ಬಾಂಗ್ಲಾದೇಶದಲ್ಲಿ ಕಾಳಿ ಮಾತೆಗೆ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಕೆಯಾಗಿ ನೀಡಿದ ಚಿನ್ನದ ಕಿರೀಟವೂ ಕಳ್ಳತನವಾಗಿದೆ.
ಢಾಕಾ: ಬಾಂಗ್ಲಾದೇಶದಲ್ಲಿ ಕಾಳಿ ಮಾತೆಗೆ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಕೆಯಾಗಿ ನೀಡಿದ ಚಿನ್ನದ ಕಿರೀಟ ಕಳ್ಳತನವಾಗಿದೆ. ಬಾಂಗ್ಲಾದೇಶದ ಶ್ಯಾಮನಗರದ ಶತ್ಖಿರಾದಲ್ಲಿದ್ದ ಜೆಶೋರೇಶ್ವರಿ ದೇಗುಲದಲ್ಲಿರುವ ದೇವಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಿನ್ನದ ಕಿರೀಟವನ್ನು ನೀಡಿದ್ದರು. 2021ರಲ್ಲಿ ಬಾಂಗ್ಲಾದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ಈ ಕಿರೀಟವನ್ನು ಕಾಳಿ ಮಾತೆಗೆ ಕಾಣಿಕೆಯಾಗಿ ನೀಡಿದ್ದರು. ಆದರೆ ರಾಜಕೀಯವಾಗಿ ಆಸ್ತಿರಗೊಂಡಿರುವ ಬಾಂಗ್ಲಾದೇಶದಲ್ಲಿ ಕಳ್ಳಕಾಕರ ಕಣ್ಣು ಈಗ ದೇವಿಯ ಮೇಲೂ ಬಿದ್ದಿದ್ದು, ದೇವಿಯನ್ನು ಅಲಂಕರಿಸುತ್ತಿದ್ದ ಚಿನ್ನದ ಕಿರೀಟವನ್ನೇ ಎಗರಿಸಿದ್ದಾರೆ.
ಗುರುವಾರ ದೇಗುಲದ ಪುರೋಹಿತರು ದೈನದಂದಿನ ಪೂಜಾ ಕಾರ್ಯಗಳನ್ನು ಮುಗಿಸಿ ಮನೆಗೆ ಹೋದ ನಂತರ ಮಧ್ಯಾಹ್ನ 2 ಗಂಟೆಯಿಂದ 2.30ರ ನಡುವೆ ಈ ಕಳ್ಳತನ ಕೃತ್ಯ ನಡೆದಿದೆ. ದೇವಿಯ ಕಿರೀಟ ಕಳ್ಳತನವಾಗಿರುವುದು ಮೊದಲಿಗೆ ದೇಗುಲದಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿಯ ಗಮನಕ್ಕೆ ಬಂದಿದೆ ಎಂದು ಬಾಂಗ್ಲಾದೇಶದ 'ದಿ ಡೈಲಿ ಸ್ಟಾರ್ ವರದಿ ಮಾಡಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ದೇಗುಲದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಶ್ಯಾಮ್ ನಗರ ಪೊಲೀಸ್ ಸ್ಟೇಷನ್‌ನ ಇನ್ಸ್‌ಪೆಕ್ಟರ್ ತೈಜುಲ್ ಇಸ್ಲಾಂ ಹೇಳಿದ್ದಾರೆ.
undefined
ಅಜಾನ್ ನಮಾಜ್ ವೇಳೆ ದುರ್ಗಾಪೂಜೆ ನಿಲ್ಲಿಸುವಂತೆ ಸೂಚಿಸಿದ ಬಾಂಗ್ಲಾದೇಶ ಸರ್ಕಾರ
ದೇವಿಯ ಕಿರೀಟ ಕಳ್ಳತನಕ್ಕೊಳಗಾದ ಸ್ಥಳವಾದ ಜೇಶೋರೇಶ್ವರಿ ದೇಗುಲವು ಭಕ್ತರಲ್ಲಿ ಮಹತ್ವದ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ, ಏಕೆಂದರೆ ಜೆಶೋರೇಶ್ವರಿ ದೇವಾಲಯವು ಭಾರತ ಮತ್ತು ನೆರೆಯ ಬಾಂಗ್ಲಾದಲ್ಲಿ ಇರುವ ಒಟ್ಟು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಅಲ್ಲದೇ ಇದು 9 ದಿನಗಳ ಕಾಲ ದೇವಿಯನ್ನು ಆರಾಧನೆ ಮಾಡುವ ನವರಾತ್ರಿಯ ಸಮಯದಲ್ಲೇ ಇಂತಹ ಘಟನೆ ನಡೆದಿರುವುದು ಅಲ್ಲಿನ ದೇವಿ ಭಕ್ತರಲ್ಲಿ ಬೇಸರ ಮೂಡಿಸಿದೆ. ದುರ್ಗೆಯನ್ನು ಇಲ್ಲಿ ಮಾತೆ ಕಾಳಿಯ ರೂಪದಲ್ಲಿ ಪೂಜೆ ಮಾಡಲಾಗುತ್ತದೆ.
