ಯೋಗಿ ಆದಿತ್ಯನಾಥ್ ಹುಟ್ಟುಹಬ್ಬಕ್ಕೆ ಮೋದಿ ಶುಭಾಶಯದ ಟ್ವೀಟ್ ಮಿಸ್; ಇಲ್ಲಿದೆ ಕಾರಣ!

By Suvarna NewsFirst Published Jun 5, 2021, 10:37 PM IST
Highlights
  • ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬ
  • ಶುಭಾಶಯ ಟ್ವೀಟ್ ಮಾಡದ ಪ್ರಧಾನಿ ಮೋದಿ
  • ಯೋಗಿ ಹುಟ್ಟುಹಬ್ಬಕ್ಕೆ ಮೋದಿ ಟ್ವೀಟ್ ಮಾಡಿಲ್ಲ ಯಾಕೆ?

ನವದೆಹಲಿ(ಜೂ.05): ಕೊರೋನಾ ವೈರಸ್ ನಿರ್ವಹಣೆ, ಮುಂಬರುವ ಉತ್ತರ ಪ್ರದೇಶ ಚುನಾಣವಣೆ ಹಾಗೂ ನಾಯಕತ್ವ ಬದಲಾವಣೆ ಭಾರಿ ಚರ್ಚೆಯಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ‌ಗೆ ಪರ್ಯಾಯ ನಾಯಕನ ಹುಡುಕಾಟ ಬಿಜೆಪಿ ಹೈಕಮಾಂಡ್ ನಡೆಸುತ್ತಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿತ್ತು. ಈ ಗೊಂದಲಕ್ಕೆ ತೆರೆ ಎಳೆದರೂ ಇದೀಗ ಮತ್ತೆ ಅನುಮಾನ ಹುಟ್ಟಿಕೊಂಡಿದೆ. ಇದಕ್ಕೆ ಯೋಗಿ ಹುಟ್ಟುಹಬ್ಬಕ್ಕೆ ಮೋದಿ ಟ್ವೀಟ್ ಮೂಲಕ ವಿಶ್ ಮಾಡಿಲ್ಲ ಅನ್ನೋದೆ ಕಾರಣ.

 ಯೋಗಿಯೊಬ್ಬರನ್ನೇ ನೆಚ್ಚಿಕೊಂಡರೆ ಮತ್ತೆ ಗೆಲ್ಲಲು ಅಸಾಧ್ಯವೆಂದು ಮೋದಿ ಹೊಸ ದಾಳ!

ಇಂದು(ಜೂ.5) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬ. ಪ್ರತಿ ಬಾರಿ ತಮ್ಮ ಪಕ್ಷ ಹಾಗೂ ಇತರ ಪಕ್ಷದ, ಗಣ್ಯರ, ಕ್ರೀಡಾಪಟುಗಳ ಹುಟ್ಟುಹಬ್ಬಕ್ಕೆ ಮೋದಿ ಟ್ವೀಟ್ ಮೂಲಕ ಶುಭಕೋರುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬಕ್ಕೆ ಮೋದಿ ಟ್ವೀಟ್ ಮಾಡಿಲ್ಲ. ಇದಕ್ಕೆ ಕಾರಣ ಕೊರೋನಾ 2ನೇ ಅಲೆ.

ಇಂದು ದೂರವಾಣಿ ಮೂಲಕ ಯೋಗಿ ಆದಿತ್ಯನಾಥ್ ಜೊತೆ ಮಾತನಾಡಿದ ಮೋದಿ, ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ. ಕಳೆದ ಹಲವು ದಿನಗಳಿಂದ ಪ್ರಧಾನಿ ಮೋದಿ ಯಾರ ಹುಟ್ಟುಹಬ್ಬಕ್ಕೂ ಟ್ವೀಟ್ ಮೂಲಕ ಶುಭ ಕೋರಿಲ್ಲ. 2ನೇ ಕೊರೋನಾ ಅಲೆ ಕಾರಣ ಹುಟ್ಟು ಹಬ್ಬ ಶುಭಾಶಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಮೂಲಗಳು ತಿಳಿಸಿವೆ.

ಯೋಗಿ ಬದಲಾವಣೆ ಚಾನ್ಸೇ ಇಲ್ಲ,  ಕೇಂದ್ರ ನಾಯಕರ ಸ್ಪಷ್ಟ ನುಡಿ.

ಇತ್ತೀಚೆಗೆ ಹಲವು ನಾಯಕರು ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಆದರೆ ಮೋದಿ ಯಾವುದೇ ಟ್ವೀಟ್ ಮೂಲಕ ಶುಭಕೋರಿಲ್ಲ. ಇತ್ತೀಚೆಗೆ ರಾಜಸ್ಥಾನ, ಕೇರಳ, ಗೋವಾ, ಹರ್ಯಾಣ ಮುಖ್ಯಮಂತ್ರಿಗಳ ಹುಟ್ಟುಹಬ್ಬಕ್ಕೂ ಮೋದಿ ಟ್ವೀಟ್ ಶುಭಾಶಯ ಕೋರಿಲ್ಲ.

ಕೊರೋನಾ ಸಂಕಷ್ಟದಲ್ಲಿ ಮೋದಿ ಹುಟ್ಟುಹಬ್ಬ ಶುಭಾಶಯ ಕೋರುವಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮೂಲಗಳು ಹೇಳಿವೆ. ನಾಯಕತ್ವ ಬದಲಾವಣೆ ಅಥವಾ ಪರ್ಯಾಯ ನಾಯಕನ ಹುಡುಕಾಟದ ಊಹಾಪೋ್ಕ್ಕೆ ಈಗಾಗಲೇ ಬಿಜೆಪಿ ಹೈಕಮಾಂಡ್ ಉತ್ತರ ನೀಡಿದೆ. ಈ ರೀತಿಯ ಯಾವುದೇ ನಿರ್ಧಾರ ಕೇಂದ್ರದ ಮುಂದಿಲ್ಲ ಎಂದು ಬಿಜೆಪಿ ಮುಖ್ಯ ಕಾರ್ಯದರ್ಶಿ ಬಿಎಲ್ ಸಂತೋಷ್ ಸ್ಪಷ್ಟಪಡಿಸಿದ್ದಾರೆ.

click me!