One Nation One Health ID: ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ಗೆ ಚಾಲನೆ ಕೊಟ್ಟ ಮೋದಿ!

By Suvarna News  |  First Published Sep 27, 2021, 12:43 PM IST

* ದೇಶದ ಪ್ರತಿ ಪ್ರಜೆಗೂ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್‌ ಕಾರ್ಡ್‌

* ‘ಪ್ರಧಾನ ಮಂತ್ರಿ ಡಿಜಿಟಲ್‌ ಹೆಲ್ತ್‌ ಮಿಷನ್‌’ ಯೋಜನೆಗೆ ಚಾಲನೆ

* ಗುಣಮಟ್ಟದ, ಸುಲಲಿತ, ಸಮಗ್ರ, ಅಗ್ಗದ ಮತ್ತು ಸುರಕ್ಷಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶ


ನವದೆಹಲಿ(ಸೆ.27): ದೇಶದ ಪ್ರತಿ ಪ್ರಜೆಗೂ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್‌ ಕಾರ್ಡ್‌(Digital Card) ವಿತರಿಸುವ ‘ಪ್ರಧಾನ ಮಂತ್ರಿ ಡಿಜಿಟಲ್‌ ಹೆಲ್ತ್‌ ಮಿಷನ್‌’(Pradhan Mantri Digital Health Mission) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೇಶದ ಪ್ರತಿ ಪ್ರಜೆಗೂ ಗುಣಮಟ್ಟದ, ಸುಲಲಿತ, ಸಮಗ್ರ, ಅಗ್ಗದ ಮತ್ತು ಸುರಕ್ಷಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. 

ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ PM Modi Health ID Card ಜಾರಿಗೊಳಿಸುವ ಬಗ್ಗೆ ಘೋಷಿಸಿಷದ್ದರು. (Health ID Card)ನ್ನು ಆರೋಗ್ಯ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಇದಕ್ಕೂ ಮುನ್ನ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯವರು ಪ್ರಧಾನಮಂತ್ರಿಯವರು ಆರಂಭಿಸಿದ ಡಿಜಿಟಲ್ ಇಂಡಿಯಾದ ಪ್ರಯಾಣ ಇಂದು ಆರೋಗ್ಯ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ಪಡೆಯುತ್ತಿದೆ ಎಂದು ಹೇಳಿದರು. ಈ ಯೋಜನೆ ಆರೋಗ್ಯ ಕ್ಷೇತ್ರಕ್ಕೆ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಮಾಧ್ಯಮವಾಗಿ ಪರಿಣಮಿಸಲಿದೆ.

Tap to resize

Latest Videos

undefined

ಏನಿದು ಯೋಜನೆ? ಲಾಭವೇನು?

ಪ್ರಧಾನಮಂತ್ರಿ ಡಿಜಿಟಲ್‌ ಆರೋಗ್ಯ ಮಿಷನ್‌ ಯೋಜನೆಯಡಿ(NDHM) ದೇಶದ ಪ್ರತಿಯೊಬ್ಬರಿಗೂ ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆ ರೀತಿ ವಿಶೇಷ ಗುರುತಿನ ಚೀಟಿ ವಿತರಿಸಲಾಗುತ್ತದೆ. ಈ ಗುರುತಿನ ಚೀಟಿಯು ವ್ಯಕ್ತಿಯೊಬ್ಬರ ಆರೋಗ್ಯ ಕುರಿತಾದ ಮಾಹಿತಿ ಒಳಗೊಂಡಿರಲಿದೆ. ಅಂದರೆ ಕಾರ್ಡ್‌ ವಿತರಿಸಿದ ಬಳಿಕ ಆ ವ್ಯಕ್ತಿ ದೇಶದ ಯಾವುದೇ ವೈದ್ಯರನ್ನು ಭೇಟಿ ಮಾಡಿದ ವಿಷಯ, ಅವರು ಆತನಿಗೆ ನೀಡಿದ ಚಿಕಿತ್ಸೆ, ವೈದ್ಯಕೀಯ ವರದಿಗಳು, ಕಾಯಿಲೆಗಳು ಸೇರಿದಂತೆ ಆತನ ಎಲ್ಲಾ ಆರೋಗ್ಯದ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಕಾರ್ಡ್‌ನ ಅನ್ನು ಆತ ತನ್ನ ಮುಂದಿನ ಯಾವುದೇ ವೈದ್ಯರ ಭೇಟಿ ವೇಳೆ ತೋರಿಸಿದರೆ ಅವರಿಗೆ ರೋಗಿಯ ಎಲ್ಲಾ ಪೂರ್ವಾಪರ ತಿಳಿಯುತ್ತದೆ. ಇದರಿಂದ ರೋಗಿ ಹೋದಲ್ಲೆಲ್ಲಾ ತನ್ನ ದಾಖಲೆಗಳನ್ನು ಹೊತ್ತೊಯ್ಯುವ ಪ್ರಮೇಯ ತಪ್ಪುತ್ತದೆ.

