
ಒಡಿಶಾ(ಜು.17): ಭಾರತದಲ್ಲಿ ಗೋಲ್ಡ್ ಮಾಸ್ಕ್ ಟ್ರೆಂಡ್ ಆಗುತ್ತಿದೆ. ಉದ್ಯಮಿಗಳು, ಶ್ರೀಮಂತರು ಇದೀಗ ಚಿನ್ನದ ಮಾಸ್ಕ್ ಧರಿಸಿ ಸದ್ದು ಮಾಡುತ್ತಿದ್ದಾರೆ. ಪುಣೆಯ ವ್ಯಕ್ತಿ ಚಿನ್ನದ ಮಾಸ್ಕ್ ಧರಿಸಿದ ಬೆನ್ನಲ್ಲೇ ಇದೀಗ ಕಟಕ್‌ನ ಉದ್ಯತಿ ಅಲೋಕ್ ಮೊಹಂತಿ ಬರೋಬ್ಬರಿ 3.5 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಮಾಸ್ಕ್ ಧರಿಸಿ ಎಲ್ಲರ ಗಮನಸೆಳೆದಿದ್ದಾರೆ.
ಕೊರೋನಾ ತಡೆಗಟ್ಟಲು ಚಿನ್ನದ ಮಾಸ್ಕ್, ಶ್ರೀಮಂತನ ಐಡಿಯಾಗೆ ದೂರ ಸರಿಯುತ್ತಾ ವೈರಸ್?
ಅಲೋಕ್ ಮೊಹಂತಿ ಮುಂಬೈನ ಚಿನ್ನದ ಅಂಗಡಿಯನ್ನು ಸಂಪರ್ಕಿಸಿ ಬಂಗಾರದ ಮಾಸ್ಕ್ ತಯಾರಿಸಿ ನೀಡುವಂತೆ ಹೇಳಿದ್ದಾರೆ. ಬೇಡಿಕೆಗೆ ಅನುಗುಣವಾಗಿ 22 ದಿನಗಳಲ್ಲಿ ಚಿನ್ನದ ಮಾಸ್ಕ್ ತಯಾರಿಸಲಾಗಿದೆ. 90 ರಿಂದ 100 ಗ್ರಾಂ ಚಿನ್ನ ಬಳಸಿ ಈ ಮಾಸ್ಕ್ ತಯಾರಿಸಲಾಗಿದೆ.
ಚಿನ್ನದ ವಸ್ತುಗಳನ್ನು ಧರಿಸುವುದು ನನಗೆ ಇಷ್ಟ, ಇತರರು ಚಿನ್ನದ ಮಾಸ್ಕ್ ಧರಿಸುತ್ತಿರುವಾಗ ನಾನು ಕೂಡ ಬಂಗಾರ ಮಾಸ್ಕ್ ಧರಿಸಲು ನಿರ್ಧರಿಸಿದೆ. 3.5 ಲಕ್ಷ ರೂಪಾಯಿ ಬೆಲೆ ಬಾಳುವು ಚಿನ್ನದ ಮಾಸ್ಕ್ ನನ್ನ ಬೇಡಿಕೆಯಂತೆ ಸಿದ್ಧವಾಗಿದೆ ಎಂದು ಅಲೋಕ್ ಮೊಹಂತಿ ಹೇಳಿದ್ದಾರೆ.
ಅಲೋಕ್ ಮೊಹಂತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