Goa Exit Poll 2022 ಗೋವಾದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ,ಯಾರಿಗೆ ಗದ್ದುಗೆ?

By Suvarna NewsFirst Published Mar 7, 2022, 8:07 PM IST
Highlights
  • ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಬಹಿರಂಗ
  • ಗೋವಾದಲ್ಲಿ ಯಾರಿಗೆ ಅಧಿಕಾರ? ಸಮೀಕ್ಷೆಯಲ್ಲೂ ನಿಗೂಢ
  • ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ
     

ನವದೆಹಲಿ(ಮಾ.07): ಪಂಚ ರಾಜ್ಯಗಳ ಮತದಾನ(Five state Election 2022) ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು(Exit Poll 2022) ಹೊರಬಿದ್ದಿದೆ. ಉಳಿದ ನಾಲ್ಕು ರಾಜ್ಯಗಳಲ್ಲಿ ಬಹುತೇಕ ಸ್ಪಷ್ಟ ಬಹುತಮತವಿದ್ದರೆ, ಗೋವಾದಲ್ಲಿ(Goa Election) ಮಾತ್ರ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ(Congress Bjp) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಗೋವಾ ಅತಂತ್ರ ಫಲಿತಾಂಶ ಕಾಣುವ ಸಾಧ್ಯತೆಯನ್ನು ಸಮೀಕ್ಷೆ ಹೇಳುತ್ತಿದೆ.

ಗೋವಾದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆಗೆ ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ ಹಾಗೂ ತೃಣಮೂಲ ಕಾಂಗ್ರೆಸ್ ಕೂಡ ಅಖಾಡದಲ್ಲಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಇಷ್ಟೇ ಅಲ್ಲ ಬಿಜೆಪಿಯನ್ನು ಗೋವಾದಲ್ಲಿ ಅಧಿಕಾರಕ್ಕೆ ತಂದ ನಾಯಕ ದಿವಂಗತ ಮನೋಹರ್ ಲಾಲ್ ಪರಿಕ್ಕರ್ ಅನುಪಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ಪರ್ಧಿಸಿದೆ. 

Latest Videos

Uttarakhand Exit Poll 2022: ಬಿಜೆಪಿಗೆ ಕಹಿ, ಕಾಂಗ್ರೆಸ್‌ಗೆ ಅಧಿಕಾರ? ಹೀಗಿದೆ ಸಮೀಕ್ಷೆ ರಿಸಲ್ಟ್

ಜನ್‌ಕಿ ಬಾತ್ ಸಮೀಕ್ಷೆ(ಗೋವಾ)
ಬಿಜೆಪಿ: 17
ಕಾಂಗ್ರೆಸ್+:17
ಆಪ್: 1
ಇತರರು:1

ಟೈಮ್ಸ್ ನೌ ಸಮೀಕ್ಷೆ(ಗೋವಾ)
ಕಾಂಗ್ರೆಸ್ +: 16
ಬಿಜೆಪಿ: 14
ಆಪ್: 4
ಟಿಎಂಸಿ:0
ಇತರರು:6

UP Election ಯುಪಿ ಅಂಗಳದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ

ಎಬಿಪಿ ಸಮೀಕ್ಷೆ(ಗೋವಾ)
ಬಿಜೆಪಿ: 13 ರಿಂದ 17
ಕಾಂಗ್ರೆಸ್+: 12 ರಿಂದ 16
ಆಪ್: 1 ರಿಂದ 5
ಟಿಎಂಸಿ ಎಂಜಿಪಿ: 5 ರಿಂದ 9
ಇತರರು: 0 ಯಿಂದ 2

ರಿಪಬ್ಲಿಕ್, P-MARQ ಸಮೀಕ್ಷೆ(ಗೋವಾ)
ಬಿಜೆಪಿ: 13 ರಿಂದ 17
ಕಾಂಗ್ರೆಸ್+: 13 ರಿಂದ 17
ಆಪ್ 2 ರಿಂದ 6
ಟಿಎಂಸಿ ಎಂಜಿಪಿ:2 ರಿಂದ 4
ಇತರರು 0 ಯಿಂದ 4

ಜನ್‌ಕಿ ಬಾತ್ ಸಮೀಕ್ಷೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದಿದೆ. ಆದರೆ ಟೈಮ್ಸ್ ನೌ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಟೈಮ್ಸ್‌ನೌ ಸಮೀಕ್ಷೆಯಲ್ಲಿ 16 ಸ್ಥಾನ ಗೆದ್ದುಕೊಂಡರೆ, ಬಿಜೆಪಿ 14 ಸ್ಥಾನ ಗೆಲ್ಲಲಿದೆ ಎಂದಿದೆ. ಎಬಿಪಿ ಸಮೀಕ್ಷೆಯಲ್ಲಿ ಬಿಜೆಪಿ 13 ರಿಂದ 17 ಸ್ಥಾನ ಗೆಲ್ಲಲಿದೆ ಎಂದರೆ ಕಾಂಗ್ರೆಸ್ 12 ರಿಂದ 16 ಸ್ಥಾನ ಗೆಲ್ಲಲಿದೆ ಎಂದಿದೆ. ಇನ್ನು ರಿಪಬ್ಲಿಕ್ ಹಾಗೂ  P-MARQ ಸಮೀಕ್ಷೆಯಲ್ಲಿ ಸಮಬಲ ಸಾಧಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ 13 ರಿಂದ 17 ಸ್ಥಾನ ಗೆಲ್ಲಲಿದೆ ಎಂದಿದೆ.

ಗೋವಾದಲ್ಲಿ ಅತಂತ್ರ ಫಲಿತಾಂಶ ಸೂಚನೆಯನ್ನು ಸಮೀಕ್ಷೆ ಹೇಳಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪಿನಿಂದ ಎಚ್ಚೆತ್ತುಕೊಂಡಿದೆ. 2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನ ಗೆದ್ದುಕೊಂಡಿತು. ಇತ್ತ ಬಿಜೆಪಿ 13 ಸ್ಥಾನ ಗೆದ್ದುಕೊಂಡಿತ್ತು. ಆದರೆ ಅತೀ ದೊಡ್ಡ ಪಕ್ಷವಾದ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯಲು ವಿಫಲವಾಗಿತ್ತು. ಇದರ ನಡುವೆ ಬಿಜೆಪಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಈ ತಪ್ಪಿನಿಂದ ಪಾಠ ಕಲಿತಿರುವ ಕಾಂಗ್ರೆಸ್ ಈಗಾಗಲೇ ಸಣ್ಣ ಸಣ್ಣ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಮುಕ್ತವಾಗಿದೆ ಎಂದಿದೆ.

ಗೋವಾದಲ್ಲಿ ಮನೋಹರ್ ಲಾಲ್ ಪರಿಕ್ಕರ್ ನಿಧನದ ಬಳಿಕ ಕಾಂಗ್ರೆಸ್ ಪುಟಿದೆದ್ದಿದೆ. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಈಗಾಗಲೇ ಜಿಎಫ್‌ಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಇನ್ನು ಆಪ್ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದರೆ, ಟಿಎಂಸಿ ಪಕ್ಷ ಎಂಜಿಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿಲ್ಲ.

ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. 40 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಅಧಿಕಾರಕ್ಕೇರಲು 21 ಸ್ಥಾನಗಳನ್ನು ಗೆಲ್ಲಬೇಕಿದೆ. 
 

click me!