ಆರೆಸ್ಸೆಸ್‌ ಕಚೇರಿ, ಮುಖಂಡರ ಮೇಲೆ ಜಾಗತಿಕ ಉಗ್ರರ ಕಣ್ಣು!

Published : Feb 11, 2020, 09:10 AM IST
ಆರೆಸ್ಸೆಸ್‌ ಕಚೇರಿ, ಮುಖಂಡರ ಮೇಲೆ ಜಾಗತಿಕ ಉಗ್ರರ ಕಣ್ಣು!

ಸಾರಾಂಶ

ಆರೆಸ್ಸೆಸ್‌ ಕಚೇರಿ, ಮುಖಂಡರ ಮೇಲೆ ಜಾಗತಿಕ ಉಗ್ರರ ಕಣ್ಣು: ಗುಪ್ತದಳ| ಉಗ್ರಗಾಮಿಗಳು ಇವರ ಮೇಲೆ ಸುಧಾರಿತ ಸ್ಫೋಟಕಗಳು (ಐಇಡಿ) ಅಥವಾ ಐಇಡಿ ತುಂಬಿದ ವಾಹನಗಳನ್ನು ಬಳಸಿ ದಾಳಿ 

ನವದೆಹಲಿ[ಫೆ.11]: ಆರೆಸ್ಸೆಸ್‌ ಮುಖಂಡರು ಹಾಗೂ ಆರೆಸ್ಸೆಸ್‌ ಕಚೇರಿಗಳಿಗೆ ಜಾಗತಿಕ ಭಯೋತ್ಪಾದಕ ಸಂಘಟನೆಗಳ ಬೆದರಿಕೆ ಇದೆ. ಉಗ್ರಗಾಮಿಗಳು ಇವರ ಮೇಲೆ ಸುಧಾರಿತ ಸ್ಫೋಟಕಗಳು (ಐಇಡಿ) ಅಥವಾ ಐಇಡಿ ತುಂಬಿದ ವಾಹನಗಳನ್ನು ಬಳಸಿ ದಾಳಿ ಮಾಡಬಹುದು ಎಂದು ಗುಪ್ತಚರ ದಳÜ ಎಚ್ಚರಿಕೆ ನೀಡಿದೆ.

ಮಹಾರಾಷ್ಟ್ರ, ಪಂಜಾಬ್‌, ದಿಲ್ಲಿ, ಉತ್ತರಪ್ರದೇಶ, ಅಸ್ಸಾಂ, ರಾಜಸ್ಥಾನ- ಮುಂತಾದೆಡೆ ಈ ದಾಳಿ ನಡೆಯಬಹುದು. ಜಾಗತಿಕ ಉಗ್ರಗಾಮಿ ಸಂಘಟನೆಗಳಿಗೆ ಸೇರಿದ ಈ ಅನಾಮಿಕ ಭಯೋತ್ಪಾದಕರು ಆರೆಸ್ಸೆಸ್‌ ಕಚೇರಿಗಳು, ಆರೆಸ್ಸೆಸ್‌ ನಾಯಕರು ಹಾಗೂ ಪೊಲೀಸ್‌ ಠಾಣೆ ಮೇಲೆ ಮುಂಬರುವ ದಿನಗಳಲ್ಲಿ ದಾಳಿ ನಡೆಸಬಹುದು ಎಂಬ ಮಾಹಿತಿ ಇದೆ. ಹೀಗಾಗಿ ಎಲ್ಲ ರಾಜ್ಯ ಸರ್ಕಾರಗಳು ಸೂಕ್ತ ಭದ್ರತಾ ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಇದರ ಬೆನ್ನಲ್ಲೇ ಈ ರಾಜ್ಯಗಳ ಆರೆಸ್ಸೆಸ್‌ ಮುಖಂಡರು ಹಾಗೂ ಕಚೇರಿಗಳ ಭದ್ರತೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!