Today Gold and Silver price: ಚಿನ್ನ ಒಂದೇ ದಿನ ₹8550, ಬೆಳ್ಳಿ 20,500 ರು. ಹೆಚ್ಚಳ! ಬೆಂಗಳೂರು, ದೆಹಲಿಯಲ್ಲಿ ಇಂದಿನ ದರ ಎಷ್ಟು?

Kannadaprabha News   | Kannada Prabha
Published : May 14, 2026, 04:56 AM IST
Gold and silver price

ಸಾರಾಂಶ

ಆಮದು ಸುಂಕವನ್ನು ಶೇ.15ಕ್ಕೆ ಹೆಚ್ಚಿಸಿದ ಬೆನ್ನಲ್ಲೇ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಗಗನಕ್ಕೇರಿವೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 8,500 ರೂ. ಹೆಚ್ಚಳವಾಗಿದ್ದರೆ, ಬೆಂಗಳೂರಿನಲ್ಲಿ 8,020 ರೂ. ಏರಿಕೆಯಾಗಿದೆ. ಬೆಳ್ಳಿ ದರವೂ ಕೆಜಿಗೆ 20,000 ರೂ. ಗಿಂತ ಅಧಿಕ ಜಿಗಿತ ಕಂಡಿದೆ.

- ಆಮದು ಸುಂಕ ಹೆಚ್ಚಳ ಬೆನ್ನಲ್ಲೇ ಚಿನ್ನ-ಬೆಳ್ಳಿ ದರ ದಿಢೀರ್‌ ಏರಿಕೆ

ನವದೆಹಲಿ: ಪ್ರಧಾನಿ ಮೋದಿ ಮಿತವ್ಯಯ ಕರೆ, ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಶೇ.15ರಷ್ಟು ಏರಿಕೆ ಬೆನ್ನಲ್ಲೇ ದೇಶದಲ್ಲಿ ಒಂದೇ ದಿನ ಚಿನ್ನ, ಬೆಳ್ಳಿ ದರ ಗಗನಕ್ಕೇರಿದೆ. 10 ಗ್ರಾಂ ಚಿನ್ನದ ದರ 8,500 ರು.ಹೆಚ್ಚಾಗಿದ್ದರೆ, ಬೆಳ್ಳಿ ಕೇಜಿಗೆ 20,500 ರು. ಜಿಗಿದಿದೆ.

ದೆಹಲಿಯಲ್ಲಿ ಬುಧವಾರ ಅಂತ್ಯದ ವೇಳೆ 10 ಗ್ರಾಂಗೆ 1,56,800ರು.ಇದ್ದ ಚಿನ್ನದ ದರ 8550 ರು. ಏರಿಕೆ ಕಂಡು 1,65,350 ರು.ಗೆ ತಲುಪಿದೆ. ಬೆಳ್ಳಿ ಕೇಜಿಗೆ 2,97, 500 ರು.ಗೆ ತಲುಪಿದೆ. ಹಿಂದಿನ ದಿನ ಈ ದರ 2,77,000 ರು.ಇತ್ತು.

ಬೆಂಗಳೂರಲ್ಲೂ ಏರಿಕೆ:

ಬೆಂಗಳೂರಿನಲ್ಲಿಯೂ ದರ ಏರಿಕೆ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನ 8020 ರು. ಹೆಚ್ಚಳವಾಗಿ 1,62, 000 ರು.ಗೆ ತಲುಪಿದೆ. 22 ಕ್ಯಾರೆಟ್‌ ಚಿನ್ನ 7350 ರು. ಏರಿಕೆಯಾಗಿ 1,48,500 ರು. ಆಗಿದೆ. ಇನ್ನು ಚಿನ್ನ ಕೇಜಿಗೆ 20,000 ರು. ಹೆಚ್ಚಳದೊಂದಿಗೆ 3 ಲಕ್ಷ ರು.ಗೆ ತಲುಪಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Gold, Silver Rate Today: ಚಿನ್ನ-ಬೆಳ್ಳಿ ಮತ್ತಷ್ಟು ದುಬಾರಿ, ಕೇಂದ್ರದ ಹೊಸ ಸುಂಕದ ಬಳಿಕ ಇಂದಿನ ಗೋಲ್ಡ್‌ ರೇಟ್‌ ಎಷ್ಟು ಗೊತ್ತಾ?
ಬೆಲೆ ಏರಿಕೆ, ಕುರ್ಚಿ ಕಿತ್ತಾಟದಲ್ಲೇ ಕಾಂಗ್ರೆಸ್ ಸರ್ಕಾರ ಮುಳುಗಿದೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