ದೇವರು ಫಸ್ಟ್ ಸೃಷ್ಟಿಸಿದ್ದು ಪುರುಷರನ್ನು, ಮೊದಲ ಬಾರಿಗೆ ತಪ್ಪಾಗೋದು ಸಹಜ ಅಲ್ಲವಾ ಎಂದ ಮಾಜಿ ಸಿಎಂ ಪತ್ನಿ

ಮಾಜಿ ಮುಖ್ಯಮಂತ್ರಿ ಪತ್ನಿ ಡಿಂಪಲ್ ಯಾದವ್, ಲಿಂಗ ಸಮಾನತೆ ಕುರಿತು ಮಾತನಾಡುತ್ತಾ, ದೇವರು ಮೊದಲು ಪುರುಷರನ್ನು ಸೃಷ್ಟಿಸಿದನು ಎಂದಿದ್ದಾರೆ. ಮಹಿಳಾ ಸಮ್ಮಾನ್ ಸಮಾರೋಹದಲ್ಲಿ ಈ ಹೇಳಿಕೆ ನೀಡಿದ್ದಾರೆ.

God created men first Says MP Dimple Yadav mrq

ನವದೆಹಲಿ: ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪತ್ನಿ, ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್, ಲಿಂಗ ಸಮಾನತೆ ಕುರಿತು ಮಾತನಾಡುವಾಗ ನೀಡಿದ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಲಕ್ನೋದಲ್ಲಿ ಆಯೋಜಿಸಿದ ಮಹಿಳಾ ಸಮ್ಮಾನ್ ಸಮಾರೋಹ ಕಾರ್ಯಕ್ರಮದಲ್ಲಿ ಡಿಂಪಲ್ ಯಾದವ್ ಭಾಗಿಯಾಗಿದ್ದರು. ಈ ವೇಳೆ ದೇವರು ಮೊದಲು ಪುರುಷರನ್ನು ಸೃಷ್ಟಿ ಮಾಡಿದ್ದು, ಯಾಕೆಂದ್ರೆ ಯಾವುದೇ ಕೆಲಸ ಮಾಡುವಾಗ ತಪ್ಪಾಗೋದು ಎಂದು ಹೇಳಿದರು.  ಮೊದಲು ಭೂಮಿಗೆ ಬಂದಿದ್ದು ಅಥವಾ ದೇವರ ಮೊದಲ ಸೃಷ್ಟಿ, ಪುರುಷರೋ? ಮಹಿಳೆಯರೋ? ಎಂದು ಕೇಳಿದ್ರೆ ಪುರುಷರು ಎಂದು ಹೇಳಬಹುದು. ಮೊದಲ ಬಾರಿಗೆ ಮಾಡುವಾಗ ಸಣ್ಣಪುಟ್ಟ ತಪ್ಪುಗಳಾಗುತ್ತವೆ ಎಂದರು. ಈ ವೇಳೆ ಕಾರ್ಯಕ್ರಮದಲ್ಲಿದ್ದ ಮಹಿಳೆಯರು ನಗುತ್ತಾ ಚಪ್ಪಾಳೆ  ತಟ್ಟಿದರು. 

ಪುರುಷನ ಬಳಿಕ ಎರಡನೆ ಬಾರಿ ದೇವರು ಹೆಣ್ಣನ್ನು ಸೃಷ್ಟಿಸಿದನು. ಈ ಸಮಯದಲ್ಲಿ ಏನೆಲ್ಲಾ ಸಾಮಾರ್ಥ್ಯಗಳನ್ನು ನೀಡಬೇಕೋ ನೀಡಿದನು. ಒಂದು ಮನೆಯಲ್ಲಿ ಹುಟ್ಟಿ, ಮತ್ತೊಂದು ಮನೆಯಲ್ಲಿ ಮಹಿಳೆ ಸಂಸಾರದ ನಿರ್ವಹಣೆಯನ್ನು ಮಾಡುತ್ತಾಳೆ. ಕುಟುಂಬವನ್ನು ನೋಡಿಕೊಳ್ಳೋದರ ಜೊತೆಗೆ ತನ್ನ ಕನಸುಗಳನ್ನು ಸಹ ಮಹಿಳೆಯರು ಸಾಕಾರ ಮಾಡಿಕೊಳ್ಳುತ್ತಾರೆ. ಇನ್ನೂ ಲಿಂಗ ವ್ಯತ್ಯಾಸವಿದೆ ಎಂದು ಡಿಂಪಲ್ ಯಾದವ್, ಸಮಾಜದಲ್ಲಿ ಪುರುಷರ ಕನಸುಗಳಿಗೆ ಹೆಚ್ಚಿನ ಮೌಲ್ಯವಿದೆ. ಮಹಿಳೆಯರಿಗಾಗಿ ಮಹಿಳೆಯರು ಮುಂದೆ ಬರಬೇಕು ಎಂದು ಕರೆ ನೀಡಿದರು.

Latest Videos

ಇದನ್ನೂ ಓದಿ: 'ಇದಕ್ಕೆ ಧೈರ್ಯ ಬೇಕು..' ಬುಲ್ಡೋಜರ್‌ ಕುರಿತು ಟೀಕೆ ಮಾಡಿದ ಅಖಿಲೇಶ್‌ ಯಾದವ್‌ಗೆ ಸಿಎಂ ಯೋಗಿ ಆದಿತ್ಯನಾಥ್‌ ಖಡಕ್‌ ಉತ್ತರ!

ಶಿಕ್ಷಣ, ಆರೋಗ್ಯ, ರಾಜಕೀಯ ಮತ್ತು ಸಾಮಾಜಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುವ ಅಗತ್ಯವಿದೆ. ಮಹಿಳೆಯರು ಮುಂದೆ ಸಾಗಿದಾಗ ಮಾತ್ರ ಸಮಾಜ ಮತ್ತು ದೇಶ ಪ್ರಗತಿ ಹೊಂದುತ್ತದೆ.ಮ ಸಮಾಜವಾದಿ ಪಕ್ಷ ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಸಂಸದೆ ಡಿಂಪಲ್ ಯಾದವ್ ಹೇಳಿದರು. 

ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿಂಪಲ್ ಅವರ ಪತಿ ಮಾಜಿ ಸಿಎಂ ಅಖಿಲೇಶ್ ಯಾದವ್, ಮಹಿಳೆಯರಿಲ್ಲದೇ ಸಮಾಜದ ಪ್ರಗತಿ ಅಪೂರ್ಣವಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ಮತ್ತು ರಕ್ಷಣೆ ನೀಡಬೇಕು. ಸಮಾಜವಾದಿ ಪಕ್ಷವು ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿದೆ. ಎಂದು ಹೇಳಿದರು. 

ಇದನ್ನೂ ಓದಿ: ಅಯೋಧ್ಯೆ ಗೆದ್ದ ಅವಧೇಶ್‌ನಿಂದ ವಿಧಾನಸಭೆ ಕ್ಷೇತ್ರ ಕಿತ್ತುಕೊಂಡ ಬಿಜೆಪಿ! ಸಮಾಜವಾದಿ ಸೋಲಿಗೆ 5 ಕಾರಣಗಳಿವು

अजया महिला सम्मान समारोह 2025, लखनऊ pic.twitter.com/y9ecC5Pq5o

— Dimple Yadav (@dimpleyadav)
vuukle one pixel image
click me!