PM Shri launches Ayushman Bharat Digital Mission. https://t.co/5U3inZjnFy

— BJP (@BJP4India)

ಭಾರತದಲ್ಲಿ ಆರೋಗ್ಯ ಸೌಲಭ್ಯಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳು

ಕಳೆದ ಏಳು ವರ್ಷಗಳಲ್ಲಿ ದೇಶದ ಆರೋಗ್ಯ ಸೌಲಭ್ಯ ಬಲಪಡಿಸುವ ಅಭಿಯಾನ ಇಂದಿನಿಂದ ಹೊಸ ಹಂತವನ್ನು ಪ್ರವೇಶಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಇಂದು ಒಂದು ಮಿಷನ್ ಆರಂಭವಾಗುತ್ತಿದೆ, ಇದು ಭಾರತದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಕ ಶಕ್ತಿಯನ್ನು ಹೊಂದಿದೆ. ಇಂದಿನಿಂದ ದೇಶಾದ್ಯಂತ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಕೂಡ ಆರಂಭವಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಮಿಷನ್ ದೇಶದ ಬಡ ಮತ್ತು ಮಧ್ಯಮ ವರ್ಗದವರ ಚಿಕಿತ್ಸೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಆಯುಷ್ಮಾನ್ ಭಾರತ್ - ಡಿಜಿಟಲ್ ಮಿಷನ್, ಈಗ ದೇಶಾದ್ಯಂತದ ಆಸ್ಪತ್ರೆಗಳ ಡಿಜಿಟಲ್ ಆರೋಗ್ಯ ಸೊಲ್ಯೂಷನ್ಸ್ ಪರಸ್ಪರ ಸಂಪರ್ಕಿಸುತ್ತದೆ. ಇದರ ಅಡಿಯಲ್ಲಿ, ದೇಶದ ಜನರು ಈಗ ಡಿಜಿಟಲ್ ಆರೋಗ್ಯ ID ಯನ್ನು ಪಡೆಯುತ್ತಾರೆ. ಪ್ರತಿಯೊಬ್ಬ ನಾಗರಿಕನ ಆರೋಗ್ಯ ದಾಖಲೆಯನ್ನು ಡಿಜಿಟಲ್ ಮೂಲಕ ರಕ್ಷಿಸಲಾಗುವುದು.

ಇ-ಸಂಜೀವಿನಿಯ ವಿಸ್ತರಣೆ

ಅಲ್ಲದೇ ಕೊರೋನಾ ಅವಧಿಯಲ್ಲಿ ಟೆಲಿಮೆಡಿಸಿನ್ ಅಭೂತಪೂರ್ವವಾಗಿ ವಿಸ್ತರಿಸಿದೆ. ಇಲ್ಲಿಯವರೆಗೆ ಸುಮಾರು 125 ಕೋಟಿ ರಿಮೋಟ್ ಕನ್ಸಲ್ಟೇಷನ್ ಇ-ಸಂಜೀವನಿ ಮೂಲಕ ಪೂರ್ಣಗೊಳಿಸಲಾಗಿದೆ. ಈ ಸೌಲಭ್ಯವು ದೇಶದ ದೂರದ ಭಾಗಗಳಲ್ಲಿ ವಾಸಿಸುತ್ತಿರುವ ಸಾವಿರಾರು ದೇಶವಾಸಿಗಳನ್ನು ಪ್ರತಿದಿನವೂ ನಗರದ ದೊಡ್ಡ ಆಸ್ಪತ್ರೆಗಳ ವೈದ್ಯರೊಂದಿಗೆ ಮನೆಯಲ್ಲಿಯೇ ಕುಳಿತು ಸಂಪರ್ಕಿಸುತ್ತಿದೆ ಎಂದಿದ್ದಾರೆ.

