ತಡರಾತ್ರಿ ಗೋವಾ ಬೀಚ್ ಬಳಿ ದಾರಿ ತಪ್ಪಿ ಕಂಗಾಲಾದ ವಿದೇಶಿಯನ್ನು ಹೊಟೆಲ್ ತಲುಪಿಸಿದ ಮಹಿಳಾ ರೈಡರ್

Published : Jan 13, 2026, 10:27 PM IST
Goa foreign tourist rescue

ಸಾರಾಂಶ

ತಡರಾತ್ರಿ ಗೋವಾ ಬೀಚ್ ಬಳಿ ದಾರಿ ತಪ್ಪಿ ಕಂಗಾಲಾದ ವಿದೇಶಿಯನ್ನು ಹೊಟೆಲ್ ತಲುಪಿಸಿದ ಮಹಿಳಾ ರೈಡರ್,  ಮಹಿಳಾ ರ್ಯಾಪಿಕ್ ಬೈಕ್ ರೈಡರ್ ಮರಳಿ ಹೊಟೆಲ್ ತಲುಪಿಸಿದ್ದಾರೆ. ಮಹಿಳಾ ಬೈಕ್ ರೈಡರ್‌ಗೆ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗುತ್ತಿದೆ.

ಗೋವಾ (ಜ.13) ಗೋವಾ ಪ್ರವಾಸಕ್ಕೆ ಬಂದು ಸಂಕಷ್ಟಕ್ಕೆ ಸಿಲುಕಿದ ವಿದೇಶಿ ಮಹಿಳೆಯನ್ನು ಮಹಿಳಾ ರ್ಯಾಪಿಡೋ ಬೈಕ್ ರೈಡರ್ ರಕ್ಷಿಸಿದ ಘಟನೆ ನಡೆದಿದೆ. ಸಂಜೆಯಾಗುತ್ತಿದ್ದಂತೆ ಹೊಟೆಲ್‌ನಿಂದ ನ್ಯಾವಿಗೇಶನ್ ಮ್ಯಾಪ್ ಹಿಡಿದು ಬೀಚ್ ತಲುಪಿದ ವಿದೇಶಿ ಮಹಿಳೆ ಕೆಲ ಹೊತ್ತು ಬೀಚ್‌ನಲ್ಲಿ ಸುತ್ತಾಡಿ, ಆಹಾರ ಸವಿದಿದ್ದಾರೆ. ಬಳಿಕ ನ್ಯಾವಿಗೇಶನ್ ಹಾಕಿ ಕಾಲ್ನಡಿಗೆ ಮೂಲಕ ಮರಳಲು ಆರಂಭಿಸಿದ್ದಾರೆ. ಆದರೆ ಜನರ ಓಡಾಟಗಳು ಕಡಿಮೆಯಾದರೂ ವಿದೇಶಿ ಮಹಿಳೆಗೆ ಮ್ಯಾಪ್ ಸರಿಯಾದ ದಾರಿ ತೋರಿಸಿಲ್ಲ. ವಿದೇಶಿ ಮಹಿಳೆ ಕಾಲ್ನಡಿಗೆಯಲ್ಲಿ ನಿರ್ಜನ ಪ್ರದೇಶ ತಲುಪಿದ್ದಾರೆ. ಆತಂಕಗೊಂಡ ವಿದೇಶಿ ಮಹಿಳೆಗೆ ನೆರವಿಗೆ ಮಹಿಳಾ ಬೈಕ್ ರೈಡರ್ ಆಗಮಿಸಿ ರಕ್ಷಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ದಕ್ಷಿಣ ಗೋವಾದ ಬೀಚ್ ಬಳಿ ಘಟನೆ

