
ಗೋವಾ(ಫೆ.25): ಗೋವಾದ ಶಾಪ್ ಮಾಲೀಕನ ಒಂದು ಹೇಳಿಕೆ ಭಾರಿ ವೈರಲ್ ಆಗಿದೆ. ಇಷ್ಟೇ ಅಲ್ಲ ವಿವಾದಕ್ಕೂ ಕಾರಣವಾಗಿದೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಸರಣಿ ವೇಳೆ ಗೋವಾದ ಕೆಲಂಗುಟೆ ವಲಯದ ಶಾಪ್ ಮಾಲೀಕ ವಿವಾದಾತ್ಮಕ ಹೇಳಿಕೆ ನೀಡಿದ್ದ. ಈ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.ವ್ಲೋಗರ್ ಒಬ್ಬ, ನೀವು ಯಾವ ತಂಡಕ್ಕೆ ಬೆಂಬಲ ನೀಡುತ್ತೀರಿ ಅನ್ನೋ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಶಾಪ್ ಮಾಲೀಕ, ನನ್ನ ಬೆಂಬಲ ಪಾಕಿಸ್ತಾನಕ್ಕೆ ಎಂದಿದ್ದಾನೆ. ಈ ಹೇಳಿಕೆ ಬೆನ್ನಲ್ಲೇ ಯಾಕೆ ಅನ್ನೋ ಪ್ರಶ್ನೆಗೆ ಈತ, ಇದು ಮುಸ್ಲಿಮರ ಏರಿಯಾ, ಇಲ್ಲಿ ನನ್ನ ಹಾಗೂ ಏರಿಯಾದವರ ಬೆಂಬಲ ಪಾಕಿಸ್ತಾನ ತಂಡಕ್ಕೆ ಅನ್ನೋ ಹೇಳಿಕೆ ನೀಡಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋದಿಂದ ಕೆರಳಿದ ಕೆಲ ಗುಂಪು, ಈತನ ಪತ್ತೆ ಹಚ್ಚಿ ಮಂಡಿಯೂರಿಸಿ ಕ್ಷಮೆ ಕೇಳಿಸಿದ್ದಾರೆ. ಇಷ್ಟೇ ಅಲ್ಲ ಒತ್ತಾಯಪೂರ್ವಕವಾಗಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿಸಿದ್ದಾರೆ.
ಟ್ರಾವೆಲ್ ವ್ಲೋಗರ್ ಶಾಪ್ ಮಾಲೀಕನನ್ನು ವಿಡಿಯೋಗಾಗಿ ಮಾತನಾಡಿಸಿದ್ದಾನೆ. ಈ ವೇಳೆ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಸರಣಿ ಕುರಿತು ಕೇಳಿದ್ದಾನೆ. ನಿಮ್ಮ ಬೆಂಬಲ ನ್ಯೂಜಿಲೆಂಡ್ ತಂಡಕ್ಕೆ ಇದೆಯಾ ಎಂದಿದ್ದಾನೆ. ಇದಕ್ಕೆ ಉತ್ತರಿಸಿದ ಶಾಪ್ ಮಾಲೀಕ. ಇಲ್ಲ, ನನ್ನ ಬೆಂಬಲ ಪಾಕಿಸ್ತಾನ ತಂಡಕ್ಕೆ ಮಾತ್ರ ಎಂದಿದ್ದಾನೆ. ಈತನ ಈ ಉತ್ತರಕ್ಕೆ ಇದೀಗ ರಂಪಾಟ ಮಾಡಿರುವ ಗುಂಪಗಳು ಯಾವುದೇ ಆಸ್ಪದ ಎತ್ತಿಲ್ಲ. ಆದರೆ ಈ ಹೇಳಿಕೆ ಬಳಿಕ ಆಡಿದ ಮಾತುಗಳು ಕೆಲ ಗುಂಪುಗಳನ್ನು ರೊಚ್ಚಿಗೇಳುವಂತೆ ಮಾಡಿದೆ. ಇದು ಮುಸ್ಲಿಮರ ಏರಿಯಾ, ಹೀಗಾಗಿ ನನ್ನ ಬೆಂಬಲ ಪಾಕಿಸ್ತಾನಕ್ಕೆ ಎಂದಿದ್ದಾನೆ.
'ಪಾಕ್ ಜಿಂದಾಬಾದ್' ಪರ ವಿವಾದಾತ್ಮಕ ಪೋಸ್ಟ್: ವಿವಾದಕ್ಕೆ ಕಾರಣವಾದ ನಟ ಚೇತನ್ ಕುಮಾರ್ ಹೇಳಿಕೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲ ಗುಂಪುಗಳು ಈತ ಶಾಪ್ ಬಳಿ ಬಂದು ಮಾಲೀಕನ ಹೇಳಿಕೆಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೆಲಂಗುಟೆ ಪ್ರದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಿಲ್ಲ. ಇಲ್ಲಿ ಮುಸ್ಲಿಮರಿಗೆ ಒಂದು ಏರಿಯಾ, ಇತರ ಧರ್ಮದವರಿಗೆ ಒಂದು ಏರಿಯಾ ಎಂದಿಲ್ಲ. ಈ ರೀತಿಯ ಅಸಂಬದ್ಧ ಹೇಳಿಕೆ ನೀಡಿ ಶಾಂತಿ ಕದಡಬೇಡಿ. ನೀವು ಯಾವುದೇ ತಂಡಕ್ಕೆ ಬೆಬಲ ನೀಡಿ ಸಮಸ್ಯೆ ಇಲ್ಲ. ಆದರೆ ಮುಸ್ಲಿಮರ ಏರಿಯಾ, ಹೀಗಾಗಿ ಪಾಕಿಸ್ತಾನಕ್ಕೆ ಬೆಂಬಲ ಅನ್ನೋ ಹುಂಭತನದ ಹೇಳಿಕೆಗಳು ಬೇಡ. ಈಗ ಆಡಿದ ಮಾತಿಗೆ ಕ್ಷಮೆ ಕೇಳುವಂತೆ ಕೆಲ ಗುಂಪುಗಳು ಬೆದರಿಕೆ ಹಾಕಿದೆ.
ಶಾಪ್ ಮಾಲೀಕ ಅನಿವಾರ್ಯವಾಗಿ ಮಂಡಿಯೂರಿ ಕ್ಷಮೆ ಕೇಳಿದ್ದಾನೆ. ಇಷ್ಟಕ್ಕೆ ಉದ್ರಿಕ್ತರ ಕೋಪ ತಣ್ಣಗಾಗಿಲ್ಲ. ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಲು ಹೇಳಿದ್ದಾರೆ. ಒತ್ತಾಯಪೂರ್ವಕವಾಗಿ ಈತ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಈ ಕುರಿತು ಪೊಲೀಸರನ್ನು ವಿಚಾರಿಸಿದರೆ, ಈ ಘಟನೆ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ದೂರು ನೀಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸದ್ಯ ಶಾಪ್ ಮಾಲೀಕ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದಾನೆ. ಕೆಲಂಗುಟೆ ವಲಯದಲ್ಲಿ ಯಾವುದೇ ಅಹಿತಕರ ಘಟನೆ ಹಾಗೂ ಬಿಗುವಿನ ವಾತಾವರಣ ನಿರ್ಮಾಣವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು: ಪಾಕ್ ಪರ ಜಯಘೋಷ, ಕೇಸ್ ಬುಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