PM Narendra Modi: ನಿಮ್ಮ ಒಳ್ಳೆಯ ಕೆಲಸಗಳಿಂದ ಚುನಾವಣೆಯಲ್ಲಿ ಗೆಲುವು ಸಿಕ್ಕಿದೆ. ನಮ್ಮ ಜನರ ಯೋಗಕ್ಷೇಮ ಮತ್ತು ಅವರ ಒಳಿತಿಗಾಗಿ ಎರಡೂ ಪಕ್ಷಗಳು ಜೊತೆಯಾಗಿ ಕೆಲಸ ಮಾಡೋದು ಮುಂದುವರಿಯೋದು ದೃಢವಾಗಿದೆ ಎಂದು ಜಾರ್ಜಿಯಾ ಮೆಲೋನಿ ತಿಳಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (NDA Alliance) ಮತ್ತೊಮ್ಮೆ ಸರ್ಕಾರ ರಚನೆ ಮಾಡಲು ಮುಂದಾಗಿದ್ದು, ಈ ಹಿನ್ನೆಲೆ ವಿದೇಶಿ ಗಣ್ಯರು ನರೇಂದ್ರ ಮೋದಿಯವರಿಗೆ (PM Narendra Modi) ಶುಭಾಶಯ ತಿಳಿಸಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯಿಂದ (Prime Minister of Italy Giorgia Meloni) ಮಾಲ್ಡಿವ್ಸ್ ಪ್ರಧಾನಿಯವರೆಗೂ ಎಲ್ಲರೂ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. ನಿಮ್ಮ ಒಳ್ಳೆಯ ಕೆಲಸಗಳಿಂದ ಚುನಾವಣೆಯಲ್ಲಿ ಗೆಲುವು ಸಿಕ್ಕಿದೆ. ನಮ್ಮ ಜನರ ಯೋಗಕ್ಷೇಮ ಮತ್ತು ಅವರ ಒಳಿತಿಗಾಗಿ ಎರಡೂ ಪಕ್ಷಗಳು ಜೊತೆಯಾಗಿ ಕೆಲಸ ಮಾಡೋದು ಮುಂದುವರಿಯೋದು ದೃಢವಾಗಿದೆ ಎಂದು ಜಾರ್ಜಿಯಾ ಮೆಲೋನಿ ತಿಳಿಸಿದ್ದಾರೆ.
ರಿಪಬ್ಲಿಕ್ ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗನೌಥ್, ಮೂರನೇ ಬಾರಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯಗಳು. ನಿಮ್ಮ ನೇತೃತ್ವದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಗಮನಾರ್ಹವಾಗಿ ಪ್ರಗತಿ ಮುಂದುವರಿಯಲಿದೆ. ಮಾರಿಷಸ್-ಭಾರತ ವಿಶೇಷ ಸಂಬಂಧ ಚಿರಾಯುವಾಗಿರುತ್ತದೆ ಎಂದು ಆಶಿಸಿದ್ದಾರೆ.
undefined
ಮಲ್ಲಿಕಾರ್ಜುನ ಖರ್ಗೆಯವರ 'ಆ' ಮಾತಿಗೆ ಮೇಜು ತಟ್ಟಿದ ಸೋನಿಯಾ ಗಾಂಧಿ
ನೇಪಾಳದ ಪ್ರಧಾನ ಮಂತ್ರಿ ಕಾಮ್ರೆಡ್ ಪ್ರಚಂಡ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿನ ನೇತೃತ್ವದ ಎನ್‌ಡಿಎ ಮೂರನೇ ಅವಧಿಯಲ್ಲಿಯೂ ಯಶಸ್ಸು ಸಾಧಿಸಿರೋದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯರ ಉತ್ಸಾಹಕ್ಕೆ ಕಂಡು ನಮಗೆ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಭೂತಾನ್ ಪ್ರಧಾನ ಮಂತ್ರಿ ತ್ಶೆರಿಂಗ್ ತೊಬ್ಗೇ, ವಿಶ್ವದ ಅತಿದೊಡ್ಡ ಚುನಾವಣೆಯಲ್ಲಿ ಮೂರನೇ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಿದ ನನ್ನ ಗೆಳೆಯ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಪಕ್ಷಕ್ಕೆ ಅಭಿನಂದನೆಗಳು. ಗೆಳೆಯ ನರೇಂದ್ರ ಮೋದಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಭವಿಷ್ಯದಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲವಾಗಲಿದೆ ಎಂದು ಆಶಿಸುತ್ತೇನೆ. ನಿಮ್ಮ ಜೊತೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಕಿಂಗ್ ಮೇಕರ್ ಚಂದ್ರಬಾಬು ನಾಯ್ಡು ಸುದ್ದಿಗೋಷ್ಠಿ: ಬೆಂಬಲದ ಬಗ್ಗೆ ಮಹತ್ವದ ಘೋಷಣೆ
ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಎಕ್ಸ್ ಖಾತೆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ. ನರೇಂದ್ರ ಮೋದಿಯವರ ಸಾರಥ್ಯದಲ್ಲಿ ದೇಶದ ಅಭಿವೃದ್ಧಿ ಹಾಗೂ ಸಮೃದ್ಧಿ ಕಾಣುತ್ತಿರೋದನ್ನು ಎನ್‌ಡಿಎ ತನ್ನ ಗೆಲುವಿನ ಮೂಲಕ ತೋರಿಸಿದೆ. ಶ್ರೀಲಂಕಾ ಭಾರತದ ನೆರೆಯ ರಾಷ್ಟ್ರವಾಗಿದ್ದು, ಭಾರತ ಸ್ನೇಹವನ್ನು ಎದುರು ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಎಕ್ಸ್ ಖಾತೆಯಲ್ಲಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎಗೆ ನಮ್ಮ ಅಭಿನಂದನೆಗಳು. ಉಭಯ ದೇಶಗಳ ಏಳಿಗೆಗಾಗಿ ಜೊತೆಯಾಗಿ ಕೆಲಸ ಮಾಡಲು ಮಾಲ್ಡೀವ್ಸ್ ಉತ್ಸುಕದಲ್ಲಿದೆ ಎಂದು ಹೇಳಿಕೊಂಡಿದ್ದಾರೆ.