* ಪಂಚರಾಜ್ಯ ಚುನಾವಣೆಯ ಮತಗಟ್ಟೆ ಸಮೀಕ್ಷೆ
* ರಿಪಬ್ಲಿಕ್ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಗೆ ಶಾಕ್
* ಮತ್ತೆ ಅಧಿಕಾರಕ್ಕೆ ಬರುತ್ತಾ ಕಾಂಗ್ರೆಸ್?
ಡೆಹ್ರಾಡೂನ್(ಮಾ.07) ಪಂಚರಾಜ್ಯ ಚುನಾವಣೆಯ ಮತದಾನ ಇಂದಿಗೆ ಕೊನೆಯಾಗಿದೆ. ಇಂದು ಕೊನೆಯ ಹಂತದ ಮತದಾನ ನಡೆದಿದ್ದು, ಚುನಾವಣೋತ್ತರ ಸಮೀಕ್ಷೆಗಳೇನು ಹೇಳುತ್ತವೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಹೀಗಿರುವಾಗ ಬಹು ನಿರೀಕ್ಷಿತ Exit Poll Results ಹೊರ ಬಿದ್ದಿದೆ. ಉತ್ತರಾಖಂಡದಲ್ಲಿ ರಿಪಬ್ಲಿಕ್ ಕೊಟ್ಟ ಸಮೀಕ್ಷೆ ಅನ್ವಯ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ ಎನ್ನಲಾಗಿದ್ದು, ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುತ್ತದೆ ಎನ್ನಲಾಗಿದೆ.
ಹೌದು ಕಳೆದ ಐದು ವರ್ಷದ ಅಧಿಕಾರಾವಧಿಯಲ್ಲಿ ಅನೇಕ ಸವಾಲುಗಳನ್ನೆದುರಿಸಿದ ಬಿಜೆಪಿ ಉತ್ತರಾಖಂಡ್ ಉಳಿಸಿಕೊಳ್ಳಲು ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿತ್ತು. ಆದರೀಗ ಇದ್ಯಾವುದೂ ಮತದಾರನ ಮೇಲೆ ಪರಿಣಾಮ ಬೀರಿಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದೆ. ಹೀಗಿದ್ದರೂ ಇಂಡಿಯಾ ಟುಡೇ ಹಾಗೂ ಟುಡೇಸ್ ಚಾಣಕ್ಯ ಮಾತ್ರ ಉತ್ತರಾಖಂಡದಲ್ಲಿ ಬಿಜೆಪಿ ಗೆಲ್ಲೋದು ಪಕ್ಕಾ ಎಂದು ಭವಿಷ್ಯ ನುಡಿದಿದೆ.
ರಿಪಬ್ಲಿಕ್ ಮತಗಟ್ಟೆ ಸಮೀಕ್ಷೆ- ಉತ್ತರಾಖಂಡ: 70
ಬಿಜೆಪಿ+: 29-34
ಕಾಂಗ್ರೆಸ್: 33-38
ಬಿಎಸ್‌ಪಿ: 01-33
ಇತರರು: 01-03
ಮ್ಯಾಜಿಕ್ ನಂಬರ್: 36
ಈಟಿಜಿ ರಿಸರ್ಚ್ ಮತಗಟ್ಟೆ ಸಮೀಕ್ಷೆ: ಉತ್ತರಾಖಂಡ: 70
ಬಿಜೆಪಿ+: 37-40
ಕಾಂಗ್ರೆಸ್: 29-32
ಬಿಎಸ್‌ಪಿ: 00-01
ಇತರರು: 01-02
ಮ್ಯಾಜಿಕ್ ನಂಬರ್: 36
2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯ ಫಲಿತಾಂಶ
ಒಟ್ಟು ಕ್ಷೇತ್ರಗಳು: 70
ಬಿಜೆಪಿ+: 57
ಕಾಂಗ್ರೆಸ್: 11
ಬಿಎಸ್‌ಪಿ: 00
ಇತರರು: 02
ಮ್ಯಾಜಿಕ್ ನಂಬರ್: 36
ಎಕ್ಸಿಟ್ ಪೋಲ್‌ಗಳಿಗೆ ಅಧಿಕೃತತೆ ಇದೆಯೇ?
ಎಲ್ಲ ಸುದ್ದಿ ವಾಹಿನಿಗಳು ಎಕ್ಸಿಟ್ ಪೋಲ್‌ಗಳ ಮೂಲಕ ಯಾರು ಸರ್ಕಾರ ರಚಿಸಬಹುದು ಎಂದು ಹೇಳಲು ಪ್ರಯತ್ನಿಸುತ್ತವೆ. ಆದರೆ, ಇದು ಕೇವಲ ಸುದ್ದಿ ವಾಹಿನಿಗಳ ಸಮೀಕ್ಷೆಯನ್ನು ಆಧರಿಸಿದೆ ಮತ್ತು ಯಾವುದೇ ಸತ್ಯಾಸತ್ಯತೆಯನ್ನು ಹೊಂದಿಲ್ಲ. ಹೀಗಿದ್ದರೂ ಎಕ್ಸಿಟ್ ಪೋಲ್‌ಗಳ ಬಗ್ಗೆ ಜನ ಕುತೂಹಲ ಹೊಂದಿದ್ದಾರೆ.
ನಿರ್ಗಮನ ಸಮೀಕ್ಷೆಗಳನ್ನು ಹೇಗೆ ಸಿದ್ಧಪಡಿಸುವುದು?
ಮತಗಟ್ಟೆಯಿಂದ ಹೊರಬರುವ ಮತದಾರರನ್ನು ತಾವು ಯಾರಿಗೆ ಮತ ಹಾಕಿದ್ದೀರಿ ಎಂದು ಕೇಳುವ ಮೂಲಕ ಎಕ್ಸಿಟ್ ಪೋಲ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಮತದಾನ ಕೇಂದ್ರದಿಂದ ನಿರ್ಗಮಿಸುವ ಸಮಯದಲ್ಲಿ ಮತದಾರರಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ, ಆದ್ದರಿಂದ ಅಂತಹ ಸಮೀಕ್ಷೆಗಳನ್ನು ಎಕ್ಸಿಟ್ ಪೋಲ್ ಎಂದು ಕರೆಯಲಾಗುತ್ತದೆ.