ಕಿಂಗ್ ಮೇಕರ್ ಚಂದ್ರಬಾಬು ನಾಯ್ಡು ಸುದ್ದಿಗೋಷ್ಠಿ: ಬೆಂಬಲದ ಬಗ್ಗೆ ಮಹತ್ವದ ಘೋಷಣೆ

By Suvarna News  |  First Published Jun 5, 2024, 11:11 AM IST

ನವದೆಹಲಿ: ಪ್ರಸ್ತುತ ರಾಜಕಾರಣದಲ್ಲಿ ಕಿಂಗ್ ಮೇಕರ್ ಆಗಿರುವ ಚಂದ್ರಬಾಬು ನಾಯ್ಡು ಸುದ್ದಿಗೋಷ್ಠಿ ನಡೆಸಿದ್ದು ತಮ್ಮ ಮುಂದಿನ ನಡೆಯ ಬಗ್ಗೆ ತಿಳಿಸಿದ್ದಾರೆ. ಆ ಬಗ್ಗೆ ಡಿಟೇಲ್ಸ್ ಇಲ್ಲಿದೆ.
 


ನವದೆಹಲಿ: ಪ್ರಸ್ತುತ ರಾಜಕಾರಣದಲ್ಲಿ ಕಿಂಗ್ ಮೇಕರ್ ಆಗಿರುವ ಚಂದ್ರಬಾಬು ನಾಯ್ಡು ಸುದ್ದಿಗೋಷ್ಠಿ ನಡೆಸಿದ್ದು ತಮ್ಮ ಮುಂದಿನ ನಡೆಯ ಬಗ್ಗೆ ತಿಳಿಸಿದ್ದಾರೆ. ಆ ಬಗ್ಗೆ ಡಿಟೇಲ್ಸ್ ಇಲ್ಲಿದೆ. ನಾನು ಎನ್‌ಡಿಎ ಮೈತ್ರಿಕೂಟದಲ್ಲಿ ಇದ್ದೇನೆ, ಇಂದು ದೆಹಲಿಗೆ ಹೋಗಲಿದ್ದೇನೆ, ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ಚಂದ್ರಬಾಬು ನಾಯ್ಡು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚಂದ್ರಬಾಬು ನಾಯ್ಡುರಿಂದ ಸ್ಪೀಕರ್ ಸ್ಥಾನಕ್ಕೆ ಬೇಡಿಕೆ

Tap to resize

Latest Videos

ಹೊಸ ಸರ್ಕಾರದಲ್ಲಿ ಸ್ಪೀಕರ್ ಸ್ಥಾನಕ್ಕೆ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಬೇಡಿಕೆ ಇರಿಸಿದ್ದಾರೆ. ಲೋಕಸಭೆಯಲ್ಲಿ ಟಿಡಿಪಿ ಪಕ್ಷದ‌ ಸಂಸದರನ್ನ ಸ್ಪೀಕರ್ ಮಾಡಬೇಕು. ಸಂಪುಟದಲ್ಲಿ ಟಿಡಿಪಿಗೆ ಒಂದು ಅಥವಾ ಎರಡು ಸ್ಥಾನ ನೀಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ. ಕೇಂದ್ರದಲ್ಲಿ ಅಟಲ್ ಸರ್ಕಾರ ಇದ್ದಾಗ ಟಿಡಿಪಿ ಸಂಸದರಾಗಿದ್ದ ಜಿ ಎಂ ಬಾಲಯೋಗಿ ಸ್ಪೀಕರ್ ಆಗಿದ್ದರು ಎಂದು ಚಂದ್ರ ಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ.

ಇದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಚುನಾವಣೆ

ನನ್ನ ಜೀವನದಲ್ಲಿ, ಕಳೆದ ಐದು ವರ್ಷಗಳಲ್ಲಿ ಇಂತಹ ಸರ್ಕಾರವನ್ನು ನಾನು ಎಂದು ನೋಡಿಲ್ಲ.  ಎಲ್ಲಾ ವ್ಯವಸ್ಥೆಗಳು ನಾಶವಾದವು,  ಜನರೇ ಗೆಲ್ಲಬೇಕು, ರಾಜ್ಯ ನಿಲ್ಲಬೇಕು ಎಂಬ ಘೋಷಣೆಯೊಂದಿಗೆ ನಾವು ಸಾಗಿದೆವು. ರಾಜಕೀಯದಲ್ಲಿ ಏಳುಬೀಳುಗಳಿವೆ,  ಯಾವುದೂ ಶಾಶ್ವತವಲ್ಲ.  ಜನರು ತಮಗೆ ಇಷ್ಟ ಬಂದಂತೆ ನಡೆದುಕೊಂಡರೆ ರಾಜಕೀಯ ಪಕ್ಷಗಳು ಕಣ್ಮರೆಯಾಗುತ್ತವೆ.  ಎಲ್ಲೋ ದೂರದಲ್ಲಿರುವವರು, ಕೂಲಿ ಕೆಲಸ ಮಾಡುವವರು ಕಷ್ಟಪಟ್ಟು ಬಂದು ಮತ ಹಾಕಿದರು.  ಟಿಡಿಪಿ ಇತಿಹಾಸದಲ್ಲಿ, ಆಂಧ್ರಪ್ರದೇಶ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಚುನಾವಣೆಗಳಿವು ಎಂದು ನಾಯ್ಡು ಹೇಳಿದ್ದಾರೆ.

ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಸ್ಮರಿಸಿದ ನಾಯ್ಡು

ಈ ಹಿಂದೆ ಜನರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ.  ಈ ಚುನಾವಣೆಯನ್ನು ಹೇಗೆ ವಿವರಿಸಬೇಕೆಂದು ನನಗೆ ತಿಳಿದಿಲ್ಲ, ನಮಗೆ ಸಿಕ್ಕಿರುವುದು ಅಧಿಕಾರವಲ್ಲ, ಜವಾಬ್ದಾರಿ, ಜನರು ದುರಹಂಕಾರ, ಸರ್ವಾಧಿಕಾರ  ಸಹಿಸುವುದಿಲ್ಲ,  ಜನ ತಕ್ಕ ಪಾಠ ಕಲಿಸಿದ್ದಾರೆ.  ಐದು ವರ್ಷಗಳ ಕಾಲ ನಾವು ಅನೇಕ ಕಷ್ಟಗಳನ್ನು ಎದುರಿಸಿದ್ದೇವೆ.  ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದೆವು.  ಜೈ ತೆಲುಗು ದೇಶಂ ಎಂದು ಘೋಷಣೆ ಕೂಗಿದ ಚಂದ್ರಯ್ಯ ಅವರಂತಹ ಕಾರ್ಯಕರ್ತರನ್ನು ಹೇಗೆ ಮರೆಯಲು ಸಾಧ್ಯ ಎಂದ ಚಂದ್ರಬಾಬು ನಾಯ್ಡು ತಮ್ಮ ಗೆಲುವಿಗಾಗಿ ದುಡಿದ ಕಾರ್ಯಕರ್ತರನ್ನು ಸ್ಮರಿಸಿದರು.

click me!