ಪ್ರಪಂಚದಲ್ಲಿ ಎಲ್ಲಿಯೂ ಈ ಬೃಹತ್ ಡಿಜಿಟಲ್ ಮೂಲಸೌಕರ್ಯವಿಲ್ಲ

ಇನ್ನು 130 ಕೋಟಿ ಆಧಾರ್ ಸಂಖ್ಯೆಗಳು, 118 ಕೋಟಿ ಮೊಬೈಲ್ ಚಂದಾದಾರರು, ಸುಮಾರು 80 ಕೋಟಿ ಇಂಟರ್ನೆಟ್ ಬಳಕೆದಾರರು, ಸುಮಾರು 43 ಕೋಟಿ ಜನ್ ಧನ್ ಬ್ಯಾಂಕ್ ಖಾತೆಗಳು, ಪ್ರಪಂಚದಲ್ಲಿ ಎಲ್ಲಿಯೂ ಅಂತಹ ದೊಡ್ಡ ಸಂಪರ್ಕ ಮೂಲಸೌಕರ್ಯಗಳಿಲ್ಲ. ಈ ಡಿಜಿಟಲ್ ಮೂಲಸೌಕರ್ಯವು ಪಡಿತರದಿಂದ ಆಡಳಿತಕ್ಕೆ ಸಾಮಾನ್ಯ ಭಾರತೀಯರಿಗೆ ವೇಗವಾಗಿ, ಪಾರದರ್ಶಕವಾಗಿ ಪರಿವರ್ತನೆಗೊಳ್ಳುತ್ತಿದೆ. ಭಾರತದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು, ಗ್ರಾಮದಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸುವುದು ಬಹಳ ಮುಖ್ಯ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳೊಂದಿಗೆ ಸಶಕ್ತಗೊಳಿಸಲಾಗುತ್ತಿದೆ, ಇಂತಹ 80 ಸಾವಿರ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ.

ಈ ಯೋಜನೆ ಈಗ ಕೆಲವು ರಾಜ್ಯಗಳಿಗೆ ಸೀಮಿತ

ಈ ಆರೋಗ್ಯ ಗುರುತಿನ ಚೀಟಿಯನ್ನು ಮೊದಲು 6 ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭಿಸಲಾಯಿತು (ಅಂಡಮಾನ್ ಮತ್ತು ನಿಕೋಬಾರ್, ಚಂಡೀಗ Chandigarh, ಲಡಾಖ್, ಲಕ್ಷದ್ವೀಪ, ಪುದುಚೇರಿ, ದಾದ್ರಾ ನಗರ ಹವೇಲಿ ಮತ್ತು ದಮನ್ ದಿಯು). ಈಗ ಇದನ್ನು ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ. ಆರೋಗ್ಯ ID ಕಾರ್ಡ್‌ನ ಡೇಟಾ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂಬುವುದು ಇನ್ನೊಂದು ವಿಶೇಷ. 

ಮೂರು ವೇದಿಕೆ:

ಹೊಸ ಯೋಜನೆಯ ಮುಖ್ಯವಾಗಿ ಮೂರು ವೇದಿಕೆಗಳಡಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯದ ಐಡಿ, ವೈದ್ಯರ ರಿಜಿಸ್ಟ್ರಿ ಮತ್ತು ಆರೋಗ್ಯ ಸೌಕರ್ಯಗಳ ರಿಜಿಸ್ಟ್ರಿ.

click me!