ಒಪ್ಪತ್ತು ಊಟ ಬಿಡಿ: ಬಿಜೆಪಿ ಕಾರ್ಯಕರ್ತರಿಗೆ ನಡ್ಡಾ ಕರೆ| ಲಾಕ್‌ಡೌನ್‌ನಿಂದ ಹಸಿದವರಿಗೆ ಸಾಂತ್ವನ ಹೇಳಲು ಸಲಹೆ
ನವದೆಹಲಿ(ಏ.07): ‘ಕೊರೋನಾ ವೈರಸ್‌ನಿಂದ ಲಾಕ್‌ಡೌನ್ ಘೋಷಣೆಯಾಗಿರುವ ಕಾರಣ ತೊಂದರೆಗೆ ಒಳಗಾದವರಿಗೆ ‘ನಿಮ್ಮ ಜತೆಗೆ ನಾವಿದ್ದೇವೆ’ ಎಂಬ ಸಂದೇಶವನ್ನು ರವಾನಿಸಬೇಕು. ಪ್ರತಿ ಬಿಜೆಪಿ ಕಾರ್ಯಕರ್ತರು ಪಕ್ಷದ ಸಂಸ್ಥಾಪನಾ ದಿನವಾದ ಸೋಮವಾರ ಒಂದು ಹೊತ್ತಿನ ಊಟ ಬಿಟ್ಟು ಈ ಸಂದೇಶವನ್ನು ನೀಡಬೇಕು’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕರೆ ನೀಡಿದ್ದಾರೆ.
ಈ ನಡುವೆ, ನಡ್ಡಾ ನೀಡಿದ ಕರೆಗಳನ್ನು ಪಾಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರೂ ಟ್ವೀಟರ್‌ನಲ್ಲಿ ಕೋರಿದ್ದಾರೆ.
ಬಿಜೆಪಿ ಕಾರ್ಯಕರ್ತರಿಗೆ 5 ಟಾಸ್ಕ್ ನೀಡಿದ ಮೋದಿ!
ನಡ್ಡಾ ಕರೆಗಳು:
ಅಗತ್ಯ ಇದ್ದವರಿಗೆ ಬಿಜೆಪಿ ಕಾರ್ಯಕರ್ತರು ಆಹಾರ ಪೊಟ್ಟಣ ವಿತರಿಸಬೇಕು.
ತುರ್ತು ಸಂದರ್ಭದಲ್ಲಿ ಕೆಲಸ ಮಾಡುತ್ತಿರುವರಿಗೆ ಪ್ರೇರಣೆ ನೀಡಲು ಜನರಿಂದ ಸಹಿ ಸಂಗ್ರಹ ಮಾಡಬೇಕು.
ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಬೇಕು.
ಸೋಮವಾರದ ಪಕ್ಷದ ಸಂಸ್ಥಾಪನಾ ದಿನ ಬಿಜೆಪಿ ಕಾರ್ಯಕರ್ತರು ಒಪ್ಪತ್ತು ಊಟ ಬಿಡಬೇಕು.
ಲಾಕ್‌ಡೌನ್‌ನಿಂದ ಹಸಿದವರಿಗೆ ಈ ಮೂಲಕ ಸಾಂತ್ವನ ಹೇಳಬೇಕು.
ಎಲ್ಲ ಬಿಜೆಪಿ ಕಾರ್ಯರ್ಕರು ಪ್ರತಿಯೊಬ್ಬರಿಗೆ ಮನೆಯಲ್ಲೇ ತಯಾರಿಸಿದ 2 ಮಾಸ್ಕ್ ವಿತರಿಸಬೇಕು.
ಮಾಸ್ಕ್ ಸಿದ್ಧಪಡಿಸುವಿಕೆ ಹಾಗೂ ಹಂಚಿಕೆಯ ವಿಡಿಯೋ ಬಿಡುಗಡೆ ಮಾಡಬೇಕು. ಪಿಎಂ ಕೇರ್ಸ್ ನಿಧಿಗೆ ಇತರರು 100 ರು. ದೇಣಿಗೆ ನೀಡುವಂತೆ ಪ್ರೇರೇಪಿಸಬೇಕು ಎಂದು ನಡ್ಡಾ ಕೇಳಿಕೊಂಡಿದ್ದಾರೆ