ದಕ್ಷಿಣ ಗೋವಾ ಪ್ರವಾಸಕ್ಕೆ ಆಗಮಿಸಿದ ವಿದೇಶಿ ಮಹಿಳೆ ಹೊಟೆಲ್ ಬುಕ್ ಮಾಡಿ ತಂಗಿದ್ದಾರೆ. ಬೀಚ್ ಪಕ್ಕದಲ್ಲೇ ಇರುವ ಹೊಟೆಲ್ ಬುಕ್ ಮಾಡಿದ್ದಾರೆ. ಸಂಜೆ ಕಾಲ್ನಡಿಗೆ ಮೂಲಕ ಸಮುದ್ರ ಕಿನಾರೆಯ ಮರಳಿನ ಮೇಲಿಂದ ನಡೆಯುತ್ತಾ ಬೀಚ್ ಬಳಿ ತೆರಳಿದ್ದಾರೆ. ಬಳಿಕ ಬೀಚ್ ತೀರದಲ್ಲಿ ನಡೆದಾಡುತ್ತಾ ಹಲವು ಗೋವಾ ಆಹಾರಗಳನ್ನು ಸವಿದಿದ್ದಾರೆ. ಹೀಗೆ ಗೋವಾ ಬೀಚ್ ಸವಿಯನ್ನು ಆನಂದಿಸಿದ್ದಾರೆ. ಇದರ ನಡುವೆ ಗೋವಾ ಬೀಚ್ ತೀರದಲ್ಲಿ ಕೆಲ ದೂರ ನಡೆದಿದ್ದಾರೆ. ಅಷ್ಟರಲ್ಲೇ ಕತ್ತಲಾಗಿದೆ.

ಮರಳಿ ಹೊಟೆಲ್ ಸೇರಿಕೊಳ್ಳಲು ನ್ಯಾವಿಗೇಶನ್ ಹಾಕಿದ ಮಹಿಳೆ

ಮರಳಿ ಹೊಟೆಲ್‌ಗೆ ಕಾಲ್ನಡಿಗೆಯಲ್ಲಿ ಆಗಮಿಸಲು ನ್ಯಾವಿಗೇಶನ್ ಆನ್ ಮಾಡಿ ನಡೆಯಲು ಆರಂಭಿಸಿದ್ದಾರೆ. ಆದರೆ ನ್ಯಾವಿಗೇಶನ್ ತಪ್ಪಾಗಿ ತೋರಿಸಿದೆ. ಹೀಗಾಗಿ ಕಾಡು, ನಿರ್ಜನ ಪ್ರದೇಶ ದಾರಿಯತ್ತ ಸಾಗಿದ್ದಾರೆ. ಕತ್ತಲು ತೀವ್ರಗೊಂಡಿದೆ. ಜನರ ಓಡಾಟವಿಲ್ಲ, ಸಹಾಯಕ್ಕೆ ಯಾರು ಇಲ್ಲದೆ ಪ್ರದೇಶ ತಲುಪಿದ್ದಾರೆ. ವಿದೇಶಿ ಮಹಿಳೆಯ ಆತಂಕ ಹೆಚ್ಚಾಗಿದೆ. ಕಿರುಚಾಡಿದರೂ ನರೆವಿಗೂ ಯಾರೂ ಇಲ್ಲ. ಇನ್ನು ತಡ ರಾತ್ರಿಯಾಗಿರುವ ಕಾರಣ ಭದ್ರತೆಯ ಆತಂಕ ಕೂಡ ಎದುರಾಗಿದೆ. ವಿದೇಶಿ ಮಹಿಳೆ ಸಾಗುತ್ತಿದ್ದ ದಾರಿಯಿಂದ ಕೆಲ ದೂರದ ದಾರಿಯಲ್ಲಿ ಸಿಂದು ಕುಮಾರಿ ರೈ ಅನ್ನೋ ರ್ಯಾಪಿಡೋ ಬೈಕ್ ರೈಡರ್ ಸಾಗಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಈ ರಾತಿ ನಿರ್ಜನ ಪ್ರದೇಶದಲ್ಲಿ ಗಮನಿಸಿದ್ದಾರೆ.

