
ಗೋವಾ(ಸೆ.27): ಪಂಜಾಬ್ ಕಾಂಗ್ರೆಸ್, ರಾಜಸ್ಥಾನ ಕಾಂಗ್ರೆಸ್, ಕರ್ನಾಟಕ ಕಾಂಗ್ರೆಸ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್(Congress) ಒಳಗೆ ಭಿನ್ನಾಭಿಪ್ರಾಯ, ಗುದ್ದಾಟ ಒಂದು ಹಂತದ ಕ್ಲೈಮಾಕ್ಸ್ ತಲುಪಿದೆ. ಇದೀಗ ಸಮುದ್ರದಂತೆ ಶಾಂತವಾಗಿದ್ದ ಗೋವಾ(Goa) ಕಾಂಗ್ರೆಸ್‌ನಲ್ಲಿ ಮೊದಲ ವಿಕೆಟ್ ಪತನಗೊಂಡಿದೆ. ಗೋವಾ ಕಾಂಗ್ರೆಸ್ ಹಿರಿಯ ರಾಜಕಾರಣಿ ಲ್ಯೂಜಿನ್ಹೊ ಫಲೆರೋ(Luizinho Faleiro) ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.
ಡಿಕೆಶಿ ದಿಢೀರ್ ದೆಹಲಿಗೆ: ಸೋನಿಯಾ, ರಾಹುಲ್ ಭೇಟಿಗೆ ಕೆಪಿಸಿಸಿ ಅಧ್ಯಕ್ಷ ಯತ್ನ!
ಲ್ಯೂಜಿನ್ಹೊ ಫಲೆರೋ ಕಾಂಗ್ರೆಸ್ ಹಿರಿಯ ರಾಜಕಾರಣಿ. ಬರೋಬ್ಬರಿ 40 ವರ್ಷ ಗೋವಾ ಕಾಂಗ್ರೆಸ್ ಕಟ್ಟಿ ಬೆಳೆಸಿದ ಕೀರ್ತಿ ಇದೇ ಲ್ಯೂಜಿನ್ಹೊ ಫಲೆರೋ ಸಲ್ಲಲಿದೆ. ಆದರೆ ಪಶ್ಚಿಮ ಬಂಗಾಳ(West Bengal) ಸಿಎಂ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ(Mamata Banerjee) ಹೊಗಳಿದ ಲ್ಯೂಜಿನ್ಹೊ ಫಲೆರೋ ಬಳಿಕ ಕಾಂಗ್ರೆಸ್ ತೊರೆದಿದ್ದಾರೆ.
ಸಿದ್ದರಾಮಯ್ಯ ಪಕ್ಷದೊಳಗೆ ಏಟು : ಅದನ್ನು ತಡೆಯಲಾಗುತ್ತಿಲ್ಲ
ಕಾಂಗ್ರೆಸ್‌ಗೆ ರಾಜೀನಾಮೆ ನೀಡುವ ಮೊದಲು ಲ್ಯೂಜಿನ್ಹೊ ಫಲೆರೋ, ನಾನು ಯಾವತ್ತಿಗೂ ಕಾಂಗ್ರೆಸ್ ಮ್ಯಾನ್. 40 ವರ್ಷ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದೇನೆ. ಹಳ್ಳಿ ಹಳ್ಳಿಗೆ ತೆರಳಿ ಗೋವಾದಲ್ಲಿ ಕಾಂಗ್ರೆಸ್ ಕಟ್ಟಿದ್ದೇನೆ. ಆದರೆ ನನಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೋರಾಟ ಇಷ್ಟವಾಗಿದೆ. ಬಿಜೆಪಿಗೆ(BJP) ಪ್ರಬಲ ಪೈಪೋಟಿ ನೀಡಿ ಗೆದ್ದ ಸಾಧನೆ ಮಮತಾಗಿದೆ ಎಂದಿದ್ದಾರೆ.
ಸಿಧು, ಹೈಕಮಾಂಡ್ ವಿರುದ್ಧ ಮತ್ತೆ ಸಿಡಿದೆದ್ದ ಅಮರೀಂದರ್ ಸಿಂಗ್: ಬಿಗ್ ಚಾಲೆಂಜ್!