ಈ ದೇಗುಲ ಸುಧೀರ್ಘ ಇತಿಹಾಸವನ್ನು ಹೊಂದಿದೆ. 12ನೇ ಶತಮಾನದಲ್ಲಿ ಬ್ರಾಹ್ಮಣ ಸಮುದಾಯದ ಅನರಿ ಎಂಬುವವರು ಈ ದೇಗುಲವನ್ನು ನಿರ್ಮಿಸಿದ್ದರು. 100 ಬಾಗಿಲುಗಳಿರುವುದು ಈ ದೇಗುಲದ ಮತ್ತೊಂದು ವಿಶೇಷವಾಗಿದೆ. 13ನೇ ಶತಮಾನದಲ್ಲಿ ಈ ದೇಗುಲವನ್ನು ಲಕ್ಷಣ್ ಸೇನ್ ಎಂಬುವವರು ಜೀರ್ಣೋದ್ದಾರ ಮಾಡಿದ್ದರು, ಹಾಗೆಯೇ ಮುಂದೆ ರಾಜ ಪ್ರತಾಪಾದಿತ್ಯ ಇದನ್ನು 16ನೇ ಶತಮಾನದಲ್ಲಿ ಮರು ನಿರ್ಮಾಣ ಮಾಡಿದ್ದರು.
ಭಾರತದಂತೆಯೇ ನವರಾತ್ರಿಯ ದುರ್ಗಾಪೂಜೆಯನ್ನು 9 ದಿನಗಳ ಕಾಲ ಸಂಭ್ರಮದಿಂದ ನಡೆಸುವ ಮತ್ತೊಂದು ರಾಷ್ಟ್ರ ಬಾಂಗ್ಲಾದೇಶ. ಆದರೆ ಈಗ ಅಲ್ಲಿ ರಾಜಕೀಯ ಅಸ್ಥಿರತೆ ನಿರ್ಮಾಣವಾಗಿದ್ದು, ಹಿಂದೂಗಳ ಪೂಜಾ ಕೇಂದ್ರದ ಮೇಲೆ ಅಲ್ಲಿ ಮತೀಯವಾದಿಗಳ ಕಣ್ಣು ಬಿದ್ದಿದೆ. ಶೇಕ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದು ಬಂದ ನಂತರ ಅಲ್ಲಿ ಮತೀಯವಾದಿಗಳ ಉಪಟಳ ತೀವ್ರಗೊಂಡಿದ್ದವು. ಕೆಲ ದಿನ ಹಿಂದಷ್ಟೇ ಅಜಾನ್ ಹಾಗೂ ನಮಾಝ್ ಮಾಡುವ ದುರ್ಗಾಪೂಜೆಯ ಚಟುವಟಿಕೆಯನ್ನು ನಿಲ್ಲಿಸಬೇಕು ಎಂದು ಅಲ್ಲಿನ ಹಿಂದೂ ಸಮುದಾಯಕ್ಕೆ ಸರ್ಕಾರ ಸೂಚಿಸಿದೆ.
ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗದಲ್ಲಿರುವ ಹಿಂದೂಗಳಿಗೆ ಕೆಲಸ ತೊರೆಯುವಂತೆ ಬೆದರಿಕೆ
Bangladesh: CCTV footage shows a thief stealing the crown of Kali Mata from Jeshoreshwari Kali Temple in Satkhira, which was gifted by Indian PM Modi in 2021. The temple is a significant Hindu Shakti Peeth. https://t.co/gVK883CTxN pic.twitter.com/MoIaUTJ4FC
— NewsSpectrumAnalyzer (The News Updates 🗞️) (@Bharat_Analyzer)