
ಮಲಪ್ಪುರಂ (ಜ.13): ಮನೆಯಲ್ಲಿ ಯಾರು ಇಲ್ಲದಾಗ, ಅಥವಾ ಮನೆ ಮಂದಿ ಮೇಲೆ ದಾಳಿ ಮಾಡಿ ಕಳ್ಳತನ ಪ್ರಕರಣಗಳು ಹಲವು ನಡೆದಿದೆ. ಇನ್ನು ಮನೆಗೆ ಮಾಲೀಕರು, ಸದಸ್ಯರು ಬೇರೆ ಕೋಣೆಯಲ್ಲಿ ಮಲಗಿದ್ದರೆ, ಮನೆಯ ಇತರ ಭಾಗಗಳಿಂದ ಕಳ್ಳತನ ನಡೆದ ಪ್ರಕರಣಗಳು ನಡೆದಿದೆ. ಆದರೆ ಇಲ್ಲೊಬ್ಬ ಕಳ್ಳ, ಎರಡನೇ ಮಹಡಿಯ ಮನೆ ಹತ್ತಿ, ಕೋಣೆಯಲ್ಲಿ ಮಲಗಿದ್ದ ಯುವತಿಯ ಕತ್ತಿನಿಂದ ಚಿನ್ನದ ಸರ ಕದ್ದ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ. ವಿಶೇಷ ಅಂದರೆ ಈತ ಎರಡನೇ ಮನೆ ಹತ್ತಲು ಮತ್ತೊಂದು ಮನೆಯಿಂದ ಏಣಿ ಕದ್ದು ತಂದಿದ್ದಾನೆ.
ಮಲಪ್ಪುರಂನ ಕರುಳಾಯಿಯಲ್ಲಿ ಮಲಗಿದ್ದ ಯುವತಿಯ ಕತ್ತಿನಿಂದ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿದೆ. ಪಳ್ಳಿಕ್ಕುನ್ನಿನ ಪಾರಕ್ಕಲ್ ಅಶ್ರಫ್ ಅವರ ಮನೆಗೆ ಮುಂಜಾನೆ ಕಳ್ಳ ನುಗ್ಗಿದ್ದಾನೆ. ಬೇರೊಂದು ಮನೆಯಿಂದ ಏಣಿ ತಂದು ಎರಡನೇ ಮಹಡಿಯ ಬಾಗಿಲು ಮುರಿದು ಕಳ್ಳ ಮನೆಯೊಳಗೆ ಪ್ರವೇಶಿಸಿದ್ದಾನೆ.
ಒಂದೇ ಒಂದು ಪಂಚೆಯನ್ನು ಕುತ್ತಿಗೆಗೆ ಕಟ್ಟಿಕೊಂಡು, ಮುಖ ಮುಚ್ಚಿಕೊಳ್ಳಲು ಚಳಿಗಾಲದಲ್ಲಿ ಬಳಸುವ ಟೋಪಿ ಧರಿಸಿ ಕಳ್ಳ ಬಂದಿದ್ದ. ಮುಂಜಾನೆ ಸುಮಾರು ಎರಡು ಗಂಟೆಗೆ ಕರುಳಾಯಿ ಪಳ್ಳಿಕ್ಕುನ್ನಿನ ಪಾರಕ್ಕಲ್ ಅಶ್ರಫ್ ಅವರ ಮನೆಗೆ ಬಂದ ಕಳ್ಳ, ಮನೆಯ ಮೂಲೆ ಮೂಲೆಯನ್ನೂ ನಡೆದು ಪರಿಶೀಲಿಸಿದ್ದಾನೆ. ಮನೆಯೊಳಗೆ ಹೋಗಲು ಕೆಳಗಿನಿಂದ ದಾರಿ ಸಿಗಲಿಲ್ಲ. ಆದರೆ ಕಳ್ಳ ಒಂದು ಉಪಾಯ ಕಂಡುಕೊಂಡ. ಪಕ್ಕದ ಮನೆಯಿಂದ ಏಣಿ ತಂದು, ಎರಡನೇ ಮಹಡಿಗೆ ಹತ್ತಿದ. ಅಲ್ಲಿನ ಬಾಗಿಲು ಮುರಿದು ಒಳಗೆ ನುಗ್ಗಿದ. ಕಪಾಟುಗಳನ್ನೆಲ್ಲಾ ಜಾಲಾಡಿದ್ದಾನೆ ಎಂದು ಮನೆಯವರು ಹೇಳಿದ್ದಾರೆ.
ಕತ್ತಿನಿಂದ ಚಿನ್ನದ ಸರ ಕದ್ದ ಕೂಡಲೇ ಯುವತಿ ಕಿರುಚಿಕೊಂಡಳು. ಮನೆಯವರು ತಕ್ಷಣ ಅಕ್ಕಪಕ್ಕದವರನ್ನು ಕರೆದರು. ಆದರೆ, ಅಷ್ಟರಲ್ಲಾಗಲೇ ಕಳ್ಳ ಓಡಿಹೋಗಿದ್ದ. ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ಬಂದು ಪರಿಶೀಲನೆ ನಡೆಸಿದರು. ಕಳೆದ ಕೆಲವು ದಿನಗಳಿಂದ ಸಮೀಪದ ಕುಟ್ಟಂಪಾರ, ವಲಂಬುರಂ ಪ್ರದೇಶಗಳಲ್ಲೂ ಕಳ್ಳತನ ಸಾಮಾನ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪೂಕ್ಕೊಟ್ಟುಪಾಡಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದೀಗ ಮಲಪ್ಪುರಂನಲ್ಲಿ ಈ ಕಳ್ಳತನ ಭಾರಿ ಚರ್ಚೆಯಾಗುತ್ತಿದೆ. ಮನೆಯಿಂದ ಕಳ್ಳತನ ಮಾಡಲು ಪಕ್ಕದ ಮನೆಯಿಂದ ಏಣಿ ಕದ್ದು ತಂದು, ಮಹಡಿ ಹತ್ತಿ ಕಳ್ಳತನ ಮಾಡಿದ್ದಾನೆ. ಈತ ಕುಖ್ಯಾತ ಕಳ್ಳ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಕಳ್ಳ ಪ್ರತಿ ರಾತ್ರಿ ಇದೇ ರೀತಿ ಹಲವರ ಮನೆಗೆ ಕನ್ನ ಹಾಕುತ್ತಿರುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