ಪ್ರಧಾನಿ ನರೇಂದ್ರ ಮೋದಿಗೆ ಪೈಪೋಟಿ ನೀಡಬಲ್ಲ ನಾಯಕಿ ಮಮತಾ ಬ್ಯಾನರ್ಜಿ. ಪಶ್ಚಿಮ ಬಂಗಳಾ ಚುನಾವಣೆಗೆ(Election) ನರೇಂದ್ರ ಮೋದಿ(Narendra Modi) 200 ಸಭೆ, ಮಾತುಕತೆ, ರ್ಯಾಲಿ ಮಾಡಿದ್ದಾರೆ. ಅಮಿತ್ ಶಾ(Amit shah) 250 ಸಭೆಗಳನ್ನು ಮಾಡಿದ್ದಾರೆ. ಇನ್ನು ಕೇಂದ್ರ ಸರ್ಕಾರ ಸಿಬಿಐ, ಐಟಿ ಮೂಲಕ ಮಮತಾ ಬ್ಯಾನರ್ಜಿ ಆತ್ಮವಿಶ್ವಾಸ ಕುಗ್ಗಿಸುವ ಕಾರ್ಯ ಮಾಡಿದೆ. ಆದರೆ ಮಮತಾ ಬ್ಯಾನರ್ಜಿ ಭರ್ಜರಿ ಬಹುಮತದೊಂದಿದಿಗೆ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈ ಹೋರಾಟವೇ ಎಲ್ಲರಿಗೂ ಮಾದರಿಯಾಗಿದೆ ಎಂದು ಲ್ಯೂಜಿನ್ಹೊ ಫಲೆರೋ ಹೇಳಿದ್ದಾರೆ.
4 ವರ್ಷಗಳ ಸಂಘರ್ಷ, ಕ್ಯಾಪ್ಟನ್ ಕೆಳಗಿಳಿಸಿದ ಸಿಧು!
ಕಾಂಗ್ರೆಸ್ ಪಕ್ಷ, ಸಮಾನ ಪಕ್ಷಗಳ ಜೊತೆಯಾಗಿ ಬಿಜೆಪಿ ವಿರುದ್ಧ ಹೋರಾಡಬೇಕಿದೆ. ಇದಕ್ಕಾಗಿ ಕಾಂಗ್ರೆಸ್ ತನ್ನ ಮೈತ್ರಿ ನೀತಿಯನ್ನು ಮರು ಚಿಂತಿಸಬೇಕಿದೆ ಎಂದಿದ್ದಾರೆ. ಇಷ್ಟು ಹೇಳಿದ್ದೆ ತಡ, ಗೋವಾ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ತೃಣಮೂಲ ಕಾಂಗ್ರೆಸ್ ಕುರಿತು ಒಲವು ತೋರಿದ ಲ್ಯೂಜಿನ್ಹೊ ಫಲೆರೋ ವಿರುದ್ಧ ಗೋವಾ ಕಾಂಗ್ರೆಸ್ಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್‌ಗೂ ದೂರು ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಲ್ಯೂಜಿನ್ಹೊ ಫಲೆರೋ ಕಾಂಗ್ರೆಸಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ಲ್ಯೂಜಿನ್ಹೊ ಫಲೆರೋ ತೃಣಮೂಲ ಕಾಂಗ್ರೆಸ್ ಸೇರುವ ಕುರಿತು ಯಾವುದೇ ಆಧಿಕೃತ ಹೇಳಿಕೆ ನೀಡಿಲ್ಲ. ಸದ್ಯದ ಬೆಳವಣಿಗೆ ನೋಡಿದರೆ ಲ್ಯೂಜಿನ್ಹೊ ಫಲೆರೋ ಟಿಎಂಸಿ ಸೇರುವುದು ಪಕ್ಕಾ ಆಗಿದೆ. ಟಿಎಂಸಿ ಹಿರಿಯ ನಾಯಕ ಡರೆಕ್ ಒಬ್ರಿಯಾನ್ ಟ್ವಿಟರ್‌ನಲ್ಲಿ ಲ್ಯೂಜಿನ್ಹೊ ಫಲೆರೋ ಅವರನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಮೊದಲ ಸುತ್ತಿನ ಮಾತುಕತೆಗಳು ನಡೆದಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