ನೆರವಿಗೆ ಬಂದ ಸಿಂದೂ ಕುಮಾರಿ ರೈ

ಮಹಿಳೆ ಗಮನಿಸಿದ ಸಿಂಧೂ ಕುಮಾರಿ ರೈ ತಕ್ಷಣವೇ ಮಹಿಳೆಯತ್ತ ಆಗಮಿಸಿದ್ದಾರೆ. ಯಾಕೆ ಇಲ್ಲಿದ್ದೀರಿ, ಏನು ಸಮಸ್ಯೆಯಾಗಿದೆಯಾ ಎಂದು ಕೇಳಿದ್ದಾರೆ. ಇಷ್ಟು ಕೇಳಿದ್ದೆ ತಡ ವಿದೇಶಿ ಮಹಿಳೆಗೆ ಹೋದ ಜೀವ ಬಂದಂತಾಗಿದೆ. ಭಾವುಕರಾಗಿದ್ದಾರೆ, ಮಾತು ಬರದಾಗಿದೆ. ಅಳುತ್ತಲೇ ತಾನು ದಾರಿ ತಪ್ಪಿರುವುದಾಗಿ ಹೇಳಿದ್ದಾರೆ. ಬಳಿಕ ಬೈಕ್ ರೈಡರ್, ವಿದೇಶಿ ಮಹಿಳೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಮರಳಿ ಹೊಟೆಲ್‌ಗೆ ಸೇರಿಸಿ ವಿಡಿಯೋ ಮಾಡಿದ್ದಾರೆ. ತನ್ನನ್ನು ರಾತ್ರಿ ವೇಳೆ ಮರಳಿ ಸುರಕ್ಷಿತವಾಗಿ ಹೊಟೆಲ್ ರೂಂ ಸೇರಿಸಿದ ಮಹಿಳೆಗೆ ಧನ್ಯವಾದ ಹೇಳಿದ್ದಾರೆ. ಭಾವುಕರಾಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಹಣ ನಿರಾಕರಿಸಿದ ಮಹಿಳಾ ರೈಡರ್

ದಾರಿ ತಪ್ಪಿ ಎಲ್ಲೆಲ್ಲೋ ಹೋಗಿದ್ದ ತನ್ನನ್ನು ದೂರದಿಂದ ಕರೆತಂದು ಹೊಟೆಲ್ ಬಳಿ ತಲುಪಿಸಿದ್ದಕ್ಕೆ ವಿದೇಶಿ ಮಹಿಳೆ ರ್ಯಾಪಿಡೋ ಬೈಕ್ ರೈಡರ್‌ಗೆ ಧನ್ಯವಾದ ಹೇಳಿದ್ದಾರೆ. ಇಷ್ಟೇ ಅಲ್ಲ ಸುರಕ್ಷಿತವಾಗಿ ತಲುಪಿಸಿದ್ದಕ್ಕೆ, ರ್ಯಾಪಿಡೋ ಬೈಕ್ ರೈಡ್ ದರ ನೀಡಿದ್ದಾಳೆ. ಆದರೆ ಹಣ ಪಡೆಯಲು ಮಹಿಳಾ ಬೈಕ್ ರೈಡರ್ ನಿರಾಕರಿಸಿದ್ದಾರೆ. ನೀವು ಸುರಕ್ಷಿತವಾಗಿ ತಲುಪಿದ್ದೀರಿ, ಅಷ್ಟು ಸಾಕು. ಏನು ಸಮಸ್ಯೆ ಇಲ್ಲ ತಾನೆ ಎಂದು ವಿದೇಶಿ ಮಹಿಳೆಯನ್ನು ಪ್ರಶ್ನಿಸಿ ಬೈಕ್ ರೈಡರ್ ತೆರಳಿದ್ದಾರೆ. ಸಿಂಧೂ ಕುಮಾರಿ ರೈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2ನೇ ಮಹಡಿಗೆ ಏಣಿ ಮೂಲಕ ಹತ್ತಿ ಮಲಗಿದ್ದ ಯುವತಿಯ ಚಿನ್ನದ ಸರ ಕದ್ದ ಕಳ್ಳ, ಸಿಸಿಟಿವಿ ದೃಶ್ಯ
ಅಣ್ಣಾಮಲೈಯಲ್ಲಿ ಏನಿದೆ? ಆತ ಝಿರೋ ಎಂದ ಠಾಕ್ರೆಗೆ ನೆಟ್ಟಿಗರ ಕ್ಲಾಸ್, ಪೇಚಿಗೆ ಸಿಲುಕಿದ ಶಿವಸೇನೆ