ಜಸ್ಟ್‌ 9 ದಿನದಲ್ಲಿ 20,000 ಸಾವಿರ ಕುಸಿದ ಬಂಗಾರ, ದೀಪಾವಳಿ ನಂತರ ಚಿನ್ನದ ಡಿಮ್ಯಾಂಡ್‌ ಬದಲಾಗಿದ್ದು ಹೇಗೆ?

Published : Nov 21, 2026, 05:13 PM IST
Thoughtful Shopper Amid Falling Gold Prices

ಸಾರಾಂಶ

ಕಳೆದ 9 ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 20 ಸಾವಿರ ರೂಪಾಯಿ ವರೆಗೆ ಇಳಿಕೆಯಾಗಿದೆ. ಯುಎಸ್ ಡಾಲರ್ ಬಲವರ್ಧನೆ ಮತ್ತು ಬಾಂಡ್ ಇಳುವರಿ ಹೆಚ್ಚಳದಿಂದಾಗಿ ಚಿನ್ನದ ಬೆಲೆ ಕುಸಿದಿದೆ.

ಬೆಂಗಳೂರು: ಚಿನ್ನ ಖರೀದಿ ಮಾಡಬೇಕು, ಆದರೆ ಬೆಲೆ ಇಳಿಕೆ ಆಗಲಿ ಅಂತಾ ಕಾದು ಕಾದು ದೀಪಾವಳಿಗೆ ಆಭರಣ ಖರೀದಿಸಿದವರು ಅದೆಷ್ಟೋ ಮಂದಿ ಇದ್ದಾರೆ. ಇದೀಗ ಅವರೆಲ್ಲ ಅಯ್ಯೋ, ಇನ್ನೊಂದು ಸ್ವಲ್ಪ ದಿನ ಕಾದಿದ್ದರೆ.. ಎಷ್ಟೋ ಹಣ ಉಳಿತಿತ್ತಲ್ಲ ಎಂದು ತಲೆ ಮೇಲೆ ಕೈಹೊತ್ತು ಕೂತವರು ಅನೇಕರಿದ್ದಾರೆ. ಯಾಕೆಂದರೆ ಕಳೆದ 9 ದಿನಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 20 ಸಾವಿರ ರೂಪಾಯಿ ವರೆಗೆ ಇಳಿಕೆ ಆಗಿದೆ.

ಹೌದು, ಇತ್ತೀಚೆಗಿನ ಚಿನ್ನದ ಬೆಲೆಯ ಇಳಿಕೆಯು ಅಶ್ಚರ್ಯಕ್ಕೆ ತಳ್ಳುತ್ತಿದೆ. ನಿನ್ನೆಯೂ (ಶುಕ್ರವಾರ) ಕೂಡ ಚಿನ್ನದ ಬೆಲೆಯಲ್ಲ ಭಾರೀ ಇಳಿಕೆ ಕಂಡಿದೆ. ಶೇ.99.9 ರಷ್ಟು ಶುದ್ಧತೆಯ ಚಿನ್ನದ ಬೆಲೆ ₹5,200 ರಷ್ಟು ಇಳಿಕೆಯಾಗಿ 10 ಗ್ರಾಂಗೆ ₹129,300 ಕ್ಕೆ ತಲುಪಿದೆ. ಹಿಂದಿನ ವಹಿವಾಟಿನ ಅವಧಿಯಲ್ಲಿ ಇದು ₹134,500 ಕ್ಕೆ ವಹಿವಾಟು ನಡೆಸಿತ್ತು. ಇದು ಸತತ ಒಂಬತ್ತನೇ ವಹಿವಾಟಿನ ಕುಸಿತವಾಗಿದೆ.

ದೀಪಾವಳಿ ನಂತರ ಎಷ್ಟು ರೂಪಾಯಿ ಅಗ್ಗ?

ಈ ವರ್ಷ ದೀಪಾವಳಿಯನ್ನು ನವೆಂಬರ್ 8 ರಂದು ಆಚರಿಸಲಾಯಿತು. ಈ ವೇಳೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ₹1,43,570 ಆಗಿತ್ತು. ನವೆಂಬರ್ 21 ರಂದು ಅದು 10 ಗ್ರಾಂಗೆ ಸುಮಾರು ₹1,25,080 ಕ್ಕೆ ಇಳಿಯಿತು. ದೀಪಾವಳಿಯ ನಂತರ 24 ಕ್ಯಾರೆಟ್ ಚಿನ್ನದ 10 ಗ್ರಾಂ ಸುಮಾರು ₹18,490 ರಷ್ಟು ಅಗ್ಗವಾಗಿದೆ. ದೀಪಾವಳಿ ದಿನದಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ₹1,31,600 ಇತ್ತು. ಈಗ ಅದು ₹1,14,650 ಕ್ಕೆ ಇಳಿದಿದೆ. ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆಯೂ ಸುಮಾರು ₹16,950 ರಷ್ಟು ಕಡಿಮೆಯಾಗಿದೆ.

