್ಯೆ 50 ಸಾವಿರ ದಾಟಿತ್ತು. ಶನಿವಾರ ಪಾಸಿವಿಟಿ ದರ ಕೂಡ 9.69ಕ್ಕೆ ಇಳಿಕೆಯಾಗಿದ್ದು, ಸಾವಿನ ಸಂಖ್ಯೆ 365ಕ್ಕೆ ಇಳಿದಿದೆ. ರಾಜ್ಯದಲ್ಲೀಗ 2.68 ಲಕ್ಷ ಸಕ್ರಿಯ ಪ್ರಕರಣಗಳಿವೆ. ಇನ್ನು, ಬೆಂಗಳೂರಿನಲ್ಲೂ ಸೋಂಕು ಇಳಿಮುಖವಾಗುತ್ತಿದ್ದು, ಶನಿವಾರ 2686 ಪ್ರಕರಣಗಳು ಪತ್ತೆಯಾಗಿವೆ. ಇದು 65 ದಿನಗಳ ಕನಿಷ್ಠವಾಗಿದೆ. ಕಳೆದ ತಿಂಗಳು ನಗರದಲ್ಲಿ ದೈನಂದಿನ ಸೋಂಕಿನ ಸಂಖ್ಯೆ 26 ಸಾವಿರ ದಾಟಿತ್ತು. ಸದ್ಯ ಬೆಂಗಳೂರಿನಲ್ಲಿ 1.24 ಲಕ್ಷ ಸಕ್ರಿಯ ಸೋಂಕಿತರಿದ್ದಾರೆ.
ಮಹಾರಾಷ್ಟ್ರ ಅನ್‌ಲಾಕ್ ಹೇಗೆ?
1. ನಾಳೆಯಿಂದ ಸೋಂಕಿನ ತೀವ್ರತೆ ಆಧರಿಸಿ 5 ಸ್ತರದಲ್ಲಿ ನಿರ್ಬಂಧ ಸಡಿಲ
2. ಪಾಸಿಟಿವಿಟಿ 5%ಗಿಂತ ಕಡಿಮೆ ಇರುವ 16 ಜಿಲ್ಲೆಗಳಲ್ಲಿ ಎಲ್ಲ ಚಟುವಟಿಕೆಗಳಿಗೆ ಅನುಮತಿ
3. ಪಾಸಿಟಿವಿಟಿ 5-10% ಇರುವ, ಆಕ್ಸಿಜನ್ ಬೆಡ್ 40% ಭರ್ತಿ ಇರುವ ಕಡೆ ಅಂಗಡಿ ಓಪನ್, ಜಿಮ್, ಮಾಲ್, ಹೋಟೆಲ್‌ಗಳಲ್ಲಿ 50% ಜನಕ್ಕೆ ಅವಕಾಶ
4. ಪಾಸಿಟಿವಿಟಿ 10-20% ಇರುವ, ಆಕ್ಸಿಜನ್ ಬೆಡ್ 60% ಭರ್ತಿ ಇರುವ ಜಿಲ್ಲೆಗಳಲ್ಲಿ ಸಂಜೆ 4ರ ವರೆಗೆ ವ್ಯಾಪಾರ, ವೀಕೆಂಡ್ ಕಫä್ರ್ಯ, ಮಾಲ್, ಹೋಟೆಲ್ ಬಂದ್
5. ಪಾಸಿಟಿವಿಟಿ 20%ಗಿಂತ ಜಾಸ್ತಿ, 75% ಆಕ್ಸಿಜನ್ ಬೆಡ್ ಭರ್ತಿ ಇರುವ ಜಿಲ್ಲೆಗಳಲ್ಲಿ ಬೆಳಿಗ್ಗೆ ಅಗತ್ಯ ವಸ್ತು ಮಾರಾಟ, ನಂತರ ಸಂಪೂರ್ಣ ಬಂದ್
ದಿಲ್ಲಿ ಅನ್‌ಲಾಕ್ ಹೇಗೆ?
1. ನಾಳೆಯಿಂದ ಶೇ.50 ಸೀಟು ಭರ್ತಿ ಮಾಡಿ ಮೆಟ್ರೋ ರೈಲು ಸಂಚಾರ
2. ಮಾರ್ಕೆಟ್, ಮಾಲ್‌ಗಳು ಸಮ-ಬೆಸ ವ್ಯವಸ್ಥೆಯಲ್ಲಿ ದಿನ ಬಿಟ್ಟು ದಿನ ವಹಿವಾಟು
3. ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಮಾರ್ಕೆಟ್, ಮಾಲ್ ಓಪನ್
4. ಖಾಸಗಿ, ಸರ್ಕಾರಿ ಕಚೇರಿಗಳು ಶೇ.50ರಷ್ಟುಸಿಬ್ಬಂದಿಯೊಂದಿಗೆ ಆರಂಭ
6. ಇನ್ನಿತರ ಲಾಕ್‌ಡೌನ್ ನಿರ್ಬಂಧಗಳು ಮುಂದುವರಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