ಚಿನ್ನದ ಶುದ್ಧತೆದೀಪಾವಳಿ ಬೆಲೆ (10 ಗ್ರಾಂ)ನವೆಂಬರ್ 21 ರ ಬೆಲೆಒಟ್ಟು ಕುಸಿತ
24 ಕ್ಯಾರೆಟ್1,43,570 ರೂ.1,25,080 ರೂ.18,490 ರೂ
22 ಕ್ಯಾರೆಟ್‌ಗಳು1,31,600 ರೂ.1,14,650 ರೂ.₹16,950

ಒಂದು ವರ್ಷದಲ್ಲಿ ಚಿನ್ನದ ಬೆಲೆ ಎಷ್ಟು ಕುಸಿದಿದೆ?

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ 10 ಗ್ರಾಂಗೆ ₹1.83 ಲಕ್ಷದ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಈಗ ಬುಲಿಯನ್ ಮಾರುಕಟ್ಟೆಯಲ್ಲಿ ಅದರ ಬೆಲೆ ₹1,29,300 ಕ್ಕೆ ಇಳಿದಿದೆ. ಇದರರ್ಥ ಚಿನ್ನವು ದಾಖಲೆಯ ಗರಿಷ್ಠ ಮಟ್ಟದಿಂದ ಸುಮಾರು ₹53,700 ಅಥವಾ 29.3% ರಷ್ಟು ಕುಸಿದಿದೆ.

ಚಿನ್ನ ಕುಸಿಯಲು ಕಾರಣ ಏನು?

ಯುಎಸ್ ಡಾಲರ್ ಬಲಿಷ್ಠವಾಗಿದೆ ಸರ್ಕಾರಿ ಬಾಂಡ್‌ಗಳ ಮೇಲಿನ ಇಳುವರಿ ಹೆಚ್ಚಾಗಿದೆ ಯುಎಸ್‌ನಲ್ಲಿ ಬಡ್ಡಿದರಗಳು ಹೆಚ್ಚಾಗುವ ಸಾಧ್ಯತೆ ಇದು ಚಿನ್ನದ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ. ಚಿನ್ನವು ಹೂಡಿಕೆದಾರರಿಗೆ ಯಾವುದೇ ಬಡ್ಡಿ ನೀಡಿವುದಿಲ್ಲ ಬಾಂಡ್‌ಗಳಂತಹ ಇತರ ಹೂಡಿಕೆ ಆಯ್ಕೆಗಳು ಉತ್ತಮ ಆದಾಯ ಹೂಡಿಕೆದಾರರು ಚಿನ್ನದಿಂದ ಹಣ ಹಿಂಪಡೆದು ಬೇರೆಡೆ ಹೂಡಿಕೆ ಮಾಡುತ್ತಾರೆ ಇದರಿಂದ ಚಿನ್ನದ ಬೆಲೆಗಳ ಮೇಲೆ ಒತ್ತಡ ಬೀಳುತ್ತಿದೆ

ಹಾಗಿದ್ದರೆ ನೀವು ಈಗ ಚಿನ್ನ ಖರೀದಿ ಮಾಡಬಹುದೇ?

ಚಿನ್ನದ ಬೆಲೆಯಲ್ಲಿನ ಕುಸಿತವು ಮದುವೆಗಳಿಗೆ ಆಭರಣಗಳನ್ನು ಖರೀದಿಸುವ ಕುಟುಂಬಗಳಿಗೆ ಪರಿಹಾರ ನೀಡಬಹುದು. ಈ ವಾರ ಖರೀದಿ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಚಿನ್ನದ ಬೆಲೆಗಳು ಇನ್ನೂ ಕಡಿಮೆ ಆಗುತ್ತಾ? ಹೆಚ್ಚಾಗುತ್ತಾ ಎಂದು ನಿಖರವಾಗಿ ಹೇಳೋದು ಕಷ್ಟ. ಒಂದು ವೇಳೆ ನೀವು ಏನಾದರೂ ಆಭರಣ ಖರೀದಿಸಲು ಪ್ಲಾನ್‌ ಮಾಡುತ್ತಿದ್ದರೆ, ಚಿನ್ನದ ಬೆಲೆಯನ್ನ ಮಾತ್ರ ಲೆಕ್ಕ ಹಾಕಬಾರದು. ಮೇಕಿಂಗ್ ಶುಲ್ಕಗಳು, GST ಮತ್ತು ಹಾಲ್‌ಮಾರ್ಕ್‌ಗಳ ಬಗ್ಗೆ ಆಭರಣ ವ್ಯಾಪಾರಿಗಳೊಂದಿಗೆ ಪರಿಶೀಲಿಸಲು ಮರೆಯಬಾರದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಶದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಮಹಿಳಾ ಉದ್ಯಮಿಗಳ ಪಟ್ಟಿ, ₹87.50 ಕೋಟಿ ಪಡೆಯೋ ಕೊಡಗಿನ ಕುವರಿಗೆ ನಂ.1 ಸ್ಥಾನ!
ಕತ್ತೆ ಹಾಲಿಗೆ ಚಿನ್ನದ ಬೆಲೆ! ಲೀಟರ್‌ಗೆ ₹7 ಸಾವಿರ, ಪುಡಿ ರೂಪದಲ್ಲಿ ಕೆಜಿಗೆ ₹80 ಸಾವಿರ..! ಕತ್ತೆ ಹಾಲು ಇಷ್ಟು ದುಬಾರಿ ಯಾಕೆ?